-  ರಾಘವೇಂದ್ರ ಅಡಿಗ ಎಚ್ಚೆನ್

‘3 ಇಡಿಯಟ್ಸ್’ ಸಿನಿಮಾ ಸೋನಂ ವಾಂಗ್‌ಚುಕ್ ಅವರ ಜೀವನವನ್ನು ಆಧರಿಸಿ ನಿರ್ಮಾಣವಾಗಿದೆ ಎಂಬ ಹಲವು ವರ್ಷಗಳಿಂದ ಹರಿದಾಡುತ್ತಿರುವ ನಂಬಿಕೆಗೆ ಬಾಲಿವುಡ್ ನಟ ಆಮಿರ್ ಖಾನ್ ಅಂತಿಮ ತೆರೆ ಎಳೆದಿದ್ದಾರೆ. ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾತನಾಡಿದ ಅವರು, ಸಿನಿಮಾ ನಿರ್ಮಾಣದ ವೇಳೆ ಚಿತ್ರತಂಡಕ್ಕೆ ಸೋನಂ ವಾಂಗ್‌ಚುಕ್ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ‘3 ಇಡಿಯಟ್ಸ್’ ಚಿತ್ರದಲ್ಲಿ ಚತುರ್ ರಾಮಲಿಂಗಂ (ಸೈಲೆನ್ಸರ್) ಪಾತ್ರದಲ್ಲಿ ನಟಿಸಿದ್ದ ಓಮಿ ವೈದ್ಯ ಅವರು ಸೋನಂ ವಾಂಗ್‌ಚುಕ್ ಅವರಿಗೆ ಬೆಂಬಲ ಸೂಚಿಸಿ, ಅವರ ಜೀವನವೇ ಚಿತ್ರದ ರಾಂಚೋ ಪಾತ್ರಕ್ಕೆ ಸ್ಫೂರ್ತಿ ಎಂದು ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಆಮಿರ್ ಖಾನ್ ಅವರಿಗೆ ಈ ಕುರಿತು ಪ್ರಶ್ನೆ ಕೇಳಲಾಯಿತು.

ಅದಕ್ಕೆ ಉತ್ತರಿಸಿದ ಆಮಿರ್, ‘ಇದು ಸಂಪೂರ್ಣ ತಪ್ಪು ಕಲ್ಪನೆ. ನಾವು ‘3 ಇಡಿಯಟ್ಸ್’ ಸಿನಿಮಾ ನಿರ್ಮಿಸುತ್ತಿದ್ದಾಗ ಸೋನಂ ವಾಂಗ್‌ಚುಕ್ ಅವರ ಬಗ್ಗೆ ನಮಗೆ ತಿಳಿದಿರಲಿಲ್ಲ. ನಿರ್ದೇಶಕ ರಾಜಕುಮಾರ್ ಹಿರಾನಿ ಅಥವಾ ಕಥೆಗಾರ ಅಭಿಜತ್ ಜೋಶಿ ಅವರಿಗೂ ಅವರ ಬಗ್ಗೆ ಮಾಹಿತಿ ಇರಲಿಲ್ಲ. ಓಮಿ ವೈದ್ಯ ಕೂಡ ತಪ್ಪು ಮಾಹಿತಿಯನ್ನೇ ಹಂಚಿಕೊಂಡಿದ್ದಾರೆ’ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಸೋನಂ ವಾಂಗ್‌ಚುಕ್ ಅವರ ಬಗ್ಗೆ ಗೌರವ ವ್ಯಕ್ತಪಡಿಸಿದ ಆಮಿರ್, ‘ಅವರು ಸಮಾಜಕ್ಕಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗೌರವಿಸಲು ‘3 ಇಡಿಯಟ್ಸ್’ ಚಿತ್ರದೊಂದಿಗೆ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ. ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸುಖಾಂತ್ಯ ಕಾಣಲಿ, ಅವರ ಆರೋಗ್ಯ ಸುಧಾರಿಸಲಿ ಎಂಬುದು ನಮ್ಮ ಆಶಯ’ ಎಂದರು.

‘3 ಇಡಿಯಟ್ಸ್’ ಸಿನಿಮಾ ಹಲವು ವರ್ಷಗಳಿಂದ ಸೋನಂ ವಾಂಗ್‌ಚುಕ್ ಅವರ ಜೀವನ ಆಧಾರಿತ ಎಂಬ ನಂಬಿಕೆ ವ್ಯಾಪಕವಾಗಿದ್ದರೂ, ಇದೀಗ ಚಿತ್ರದ ಪ್ರಮುಖ ನಟನೇ ಆ ವದಂತಿಯನ್ನು ಅಧಿಕೃತವಾಗಿ ಅಲ್ಲಗಳೆದಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ