ರಾಘವೇಂದ್ರ ಅಡಿಗ ಎಚ್ಚೆನ್.

ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದ ‘ಕೆಡಿ: ದಿ ಡೆವಿಲ್’ ಕಳೆದ ದಿನ ಮುಂಬೈನಲ್ಲಿ ಟೀಸರ್ ಅನಾವರಣಗೊಳಿಸೋ ಮೂಲಕ ಭರ್ಜರಿ ಪ್ರಚಾರ ಪ್ರಾರಂಭಿಸಿದೆ. ಗುರುವಾರ ಮುಂಬೈನಲ್ಲಿ ಗ್ರ್ಯಾಂಡ್ ಟೀಸರ್ ರಿಲೀಸ್ ಈವೆಂಟ್ ನಡೆದಿದ್ದು, ಇಂದು ತಮಿಳುನಾಡಿನಲ್ಲಿ ಪ್ರಚಾರ ನಡೆಯಿತು. ಈ ಸಂದರ್ಭದಲ್ಲಿ ತಮಿಳು ನಟ ಕಮಲ್ ಹಾಸನ್ ಮತ್ತು ಅವರ ಹೇಳಿಕೆ ವಿಚಾರ ಈ ತಂಡದೆದುರು ಬಂತು.
ಧ್ರುವ ಸರ್ಜಾ ಹೇಳಿದ್ದಿಷ್ಟು: ”ನಾನು ಹುಟ್ಟೋದಕ್ಕೂ ಮೊದಲೇ ತುಂಬಾ ತಮಿಳು ಸಿನಿಮಾಗಳು ರಿಲೀಸ್ ಆಗಿವೆ. ಯಾರೂ ಯಾವುದೇ ಸಿನಿಮಾಗಳು ರಿಲೀಸ್ ಆಗದಂತೆ ನಿಲ್ಲಿಸಿಲ್ಲ. ಕಮಲ್ ಸರ್ ನೀಡಿದ ಒಂದು ಹೇಳಿಕೆಯಿಂದ ಅವರು ತಪ್ಪಿತಸ್ಥರಾದರು. ನಾನು ನೇರವಾಗಿ ಹೇಳುತ್ತೇನೆ. ಎಲ್ಲರೂ ಅವರವರ ಮಾತೃಭಾಷೆಯನ್ನು ಪ್ರೀತಿಸುತ್ತಾರೆ. ಹಾಗೆಯೇ, ನಾವೂ ಕೂಡಾ ನಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತೇವೆ. ಆರಾಧಿಸುತ್ತೇವೆ. ನಮ್ಮ ಮಾತೃಭಾಷೆ ವಿಷಯಕ್ಕೆ ಬಂದಾಗ ಖಂಡಿತವಾಗಿಯೂ ಜನರು ಪ್ರತಿಕ್ರಿಯಿಸುತ್ತಾರೆ. ಆ ಸಿನಿಮಾ ಒಂದು ಬಿಟ್ಟು ಬೇರೆ ತಮಿಳು ಸಿನಿಮಾಗಳು ರಿಲೀಸ್ ಆಗಿವೆ. ನಮ್ಮ ಕನ್ನಡ ಜನ ಖಂಡಿತವಾಗಿಯೂ ತಮಿಳು ಸಿನಿಮಾಗಳನ್ನು ಪ್ರೋತ್ಸಾಹಿಸುತ್ತಾರೆ. ಯಾವಾಗ ಅವರ ಸ್ವಾಭಿಮಾನ ಹಾಗೂ ಮಾತೃಭಾಷೆಯ ವಿಷಯ ಬರುತ್ತೋ, ಆಗ ಖಂಡಿತವಾಗಿಯೂ ಅವರು ವಿರೋಧಿಸುತ್ತಾರೆ. ಇದು ನನ್ನ ನೇರ ಉತ್ತರ. ಕನ್ನಡ, ನಮ್ಮ ಮಾತೃಭಾಷೆ” ಎಂದು ತಿಳಿಸಿದರು.

Kamal 1

ಪ್ರೇಮ್ ಪ್ರತಿಕ್ರಿಯೆ: ”ಧ್ರುವ ಸರ್ಜಾ ಅವರು ಹೇಳಿದಂತೆ ಥಗ್ ಲೈಫ್ ಒಂದು ಬಿಟ್ಟು ತಮಿಳಿನ ಎಲ್ಲಾ ಸಿನಿಮಾಗಳು ರಿಲೀಸ್ ಆಗಿವೆ. ತಮಿಳುನಾಡೇನು ಬೇರೆ ಕಂಟ್ರಿ ಅಲ್ಲ. ಇಲ್ಲೇ ಬಾರ್ಡರ್. 300 ಕಿಲೋ ಮೀಟರ್ ಅಂತರದಲ್ಲಿದ್ದೇವೆ. ಹಾಗಾಗಿ, ನಾವೆಲ್ಲಾ ಒಂದೇ. ಏನಾಯಿತೆಂದರೆ, ಇಲ್ಲಿ ತಾಯಿ ಸೆಂಟಿಮೆಂಟ್ ಬಂತು. ಹಾಗಾಗಿ ಪ್ರತಿಕ್ರಿಯೆಗಳು ವ್ಯಕ್ತವಾದವು”.
”ನಿಮ್ಮ ಸ್ವಂತ ತಾಯಿಗೆ ಯಾರಾದ್ರೂ ಏನಾದ್ರೂ ಅಂದ್ರೆ ಸುಮ್ಮನಿರುತ್ತೀರಾ?. ಹಾಗಾಗಿ, ಅವರ ಹೇಳಿಕೆಗಳು ಮನಸ್ಸಿಗೆ ಬೇಸರ ತರಿಸಿತು. ನಮ್ಮ ಕನ್ನಡ ಜನರಿಗೆ ಹರ್ಟ್ ಆಯಿತು. ತಮಿಳು ಸಿನಿಮಾಗಳು ರಿಲೀಸ್ ಆಗೋದು ಬೇಡ ಅಂತಾ ಯಾರೂ ಹೇಳಲಿಲ್ಲ. ಕಮಲ್ ಸರ್ಗೆ ಮಾತ್ರ ವಿರೋಧ ವ್ಯಕ್ತವಾಯಿತು. ಕಮಲ್ ಸರ್ ಹಾಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಿ ಎಂಬ ಒತ್ತಾಯಗಳು ಕೇಳಿಬಂತು ಅಷ್ಟೇ ಬಿಟ್ರೆ, ನಾವೆಲ್ಲರೂ ಒಂದೇ. ನಿಮಗೇ ಗೊತ್ತದು. ಎಲ್ಲಾ ಸಿನಿಮಾಗಳೂ ಚೆನ್ನಾಗಿ ಹೋಗ್ತಿವೆ. ಕರ್ನಾಟಕದಲ್ಲಿ ಯಾವುದೇ ಸಿನಿಮಾ ಬಿಡುಗಡೆ ಆಗಲಿ, ಉತ್ತಮ ಆದಾಯ ಪಡೆದುಕೊಳ್ಳುತ್ತವೆ. ಅಷ್ಟರ ಮಟ್ಟಿಗೆ ನಮ್ಮ ಜನ ಬೆಂಬಲಿಸುತ್ತಾರೆ. ನನ್ನನ್ನೂ ಸೇರಿಸಿ ಅಷ್ಟೂ ಜನ ಸಿನಿಮಾ ನೋಡ್ತೀವಿ. ಸಿಂಪಲ್. ಅಷ್ಟೇನೆ. ನೀವೆಲ್ಲ ಬಂದ್ರೆ ಉತ್ತಮವಾಗಿ ಸತ್ಕರಿಸಿ ಕಳಿಸುತ್ತೇವೆ. ಅದು ಕನ್ನಡ. ಅದು ಕರ್ನಾಟಕ. ತಮಿಳುನಾಡು ಕೂಡಾ ಅದೇ ರೀತಿ ಇದೆ. ಆದ್ರೆ ಕೆಲವೊಮ್ಮೆ, ಕೆಲ ಹೇಳಿಕೆಗಳು…. ಕನ್ನಡ ತಾಯಿ ಇದ್ದಂತೆ. ಅದಕ್ಕೆ ಬೇಸರ ಆಯ್ತು ಬಿಟ್ರೆ ಬೇರೇನೂ ಇಲ್ಲ” ಎಂದು ನಿರ್ದೇಶಕ ಪ್ರೇಮ್ ತಿಳಿಸಿದರು.
ತಮಿಳು ನಟ ಕಮಲ್ ಹಾಸನ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಚಿತ್ರ ‘ಥಗ್ ಲೈಫ್’ ಜೂನ್ 5ರಂದು ಕರ್ನಾಟಕ ಹೊರತುಪಡಿಸಿ, ಎಲ್ಲೆಡೆ ಬಿಡುಗಡೆ ಆಯ್ತು. ಆದ್ರೆ ಬಾಕ್ಸ್ ಆಫೀಸ್ ವಿಚಾರದಲ್ಲಿ ಈ ಚಿತ್ರ ನಿರೀಕ್ಷೆ ತಲುಪಲಿಲ್ಲ.
ಸಿನಿಮಾ ಬಿಡುಗಡೆಗೂ ಮುನ್ನ ನಡೆದ ಪ್ರಮೋಶನ್ ಈವೆಂಟ್ನಲ್ಲಿ, ನಾಯಕ ನಟ ಕಮಲ್ ಹಾಸನ್ ‘ಕನ್ನಡ ತಮಿಳಿನಿಂದ ಹುಟ್ಟಿದೆ’ ಎಂದು ಹೇಳಿಕೆ ಕೊಟ್ಟು ವಿವಾದಕ್ಕೊಳಗಾದರು. ಕ್ಷಮೆಯಾಚನೆಗೆ ತೀವ್ರ ಒತ್ತಾಯ ಕೇಳಿಬಂತಾದರೂ ನಟ ಕ್ಷಮೆಯಾಚಿಸಲಿಲ್ಲ. ಕರುನಾಡಿನಾದ್ಯಂತ ಪ್ರತಿಭಟನೆಗಳು ನಡೆದವು. ಕಮಲ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಸಿನಿಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ