ಅಪ್ಪ ಅಮ್ಮ ಇಬ್ಬರೂ ಕಲಾವಿದರು. ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಮಾಡಿದವರು. ಸಿಹಿಕಹಿ ಚಂದ್ರು ಮತ್ತು ಗೀತಾ ಹೆಸರು ಕೇಳದವರೇ ಇಲ್ಲ. ಅವರ ಮಗಳೇ ಈ ಹಿತಾ ಚಂದ್ರಶೇಖರ್‌. ಅಭಿನಯ ರಕ್ತದಲ್ಲೇ ಹರಿದು ಬಂದಿರುವುದರಿಂದ ನಟಿಯಾಗಲೇಬೇಕು ಎಂದೇ ಕನಸು ಕಂಡಳು. ಅಪ್ಪ ಅಮ್ಮನ ಇನ್‌ಫ್ಲೂಯೆನ್ಸ್ ಪಡೆಯದೇ ತನ್ನ ಸ್ವಸಾಮರ್ಥ್ಯದಿಂದ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂಥ ದಿಟ್ಟ ಹುಡುಗಿ.

ಮುಂಬೈಗೆ ಹೋಗಿ ರೋಶನ್‌ ತನೇಜಾ ಬಳಿ ಅಭಿನಯದ ಪಾಠ ಕಲಿತು ಬಂದ ಮೇಲೆಯೇ ಸಿನಿಮಾದಲ್ಲಿ ನಟಿಸಲು ಅಪ್ಲಿಕೇಶನ್ ಹಾಕಿದ್ದು. ಮೊದಲು ವಿದ್ಯಾಭ್ಯಾಸ ಮುಗಿಸು ಅಂತ ಅಪ್ಪ ಹೇಳಿದ್ದರಿಂದ ಕ್ರೈಸ್ಟ್ ಕಾಲೇಜಿನಿಂದ ಡಿಗ್ರಿ ಪಡೆದು ಬಂದಳು. ಸಿನಿಮಾರಂಗ ನೀನು ಅಂದುಕೊಂಡಷ್ಟು ಸುಲಭವಲ್ಲ ಎಂದು ಅಪ್ಪಟ ಕಲಾವಿದರಾದ ಅಮ್ಮ ಅಪ್ಪ ಎಚ್ಚರಿಕೆ ಕೊಟ್ಟಿದ್ದರೂ ರಂಗಭೂಮಿಯಲ್ಲಿ ನಟಿಸಿದ ಅನುಭವ ಇದ್ದುದರಿಂದ ಧೈರ್ಯಗೆಡದೆ ನುಗ್ಗಿಬಿಟ್ಟಳು.

ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಹೇಗಾಯ್ತು? ಅದರ ಅನುಭವ?

ಮೊದಲ ಚಿತ್ರ `ಸ್ನೇಕ್‌ ನಾಗ' ಯೋಗಿ ಜೊತೆ ಸಿಕ್ಕಿತಾದರೂ ಚಿತ್ರ ಅರ್ಧಕ್ಕೆ ನಿಂತಿತು. ಮನಸ್ಸಿಗೆ ತುಂಬಾ ಬೇಸರವಾಯ್ತು. ಆಮೇಲೆ ಸಿಕ್ಕಿದ್ದು `ಕಾಲು ಕೆ.ಜಿ. ಪ್ರೀತಿ' ಸಿನಿಮಾ. ಇದೀಗ ಯೋಗಿ ಜೊತೆ `ಯೋಗಿ ದುನಿಯಾ' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರಗಳ ಬಗ್ಗೆ ಒಳ್ಳೆ ಮಾತುಗಳು ಕೇಳಿಬರುತ್ತಿವೆ. ಕನ್ನಡ ಚಿತ್ರರಂಗದಲ್ಲಿ ಹೊಸಬರು ಹೊಸ ರೀತಿಯ ಸಿನಿಮಾಗಳನ್ನು ಮಾಡುತ್ತಿರೋದ್ರಿಂದ ಅಂಥ ಪ್ರಾಜೆಕ್ಟ್ ಗಳ ಬಗ್ಗೆ ನನಗೆ ಹೆಚ್ಚು ಒಲವು.

ಮುಂದೆ ಇನ್ನಷ್ಟು ಚಿತ್ರಗಳ ಬಗ್ಗೆ.....?

ಈಗ ನನ್ನ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. `ತುರ್ತು ನಿರ್ಗಮನ' ಚಿತ್ರ ಕೂಡಾ ಒಂದು. ಹೇಮಂತ್‌ ಕುಮಾರ್‌ ಡೈರೆಕ್ಟ್ ಮಾಡುತ್ತಿದ್ದಾರೆ.

`ತುರ್ತು ನಿರ್ಗಮನ'ದ ಬಗ್ಗೆ ವಿವರಗಳು.....

ಈ ಚಿತ್ರದ ಬಗ್ಗೆ ನನಗೆ ತುಂಬಾ ಹೋಪ್ಸ್ ಇದೆ. ಕಥೆ ಡಿಫರೆಂಟ್‌ ಆಗಿದೆ. ಸುನೀಲ್ ‌ರಾವ್‌, ಸುಧಾರಾಣಿ, ಸಂಯುಕ್ತಾ ಹೆಗ್ಡೆ ಇವರೆಲ್ಲರೂ ಇದ್ದಾರೆ. ಇವರೆಲ್ಲರೂ ನನಗೆ ಪ್ರಿಯರೇ ಆಗಿರೋದ್ರಿಂದ ಈ ಚಿತ್ರ ನನಗೆ ತುಂಬಾನೇ ಸ್ಪೆಷಲ್.

ಹಿತಾ ನಿನಗೆ ಏನೇನು ಇಷ್ಟ.....?

ನಾನು ಸಿನಿಮಾ ಪ್ರೇಮಿ. ಸಿನಿಮಾಗಳನ್ನು ನೋಡುತ್ತೇನೆ. ಪ್ರಪಂಚದ ಎಲ್ಲ ಸಿನಿಮಾಗಳನ್ನು ನೋಡುತ್ತೇನೆ. ಅದೇ ನನ್ನ ಹಾಬಿ. ಕಥೆ ಬರೆಯೋ ಗೀಳು. ಅದರ ಸಲುವಾಗಿ ಒಂದಷ್ಟು ದಿನ ಬ್ರೇಕ್‌ ತಗೊಂಡು ಎಲ್ಲಾದರೂ ಹೋಗಿ ಕಥೆ ಬರೆಯೋಣ ಅಂತಿದ್ದೀನಿ. ಮುಂದೆ ನಾನು ಮಾಡುವ ಸಿನಿಮಾಗೆ ನಾನೇ ಕಥೆ ಬರೆಯಬೇಕು ಎನ್ನುವ ಆಸೆಯೂ ಇದೆ.

ಅಪ್ಪ ಅಮ್ಮ ಏನು ಅಡ್ವೈಸ್‌ ಮಾಡುತ್ತಾರೆ?

ಅವರ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ. ಪ್ರಾಜೆಕ್ಟ್ ಬಗ್ಗೆ ಡಿಸ್ಕಸ್‌ ಮಾಡುತ್ತೇನೆ. ಆದರೆ ಅಂತಿಮ ನಿರ್ಧಾರ ನನ್ನದೇ ಆಗಿರುತ್ತದೆ.

ಹೀಗೆನ್ನುವ ಹಿತಾಳ ಎಲ್ಲ ಆಸೆಗಳೂ ಈಡೇರಲಿ ಎಂದು ಹಾರೈಸೋಣ.

- ಜಾಗೀರ್‌ದಾರ್‌

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ