ಬಾಲಿವುಡ್‌ಗೆ ಕರೀನಾ `ರೆಫ್ಯೂಜಿ' ಚಿತ್ರದ ಮೂಲಕ ಎಂಟ್ರಿ ಪಡೆದಳು. ಮುಂದೆ ಈಕೆ ಹಿಂದಿ ಚಿತ್ರರಂಗದ ದೊಡ್ಡ ಸ್ಟಾರ್‌ಎನಿಸಿದಳು. ಈಕೆಯ ಮೊದಲ ಚಿತ್ರ ಹಿಟ್‌ ಆಯಿತು. ಈಕೆಗೆ ಶ್ರೇಷ್ಠ ನಟಿ ಎಂಬ ಹೆಸರೂ ಬಂದಿತು. ಆದರೆ ನಂತರ ಈಕೆಯ ಸುಮಾರು ಚಿತ್ರಗಳು ನೆಲಕಚ್ಚಿದವು. ಹೀಗಿರುವಾಗ `ಚಮೇಲಿ' ಈಕೆಯ ಕೆರಿಯರ್‌ನ ಟರ್ನಿಂಗ್‌ ಪಾಯಿಂಟ್‌ ಆಯಿತು. ಉತ್ತಮ ಕಥೆ, ನಿರ್ದೇಶಕರಿದ್ದರೆ ತಾನೆಂಥ ಉತ್ತಮ ನಟಿ ಆಗಬಲ್ಲೆ ಎಂದು ಈಕೆ ನಿರೂಪಿಸಿದ್ದಳು.

ಜಬರ್ದಸ್ತ್ ಅಭಿನಯ ಇದಾದ ಮೇಲೆ ಬಂದದ್ದೇ `ಜಬ್‌ ವೀ ಮೆಟ್‌.' ಇದರಲ್ಲಿ ಈಕೆ ಶಾಹಿದ್‌ ಕಪೂರ್‌ ಜೊತೆ ಅನುಭವಿ ನಟಿಯಾಗಿ ಮಿಂಚಿದಳು. ಯುವಜನತೆಗೆ ಈ ಚಿತ್ರ ಹುಚ್ಚೆಬ್ಬಿಸಿತು. ಮುಂದೆ ನಂ.1 ಹೀರೋಯಿನ್‌ ಆದಳು. ಇದಾದ ಮೇಲೆ ಅನೇಕ ಸೂಪರ್‌ಹಿಟ್‌ ಚಿತ್ರಗಳು ಬಂದವು. ಕಭೀ ಖುಷಿ ಕಭೀ ಗಮ್, ಫಿದಾ, 3 ಈಡಿಯಟ್ಸ್, ಓಂಕಾರ, ತಲಾಶ್‌, ಭಜರಂಗಿ ಭಾಯಿಜಾನ್‌, ಉಡ್ತಾ ಪಂಜಾಬ್‌ ಇತ್ಯಾದಿ. ಈ ರೀತಿ ಆಕೆ ಬಾಲಿವುಡ್‌ನ ಅತ್ಯಧಿಕ ಸಂಭಾವನೆ ಪಡೆಯುವ ನಾಯಕಿಯರಲ್ಲಿ ಒಬ್ಬಳೆನಿಸಿದಳು.

ತಾಯಿ ಎನಿಸುವುದು ಸಮಸ್ಯೆಯಲ್ಲ

ಕರೀನಾಳ ಹೆಸರು ಕ್ರಮೇಣ ಶಾಹೀದ್‌ ಜೊತೆ ಕೇಳಿಬರುತ್ತಿತ್ತು. ಆದರೆ 2012ರ ಅಕ್ಟೋಬರ್‌ರಂದು ಈಕೆ ಸೈಫ್‌ ಅಲೀಖಾನ್‌ ಜೊತೆ ಮದುವೆಯಾದಳು. ತಾಯಿ ಆದ ಮೇಲೂ ಈ ನಟಿಯ ಬೇಡಿಕೆ ಕುಂದಲಿಲ್ಲ. ಆಕೆಯ ಪ್ರಕಾರ, ಇಂಡಸ್ಟ್ರಿಯಲ್ಲಿದ್ದರೂ ತಾಯಿ ಆಗುವುದು ಬೇಡಿಕೆ ಉಳಿಸಿಕೊಳ್ಳುವುದು ತನಗೆ ಕಷ್ಟವಲ್ಲ ಎನ್ನುತ್ತಾಳೆ. ಇತ್ತೀಚೆಗೆ ಇವಳ ಮಗ ತೈಮೂರ್‌ ಹೆಚ್ಚು ಮಿಂಚುತ್ತಿದ್ದಾನೆ.

ಕರೀನಾ ರೊಮ್ಯಾಂಟಿಕ್ಸ್ , ಕಾಮಿಡಿ, ಥ್ರಿಲ್ಲರ್‌ ಮುಂತಾದ ಎಲ್ಲಾ ಚಿತ್ರಗಳಲ್ಲೂ ನಟಿಸಿದ್ದಾಳೆ. ತಾಯಿ ಆದ ಮೇಲೆ ಮೊದಲ ಬಾರಿಗೆ `ವೀರೆ ದಿ ವೆಡ್ಡಿಂಗ್‌' ಚಿತ್ರದಲ್ಲಿ ನಟಿಸಿದ್ದಾಳೆ.

ಫಿಲ್ಮೀ ಪರಿವಾರಕ್ಕೆ ಸೇರಿದ ಕರೀನಾ ಬಾಲ್ಯದಿಂದಲೇ ಸಿನಿಮಾ ವಾತಾವರಣದಲ್ಲಿ ಬೆಳೆದಳು. ಈ ಕಾರಣದಿಂದಾಗಿಯೇ ಎಂಥ ಚಿತ್ರವನ್ನಾದರೂ ಈಕೆ ಯಶಸ್ವಿಯಾಗಿಸಬಲ್ಲಳು. ತನ್ನ ಈ ಸಿನಿ ಪಯಣದಲ್ಲಿ ಆಕೆ ಹಲವಾರು ಪ್ರಶಸ್ತಿ ಪಡೆದಿದ್ದಾಳೆ.

ನೇರ ನುಡಿಯ ಕರೀನಾ

ನೇರ ನುಡಿಯ ಕರೀನಾ ಹೇಳುತ್ತಾಳೆ, ``ಜೆ.ಪಿ. ದತ್ತಾರಿಂದ ಹಿಡಿದು ಇಂದಿನ ಹೊಸ ನಿರ್ದೇಶಕರವರೆಗೂ ನನಗೆ ಎಲ್ಲರ ಸಹಕಾರ ಸಿಕ್ಕಿದೆ. ನನಗೆ ಎಲ್ಲಾ ಬಗೆಯ ನಿರ್ದೇಶಕರ ಜೊತೆಯಲ್ಲೂ ಕೆಲಸ ಮಾಡುವ ಅವಕಾಶ ಸಿಕ್ಕಿತು. 18 ವರ್ಷಗಳ ಈ ಕೆರಿಯರ್‌ನಲ್ಲಿ ನಾನು ಬಹುತೇಕ ಎಲ್ಲರ ಬಳಿ ಕೆಲಸ ಮಾಡಿದ್ದೇನೆ.  ಚಿತ್ರ ಹೇಗೇ ಇರಲಿ, ನಿರ್ದೇಶಕರ ಜೊತೆ ನನ್ನದು ವಾತ್ಸಲ್ಯಭರಿತ ಸಂಬಂಧ. ಪ್ರತಿ ನಿರ್ದೇಶಕರ ಜೊತೆಯೂ ಉತ್ತಮ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ. ಅವರು ಹಳಬರೋ ಹೊಸಬರೋ ಮುಖ್ಯವಲ್ಲ.''

ಕರೀನಾಳ ಕನಸು

ಇವಳಿಗೆ ಸಿನಿಮಾ ಕನಸೇನೂ ಆಗಿರಲಿಲ್ಲ. ``ನನಗೆ ಯಾವಾಗಲೂ ಪರ್ಫಾರ್ಮೆನ್ಸ್ ಬಹಳ ಮುಖ್ಯ. ಬೇರೆ ಬೇರೆ ವಿಭಿನ್ನ ಬಗೆಯ ಚಿತ್ರಗಳಲ್ಲಿ ನಟಿಸುವಾಸೆ. ಪಾತ್ರ ಚಿಕ್ಕದೋ ದೊಡ್ಡದೋ, ಅದರ ಪ್ರಭಾವದ ಕುರಿತು ಯೋಚಿಸುತ್ತೇನೆ. ಸದಾ ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಬೇಕೆಂಬುದೇ ನನ್ನ ಕನಸು. ಬಯೋಪಿಕ್‌ ನನಗೆ ಇಷ್ಟ. ಆದರೆ ಕಥೆಯಲ್ಲಿ ದಮ್ ಇರಬೇಕು. ನನಗಂತೂ ಹಾಲಿವುಡ್‌ ಚಿತ್ರಗಳಲ್ಲಿ ನಟಿಸಲು ಖಂಡಿತಾ ಇಷ್ಟವಿಲ್ಲ. ಏಕೆಂದರೆ ನಾನು ಸ್ಟ್ರಾಂಗ್‌ ಹಿಂದಿ ಚಿತ್ರೋದ್ಯಮಕ್ಕೆ ಸೇರಿದವಳು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ