-  ರಾಘವೇಂದ್ರ ಅಡಿಗ ಎಚ್ಚೆನ್.

ಭಾರತೀಯ ಚಿತ್ರರಂಗದ ಬೆಳ್ಳಿತೆರೆಗೆ ಕರ್ಣನ ದಂತಕಥೆ ಅದ್ಧೂರಿಯಾಗಿ ಜೀವಂತವಾಗಲಿದೆ. ಮಹಾಭಾರತದ ಅಪ್ರತಿಮ ಯೋಧ ಕರ್ಣನ ಪಾತ್ರದಲ್ಲಿ ರಾಘವ ಲಾರೆನ್ಸ್ ಕಾಣಿಸಿಕೊಳ್ಳಲಿದ್ದು, ಈ ಅದ್ಧೂರಿ ಸಿನಿಮಾವನ್ನು ರಮೇಶ್ ವರ್ಮಾ ನಿರ್ದೇಶಿಸುತ್ತಿದ್ದಾರೆ.₹150 ಕೋಟಿ ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾ ಮಹಾವೀರ ಕರ್ಣ,

ಮಹಾವೀರ ಕರ್ಣ ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಮೂಡಿಬರುತ್ತಿರುವ ಮಹಾಕಾವ್ಯವಾಗಿದೆ. ರಮೇಶ್ ವರ್ಮಾ ಮಹಾವೀರ ಕರ್ಣ ಸಿನಿಮಾ ವನ್ನ ನಿರ್ದೇಶನ ಮಾಡುತಿದ್ದಾರೆ.  ಪೆನ್ ಮೂವೀಸ್‌ನ ಜಯಂತಿಲಾಲ್ ಗಡಾ, RV STUDIOS ಮತ್ತು ಶ್ರೀ ನೀಲಾದ್ರಿ ಪ್ರೊಡಕ್ಷನ್ಸ್ ಸಹಯೋಗದಲ್ಲಿ ಚಿತ್ರ ನಿರ್ಮಾಣವಾಗಲಿದೆ .

ವಿಶೇಷವಾಗಿ ನಿರ್ಮಿಸಲಾಗಿರುವ ಬೃಹತ್ ಸೆಟ್‌ಗಳು, ಅದ್ಧೂರಿ ಕಾಲಘಟ್ಟದ ವಿನ್ಯಾಸಗಳು, ಭರ್ಜರಿ ಆ್ಯಕ್ಷನ್ ದೃಶ್ಯಗಳು ಹಾಗೂ ಅತ್ಯಾಧುನಿಕ VFX ತಂತ್ರಜ್ಞಾನದ ಮೂಲಕ ಕರ್ಣನ ಜಗತ್ತನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ ಸಿನಿಮಾ ತಂಡ.

ಭವ್ಯ ಸಾಮ್ರಾಜ್ಯಗಳು, ಪುರಾತನ ಯುದ್ಧಭೂಮಿಗಳು, ರೋಮಾಂಚನಕಾರಿ ಯುದ್ಧದ ದೃಶ್ಯಗಳು ಹಾಗೂ ಬೃಹತ್ ಪರಿಸರ ವಿನ್ಯಾಸಗಳ ಮೂಲಕ, ನೈಜ ಸೆಟ್‌ಗಳ ವೈಭವ ಮತ್ತು ಅತ್ಯಾಧುನಿಕ ದೃಶ್ಯ ಪರಿಣಾಮಗಳನ್ನು ಸಂಯೋಜಿಸಿ ಪ್ರೇಕ್ಷಕರನ್ನು ಮತ್ತೊಂದು ಕಾಲಘಟ್ಟಕ್ಕೆ ಕರೆದೊಯ್ಯುವಂತಹ ಸಿನಿಮೀಯ ಜಗತ್ತನ್ನು ನಿರ್ಮಿಸಲಾಗುತ್ತಿದೆ.

ಈ ಕಥೆಯ ಹೃದಯವೇ ಕರ್ಣ —
ಗೌರವ, ವಿಧಿ, ನಿಷ್ಠೆ ಮತ್ತು ತ್ಯಾಗದಿಂದ ರೂಪುಗೊಂಡ ಅಪ್ರತಿಮ ಯೋಧ.ರಾಘವ ಲಾರೆನ್ಸ್ ಕರ್ಣನಾಗಿ ಕಾಣಿಸಿಕೊಳ್ಳಲಿದ್ದು, ನಿರ್ದೇಶಕ ರಮೇಶ್ ವರ್ಮಾ ಅವರ ದೃಷ್ಟಿಕೋನದಲ್ಲಿ ಈ ಅಮರ ಕಥೆಯನ್ನು ಅದ್ಧೂರಿತನ, ಭಾವನೆ, ಆ್ಯಕ್ಷನ್ ಮತ್ತು ಅದ್ಭುತ ದೃಶ್ಯಕಥನದ ಮೂಲಕ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಸಜ್ಜಾಗಿದೆ.

ಮತ್ತು ಇದು ಕೇವಲ ಆರಂಭವಷ್ಟೇ.ಈ ಮಹತ್ವಾಕಾಂಕ್ಷೆಯ ಮಹಾಕಾವ್ಯದ ಹಿಂದೆ ಇರುವ ಅದ್ಭುತ ತಂಡವನ್ನು ಪರಿಚಯಿಸುವ ನಿಟ್ಟಿನಲ್ಲಿ ಉಳಿದ ತಾರಾಗಣ ಮತ್ತು ತಂತ್ರಜ್ಞರ ಹೆಸರನ್ನು ಒಂದೊಂದಾಗಿ ಅದ್ಧೂರಿಯಾಗಿ ಘೋಷಿಸಲಾಗುವುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ