ಶ್ರೀದೇವಿ ಮಗಳು ಜಾಹ್ನವಿ ತನ್ನ ಫಿಗರ್ ಪರ್ಫೆಕ್ಷನ್ ಮಾಡಿಸಿಕೊಂಡ ಬಳಿಕ, ಹಿಂದಿಗಿಂತ ಅತಿ ಹೆಚ್ಚು ಸ್ಟೈಲಿಶ್‌ಗ್ಲಾಮರಸ್ ಆಗಿದ್ದಾಳೆ. FBನ ಅಭಿಮಾನಿ ಜಾಹ್ನವಿ, ವಿಭಿನ್ನ ಡ್ರೆಸ್ ಗಳಲ್ಲಿ ತನ್ನ ಬ್ಯೂಟಿ ಫೋಟೋಸ್ ಪ್ರದರ್ಶಿಸುತ್ತಿದ್ದಾಳೆ. ಅವಳ ಇತ್ತೀಚಿನ ಚಿತ್ರಗಳನ್ನು ಗಮನಿಸಿ, ಇವಳ ಅಭಿಮಾನಿಗಳು ಇವಳಿಗೆ ಡೀಪ್ ನೆಕ್ ಡ್ರೆಸೆಸ್ ಸರಿ ಎನ್ನುತ್ತಿದ್ದಾರೆ. ಜಾಹ್ನವಿಯ ಬರಲಿರುವ `ಬಾಲ್' ಚಿತ್ರ ಕೂಡ ಇವಳ ಡ್ರೆಸ್ ಗಳಷ್ಟು ಚರ್ಚೆಗೆ ಸಿಗಲಿಲ್ಲ. ಈ ಚಿತ್ರದ ಟ್ರೇಲರ್ ನೀವು ಗಮನಿಸಿಲ್ಲವಾದರೆ, ಅಗತ್ಯ ಇಂದೇ ಗಮನಿಸಿ, ಇದರಿಂದ ನಿಮ್ಮ ವೆಡ್ಡಿಂಗ್ ಪಾರ್ಟಿಗೆ ಹೊಸ ಐಡಿಯಾ ಹೊಳೆಯಬಹುದು!

ಕೃತಿಯ ಕೆರಿಯರ್ ಗೆ ಅಪಾಯ
`ಆದಿಪುರುಷ್' ಚಿತ್ರ ಮಖಾಡೆ ಮಲಗಿದ ನಂತರ ಕೃತಿ ಸೇನನ್ ಳ ಕೆರಿಯರ್ ಪಾತಾಳಕ್ಕಿಳಿದಂತಿದೆ. ಇದಕ್ಕೆ ಮೊದಲು ಇವಳ `ಶಹಜಾದಾ' `ಭೇಡಿಯಾ' ಚಿತ್ರಗಳೂ ಸಖತ್ ತೋಪೆದ್ದಿದ್ದವು. ಸುದ್ದಿಗಾರರ ಪ್ರಕಾರ, ಇವಳ ಬಳಿ ಈಗ ಶಾಹಿದ್ ಕಪೂರ್ ಧರ್ಮೇಂದ್ರರಂಥ ಸ್ಟಾರ್ ಕಾಸ್ಟ್ ಇರುವ ಒಂದೇ ಒಂದು ಚಿತ್ರ ಮಾತ್ರ ಬಾಕಿ ಇದೆಯಂತೆ. ಇದು ಬಿಡುಗಡೆ ಆದ ನಂತರ, ಈ ಚಿತ್ರ ಸೆಕ್ಸೆಸ್ ಆದರೆ ಕೃತಿ ಉಳಿಯುತ್ತಾಳೆ, ಇಲ್ಲದಿದ್ದರೆ..... ಬಾಹುಬಲಿ ಪ್ರಭಾಸ್ ಜೊತೆಗೆ ನಾಯಕಿಯಾದೆ ಎಂದು ಮೆರೆಯುತ್ತಿದ್ದವಳಿಗೆ, ತನ್ನ ಕೆರಿಯರ್ ಉಳಿಸಿಕೊಳ್ಳಲು ದಕ್ಷಿಣದ ಚಿತ್ರಗಳ ಐಟಂ ಒಂದೇ ಗತಿ ಆಗಿಬಿಡಬಾರದು!

ಭಗವಾಧಾರಿಗಳ ಭಾವನೆಗಳಿಗೆ ಚ್ಯುತಿ ಬಾರದಿರಲಿ
`ಆದಿಪುರುಷ್' ಚಿತ್ರದ ನಂತರ, ಇದೀಗ ಸೆನ್ಸಾರ್ ಬೋರ್ಡ್ ಎಷ್ಟೊಂದು ಕಳವಳಕ್ಕೆ ಸಿಲುಕಿದೆ ಎಂದರೆ, ಧರ್ಮಾಧಾರಿತ ಚಿತ್ರಗಳನ್ನು ಮತ್ತೆ ಮತ್ತೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಪರೀಕ್ಷಿಸುವಂತಾಗಿದೆ. ಪಾಪ, ಇವರೇನು ಮಾಡಿಯಾರು? ಯಾವ ಚಿತ್ರದಲ್ಲಾದರೂ ಧರ್ಮದ ಕುರಿತಾಗಿ ಸತ್ಯ ಸಂಗತಿಗಳಿದ್ದರೆ, ಬಿಡುಗಡೆ ನಂತರ ಭಗವಾಧಾರಿಗಳ ಭಾವನೆಗೆ ಚ್ಯುತಿ ಬಂದರೆ ಶ್ಯಾನೆ ಕಷ್ಟ! ಈ ಸಂದರ್ಭದಲ್ಲಿ ರಿಲೀಸ್ ಆಗಲಿದ್ದು, ಸೆನ್ಸಾರ್ ಇದಕ್ಕೆ ಅಸ್ತು ಅನ್ನದೆ ತಡೆ ಒಡ್ಡಿದೆ. ಈ ಚಿತ್ರದ ಪ್ರತಿ ಫ್ರೇಂ, ಪ್ರತಿ ಸಂಭಾಷಣೆಯನ್ನೂ ಕಾನೂನಿನ ಬೂದುಗಾಜಿನಲ್ಲಿ ಅಳೆಯಲಾಗುತ್ತದೆ, ನಂತರವೇ ನೀಡಲಾಗುತ್ತದೆ. ಅಯ್ಯೋ, ಬಲು ಕಷ್ಟದಿಂದ ಭಗವಾಧಾರಿಗಳು ಜನತೆಯ ಕಣ್ಣಿಗೆ ಧಾರ್ಮಿಕ ಕನ್ನಡಕ ತೊಡಿಸಿದ್ದಾರೆ, ಹಾಗಿರುವಾಗ ಯಾವುದೋ ಚಿತ್ರ ಬಂದು ಇವರ ದಂಧೆಗೆ ಬ್ರೇಕ್ ಹಾಕಬಾರದಷ್ಟೇ!

ಮಾರ್ಕೆಟ್ ಗೆ ಬಂದ ಹೊಸ ಜೋಡಿ
ಅರ್ಜುನ್ ಮಲೈಕಾ, ಕೃತಿ ಪ್ರಭಾಸ್ ನಂತರ ಜನರ ಗಮನ ತಮ್ಮತ್ತ ಸೆಳೆಯುತ್ತಿರುವ ಜೋಡಿ ಅಂದ್ರೆ.... ಆದಿತ್ಯ ರಾಯ್ ಕಪೂರ್‌ಅನನ್ಯಾ ಪಾಂಡೆ. ಸುದ್ದಿಗಾರರು ಸದಾ ಇವರ ಬೆನ್ನುಬಿದ್ದು, ಕಂಡ ಕಂಡ ಪೋಸ್ ಕ್ಯಾಚ್ ಮಾಡುತ್ತಿದ್ದಾರೆ. ಈ ಜೋಡಿ ಸಹ ಹಳೆ ಜೋಡಿಗಳ ಸಕಲು ರೆಕಾರ್ಡ್ ಹಾಡುತ್ತಿದೆ.... ಅಂದ್ರೆ... ಮೊದಲು ನೋ ಕಮೆಂಟ್ಸ್ ಅನ್ನೋದು, ವೀ ಆರ್ ಓನ್ಲಿ ಗುಡ್ ಫ್ರೆಂಡ್ಸ್ ಅನ್ನೋದು, ಕೊನೆಯಲ್ಲಿ ನಂಟು ಗಟ್ಟಿಗೊಳಿಸಿ, ಎಲ್ಲರನ್ನೂ ದಂಗು ಬಡಿಸುವುದು! ಏನೇ ಆಗಲಿ, ಸುದ್ದಿಗಾರರಿಗೆ ನಾವು ಯಾವುದೇ ಮಸಾಲೆ ಸುದ್ದಿ ಕೊಡೋದಿಲ್ಲ ಅಂತಾರೆ ಇರು. ಇವರ ಪ್ರೀತಿ ಪ್ರೇಮ ಟೊಳ್ಳೋ..... ಗಟ್ಟಿಯೋ.... ಕಾಲವೇ ಹೇಳಬೇಕು!





