"ಕೊತ್ತಲವಾಡಿಯಲ್ಲಿ ನಟಿಸುವ ಪ್ರಾರಂಭದಲ್ಲಿ ಕಾವ್ಯ ಅವರಿಗೆ ಈ ಚಿತ್ರದ ನಿರ್ಮಾಪಕರು ಯಾರೆಂದೇ ಗೊತ್ತಿರಲಿಲ್ಲ. ಕಥೆ ಕೇಳುವ ಸಮಯದಲ್ಲಿ ನಿರ್ದೇಶಕರ ಮಾತಿಗೆ ಒಪ್ಪಿ ಅಭಿನಯಿಸಲು ಒಪ್ಪಿಕೊಂಡಿದ್ದರು. ಆಗೆಲ್ಲಾ ಕೆಲವೊಮ್ಮೆ ಅವರಲ್ಲಿ ಆತಂಕವೂ, ಅಸಮಾಧಾನವೂ ಇತ್ತು. ಆದರೆ ಈಗ ನಿರ್ಮಾಪಕಿಯಾಗಿ ನಾನಿರುವುದು(ಪುಷ್ಪ ಅರುಣ್ ಕುಮಾರ್)ತಿಳಿದ ನಂತರದಲ್ಲಿ ಖುಷಿಯಾಗಿದ್ದಾರೆ." ಎಂದು ಪುಷ್ಪ ತಾವು ಕೊತ್ತಲವಾಡಿ ನಾಯಕಿ ಕಾವ್ಯ ಶೈವ ಅವರನ್ನು ಪಾತ್ರಕ್ಕೆ ಆಯ್ಕೆ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು.
ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆಯಾಗಲಿದೆ. ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಕೊತ್ತಲವಾಡಿಯ ಕಥೆಯನ್ನು ನಿರ್ಮಾಣ ಮಾಡಿ ತೆರೆಗೆ ತರುತ್ತಿದ್ದಾರೆ. ರಗಡ್ ಅವತಾರದಲ್ಲಿ ಪೃಥ್ವಿ ಅಂಬರ್ ಕಾಣಿಸಿಕೊಳ್ಳುತ್ತಿದ್ದರೆ ಅವರಿಗೆ ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ, ರಾಜೇಶ್ ನಟರಂಗ, ಬಲ ರಾಜ್ವಾಡಿ, ಮಾನಸಿ ಸುಧೀರ್ ಇದೇ ಮೊದಲ ಬಾರಿಗೆ ಯಾರೂ ಊಹಿಸಿರದ ಪಾತ್ರಗಳನ್ನು ಈ ಚಿತ್ರದಲ್ಲಿ ಮಾಡಿದ್ದಾರೆ. ರಾಜಕೀಯ, ಹಸಿವು, ಬಂಡಾಯ, ಬೆಂಕಿ, ರಕ್ತಸಿಕ್ತ ಕಥೆ 'ಕೊತ್ತಲವಾಡಿ' ಚಿತ್ರದಲ್ಲಿದೆ. ಬಿಡುಗಡೆ ಪೂರ್ವದಲ್ಲಿ ಚಿತ್ರತಂಡ
ಪತ್ರಿಕಾ ಮಾದ್ಯಮದವರೊಂದಿಗೆ ಮಾತನಾಡಿದೆ.

ಇದರ ಹೊರತಾಗಿ ‘ಕೊತ್ತಲವಾಡಿ’ ಚಿತ್ರದ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ (ಯಶ್ ತಾಯಿ) ತಮ್ಮ ಮಗ ಹಾಗೂ ಮುಂದಿನ ಯೋಜನೆ ಕುರಿತು ಮಾತನಾಡಿದರು.

ಪುಷ್ಪಾ ಅರುಣ್ ಕುಮಾರ್ ತಮ್ಮದೇ 'ಪಿಎ ಪ್ರೊಡಕ್ಷನ್'ನಡಿ ಕೊತ್ತಲವಾಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಹಾಡುಗಳಿಗೆ ವಿಕಾಸ್ ವಸಿಷ್ಠ ಸಂಗೀತ ನೀಡಿದ್ದರೆ . ಹೀರೋ ಇಂಟ್ರೊಡಕ್ಷನ್ ಹಾಗೂ ಹಿನ್ನೆಲೆ ಸಂಗೀತವನ್ನು ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ನೋಡಿಕೊಂಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ.ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ ನೀಡಿದ್ದಾರೆ.