ಶರತ್ ಚಂದ್ರ
ಮೊನ್ನೆ ಶುಕ್ರವಾರ ಬಿಡುಗಡೆಯಾದ' ಎಕ್ಕ ಚಿತ್ರ ರಾಜ್ಯಾದ್ಯಂತ ಸಕತ್ ಸದ್ದು ಮಾಡುತ್ತಿದೆ. ಸದ್ಯದ ಬಾಕ್ಸಾಫೀಸ್ ಕಲೆಕ್ಷನ್ ಗಮನಿಸಿದರೆ,ಎಕ್ಕ ಚಿತ್ರ ಈ ವರ್ಷದ ಅತೀ ದೊಡ್ಡ ಸೂಪರ್ ಹಿಟ್ ಚಿತ್ರ ಅನ್ನಿಸಿಕೊಳ್ಳುವುದು ಪಕ್ಕಾ.
ಚಿತ್ರದಲ್ಲಿ ಯುವರಾಜ್ ಕುಮಾರ್ ಅಭಿನಯಕ್ಕೆ ಮಾತ್ರವಲ್ಲದೆ ಸಿನಿಮಾದಲ್ಲಿ ಅಭಿನಯಿಸಿರುವ ಬೇರೆ ನಟ ನಟಿಯರ ಅಭಿನಯವನ್ನು ಕೂಡ ಸಿನಿಪ್ರೇಕ್ಷಕರು ಮೆಚ್ಚಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಾಕಿಯರಿದ್ದು, ಮೊದಲರ್ಧದಲ್ಲಿ ಸಂಜನಾ ಆನಂದ್ ತೆರೆ ಮೇಲೆ ಹೆಚ್ಚು ಕಾಣಿಸಿಕೊಂಡರೆ, ಸೆಕೆಂಡ್ ಹಾಫ್ ನಲ್ಲಿ
ಹೊಸ ಪ್ರತಿಭೆ ಸಂಪದ ಹುಲಿವಾನ ಯುವನ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಎಕ್ಕ ಸಿನಿಮಾ, ಸಂಪದಾ ನಟಿಸಿರುವ ಮಲ್ಲಿಕಾ ಎಂಬ ಪಾತ್ರದಿಂದ ಆರಂಭ ಗೊಂಡು,ಮುಕ್ತಾಯವಾಗುವುದು ಕೂಡ ಇದೇ ಪಾತ್ರದಿಂದ.
ಇಂಟರ್ವಲ್ ಮುಂಚೆ ನಾಯಕ ಕ್ಯಾಬ್ ಡ್ರೈವರ್ ಮುತ್ತು ಬಾರ್ ಡ್ಯಾನ್ಸರ್ ನ್ನು ಪ್ರತೀ ರಾತ್ರಿ ಡ್ರಾಪ್ ಮಾಡುವಾಗ, ಮಾಸ್ಕ್ ಹಾಕಿಕೊಂಡಾಗ ಕಣ್ಣಿನಲ್ಲೇ ನಾಯಕ ನ ಬಗ್ಗೆ ಮೆಚ್ಚುಗೆ ಸೂಚಿಸುವ ಸಂಪದಾ ಅಭಿನಯ ಇಷ್ಟ ವಾಗುತ್ತೆ.
ನಾಯಕ ಪರಿಸ್ಥಿತಿಯ ಕೈಗೊಂಬೆಯಾಗಿ ಅಂಡರ್ ವರ್ಲ್ಡ್ ಪ್ರವೇಶಿಸಿದಾಗ ಆತನ ಬಾಳಲಿ ಬಂದು ಪ್ರತೀ ಹಂತದಲ್ಲೂ ಸಾಥ್ ನೀಡುವ ಪಾತ್ರ ಚಿಕ್ಕದಾದರೂ ಆಕೆಯ ಅಭಿನಯ ನೋಡುಗರಿಗೆ ಆಪ್ತ ವಾಗುತ್ತೆ.
ಸುಂದರ ಕಂಗಳ ಸುಂದರಿ ಸಂಪದಾ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ' ಮಿಥುನ ರಾಶಿ ಎಂಬ ದಾರವಾಹಿಯಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸುವುದರ ಮೂಲಕ ನಟನೆಯನ್ನು ಆರಂಭಿಸಿದರು.
ಅನೀಶ್ ನಾಯಕ ನಟನಾಗಿ ನಟಿಸಿದ 'ಬೆಂಕಿ' ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದ
ಸಂಪದಾ, ನಿಖಿಲ್ ಕುಮಾರಸ್ವಾಮಿ ನಾಯಕನಾಗಿ ಅಭಿನಯಿಸಿದ 'ರೈಡರ್ 'ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಆದರೆ ಆ ಚಿತ್ರಗಳು ಅಂತ ಯಶಸ್ಸನ್ನು ಕಂಡಿರಲಿಲ್ಲ.
ಈ ಮಧ್ಯೆ ಶ್ರೀ ಶ್ರೀ ಶ್ರೀ ರಾಜಾವಾರು ಎಂಬ ತೆಲುಗು ಚಿತ್ರದಲ್ಲಿ ನಟಿಸಿರುವ ಸಂಪದಾ 'ಎಕ್ಕ' ಚಿತ್ರಕ್ಕೆ ಎಂಟ್ರಿ ಕೊಡುವ ಮೊದಲು, ಪ್ರಜ್ವಲ್ ದೇವರಾಜ್ ಅಭಿನಯದ 'ಕರಾವಳಿ' ಚಿತ್ರಕ್ಕೆ
ನಾಯಕಿಯಾಗಿ ಆಯ್ಕೆಯಾಗಿದ್ದರು.ಆ ಚಿತ್ರ ಹೆಚ್ಚು ಕಡಿಮೆ ಕಂಪ್ಲೀಟ್ ಅಗಿದ್ದು ಸಧ್ಯದಲ್ಲೇ ಬಿಡುಗಡೆಯಾಗಲಿದೆ.
ಒಟ್ಟಿನಲ್ಲಿ ಕನ್ನಡದ ಪ್ರತಿಷ್ಠಿತ ಬ್ಯಾನರ್ ಗಳ ಅಡಿಯಲ್ಲಿ ನಿರ್ಮಾಣವಾದ ಎಕ್ಕ ಚಿತ್ರದ ಯಶಸ್ಸು ಮತ್ತು ದೊಡ್ಮನೆ ಕುಡಿ ಯುವರಾಜ್ ಕುಮಾರ್ ಜೊತೆ ನಟಿಸಿರುವ ಖುಷಿಯಲ್ಲಿರುವ ಸಂಪದಾಗೆ ಸ್ಯಾಂಡಲ್ ವುಡ್ ನಲ್ಲಿ ಇನ್ನಷ್ಟು ಒಳ್ಳೆಯ ಪಾತ್ರಗಳು ಸಿಗಲಿ.