-  ರಾಘವೇಂದ್ರ ಅಡಿಗ ಎಚ್ಚೆನ್.

ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಯನ್ನು ಸುತ್ತೂರು ಮಠಾಧೀಶರಾದ‌ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಮೀಜಿಯವರಿಂದ ಮಾಡಿಸಬೇಕೆಂದು ಕನ್ನಡ ಕ್ರಾಂತಿದಳದ ಅಧ್ಯಕ್ಷರಾದ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.

ಮೈಸೂರು ದಸರಾ ಸಾಂಸ್ಕೃತಿಕ ಜಗತ್ತಿಗೆ ದೊಡ್ಡ ಹಬ್ಬ. ಇಡೀ ಜಗತ್ತೇ ಕಾಯುವ ಕರ್ನಾಟಕದ ಹೆಮ್ಮೆಯ ನಾಡ ಹಬ್ಬ. ದಸರಾ ವೈಭವದ ಜೊತೆಗೆ ಕರ್ನಾಟಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಜಾನಪದ, ಕಲೆ ಸಾಹಿತ್ಯದ ವಿವಿಧತೆಗಳನ್ನು ಏಕರೂಪದಲ್ಲಿ ಪ್ರತಿಬಿಂಬಿಸುತ್ತದೆ. ಈ ಮಹೋತ್ಸವವನ್ನು ಉದ್ಘಾಟನೆ ಮಾಡಲು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಕರೆದು, ಅವರಿಂದ ಉದ್ಘಾಟನೆ ಮಾಡಿಸುವುದು ಸಂಪ್ರದಾಯ.

ಈ ಬಾರಿಯ ದಸರಾ ಮಹೋತ್ಸವವನ್ನು ಉದ್ಘಾಟನೆ ಮಾಡಲು ಸುತ್ತೂರು ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳನ್ನು ಆಹ್ವಾನಿಸ ಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಅವರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಪರಮ ಪೂಜ್ಯರು ತ್ರಿವಿಧ ದಾಸೋಹ ಎಂಬ ಮೂಲ ಮಂತ್ರವನ್ನು ಜೀವನದ ಮೌಲ್ಯ ವಾಗಿಸಿ ತನು ಮನ ಧನಗಳನ್ನು ಸಮರ್ಪಣೆ ಮಾಡುವುದರ ಜೊತೆಗೆ ಕಳೆದ ನಾಲ್ಕು ದಶಕಗಳಿಂದ ಸುತ್ತೂರು ಮಠದ ಪೀಠಾಧಿಪತಿಗಳಾಗಿ ನಾಡಿನ ಜನತೆಗೆ ಮಾತ್ರವಲ್ಲದೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ವಸತಿ ಜೊತೆ ಜೊತೆಗೆ ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವುದರ ಮೂಲಕ ಅವರ ಕುಟುಂಬಗಳ ಆಧಾರ ಸ್ಥಂಭವಾಗಿದ್ದಾರೆ.ಇದಲ್ಲದೆ ಗ್ರಾಮೀಣ ಅಭಿವೃದ್ಧಿ, ಸಾಹಿತ್ಯ, ಕಲೆಗೆ ಪ್ರೋತ್ಸಾಹ, ಸಾಮಾಜಿಕ ಸಾಮರಸ್ಯ, ಮಾನವೀಯ ಮೌಲ್ಯಗಳು, ಅಂಗವಿಕಲರಿಗೂ ಅವಕಾಶಗಳನ್ನು ನೀಡಿ ಅನಾಥ ಹೆಣ್ಣು ಮಕ್ಕಳಿಗೆ ವಸತಿ, ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆದ ಶ್ರೀಗಳು ಸಮಾಜದ ಅಭಿವೃದ್ಧಿ ಸ್ವಾಸ್ಥ್ಯಕ್ಕೆ ಅಡಿಪಾಯರಾಗಿದ್ದಾರೆ.ಇವರ ಸಾಮಾಜಿಕ ಕಾರ್ಯಗಳು ಬೇರೆಯವರಿಗೆ ಮಾದರಿಯು ಹೌದು. ಇಂತಹ ಮೇರು ವ್ಯಕ್ತಿತ್ವದ ಪರಮ ಪೂಜ್ಯರು ದಸರಾ ಮಹೋತ್ಸವವನ್ನು ಉದ್ಘಟಿಸುವುದು, ದಸರಾ ಮಹೋತ್ಸವಕ್ಕೆ ಮೆರುಗು ನೀಡುತ್ತದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ