ಎಲ್ಲರಿಗೂ ಅಚ್ಚರಿ ಎನ್ನುವಂತೆ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಪಡೆದ ಅನೇಕಕಲಾವಿದರುಗಳು ಮತ್ತು ತಂತ್ರಜ್ಞರು ಹೊರ ರಾಜ್ಯದಿಂದ ಬಂದವರು ಅಥವಾ ಅವರ ಮಾತೃಭಾಷೆ ತಮಿಳಾಗಿರದೇ, ಕನ್ನಡ, ತೆಲುಗು, ಮಲೆಯಾಳಂ, ಮರಾಠಿ ಆಗಿರುವುದನ್ನು ನಾವು ನೀವು ಈಗಾಗಲೆ ಕಂಡಿದ್ದೇವೆ. ಅದಕ್ಕೆ ಉದಾಹರಣೆ ಎನ್ನುವಂತೆ ತಮಿಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ, ಚಿತ್ರಕಥೆಗಾರ, ನಿರ್ಮಾಪಕ ಮತ್ತು ಸ್ಕ್ರೀನ್‌ಪ್ಲೇ ಕಿಂಗ್ ಎಂದೇ ಹೆಸರಾಗಿದ್ದ ಮತ್ತು ಜೂನ್ 27, 2026 ಶನಿವಾರದಂದು ತಮ್ಮ 73ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಚೆನ್ನೈನಲ್ಲಿ ನಿಧನರಾಗಿದ ಕೆ ಭಾಗ್ಯರಾಜ್ ಅವರ ಮಾತೃಭಾಷೆಯೂ ಕೂಡ ತೆಲುಗು. ಅವರ ಪೂರ್ವಜರು ಆಂಧ್ರಪ್ರದೇಶಕ್ಕೆ ಸೇರಿದವರು ಮತ್ತು ಅವರು ಬಹಳ ಹಿಂದೆಯೇ ತಮಿಳುನಾಡಿಗೆ ವಲಸೆ ಬಂದರಾಗಿದ್ದರು ಭಾಗ್ಯರಾಜ್ ಅವರ ನಿಧನವು ಕೇವಲ ತಮಿಳು ಚಿತ್ರರಂಗಕ್ಕೆ ಮಾತ್ರವಲ್ಲದೆ ಭಾರತೀಯ ಸಿನಿಮಾರಂಗಕ್ಕೇ ದೊಡ್ಡ ನಷ್ಟವಾಗಿದೆ ಎಂದರೂ ತಪ್ಪಾಗದು.

ಕೃಷ್ಣಸ್ವಾಮಿ ಭಾಗ್ಯರಾಜ್ ಕೆ.ಭಾಗ್ಯರಾಜ್ ಎಂದು ಪ್ರಖ್ಯಾತರಾದ ದಕ್ಷಿಣ ಭಾರತೀಯ ಚಲನಚಿತ್ರ ನಿರ್ದೇಶಕ , ಚಿತ್ರಕಥೆಗಾರ , ನಟ , ಸಂಯೋಜಕ , ಚಲನಚಿತ್ರ ನಿರ್ಮಾಪಕ , ಬರಹಗಾರ, ಹಿನ್ನಲೆ ಗಾಯಕ ಮತ್ತು ರಾಜಕಾರಣಿ ಹೀಗೆ ಆಡು ಮುಟ್ಟದ ಸೊಪ್ಪಿಲ್ಲಾ, ತಮಿಳು ಚಿತ್ರರಂಗದಲ್ಲಿ ಭಾಗ್ಯರಾಜ್ ಕೈ ಆಡಿಸದ ಕ್ಷೇತ್ರವಿಲ್ಲಾ ಎನ್ನುವಂತೆ ಪಕ್ಕಾ ಹೈಳ್ಳಿ ಹೈದಾ ಪಟ್ಟನದಲ್ಲಿ ಮಿಂಚಿ ಮರೆಯಾದ ಕಥೆಯೇ ರೋಚಕವಾಗಿದೆ.

- ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ಬಳಿಯ ವೆಲ್ಲಂಕೋಯಿಲ್‌ನಲ್ಲಿನ ಕೃಷಿಕರಾದ ಶ್ರೀ ಕೃಷ್ಣಸ್ವಾಮಿ ಮತ್ತು ಅಮರಾವತಿಯಮ್ಮ ದಂಪತಿಗಳಿಗೆ 7 ಜನವರಿ 1953 ಜನಿಸಿದ ಮಗ ಜೀವನದಲ್ಲಿ ಭಾಗ್ಯವಂತನಾಗಿ ಬೆಳೆಯಲಿ ಎನ್ನುವಂತೆ ಭಾಗ್ಯರಾಜ್ ಎಂದು ಹೆಸರು ಇಟ್ಟರು. ಇವರಿಗೆ ಬಾಲ್ಯದಿಂದಲೇ ಬರವಣಿಗೆ ಮತ್ತು ಶಾಲಾ ನಾಟಕಗಳಲ್ಲಿ ಅಪಾರ ಆಸಕ್ತಿ ಇತ್ತು. ಹಾಗಾಗಿಯೇ 1970ರ ದಶಕದ ಮಧ್ಯಭಾಗದಲ್ಲಿ ಜಿ. ರಾಮಕೃಷ್ಣನ್ ನಂತರ ಇತ್ತೀಚೆಗಷ್ಟೇ ನಿಧನರಾದ ಕನ್ನಡ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಶಿಷ್ಯರಾಗಿದ್ದಂತಹ ಭಾರತಿರಾಜ ಅವರ ಬಳಿಯಲ್ಲಿ ಸಹಾಯಕ ನಿರ್ದೇಶಕರಾಗಿ ತಮಿಳು ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡಲು ಪ್ರಾರಂಭಿಸಿ, ಸಿನಿಮಾದ ಸೂಕ್ಷ್ಮತೆಗಳನ್ನು ಕಲಿಯುತ್ತಲೇ ಅನೇಕ ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ಸಣ್ಣ ಸಣ್ಣ ಪಾತ್ರಗಳಲ್ಲಿಯೂ ಕಾಣಿಸಿಕೊಂಡರು. 1980 ರ ದಶಕದ ಆರಂಭದಲ್ಲಿ, ಸ್ವತಂತ್ರವಾಗಿ ಕಥೆ, ಚಿತ್ರಕಥೆ ಬರೆದು ನಟಿಸುವ ಮೂಲಕ ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಿದರು. 1979 ರಲ್ಲಿ ಸುವರಿಲ್ಲದ ಚಿತ್ತಿರಂಗಲ್ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುವ ಮೂಲಕ ಸಾಮಾನ್ಯವಾಗಿ ಸಿನಿಮಾಗಳಲ್ಲಿದ್ದ ಅತಿರಂಜಿತ ಸಾಹಸ ಮತ್ತು ಕಲ್ಪನೆಗಳಿಂದ ದೂರ ಸರಿದು, ಮಧ್ಯಮ ವರ್ಗದ ಕುಟುಂಬಗಳ ಕಥೆಗಳಿಗೆ ಭಾಗ್ಯರಾಜ್ ಜೀವ ತುಂಬಿದರು. ಹಾಸ್ಯ, ಕೌಟುಂಬಿಕ ಸವಾಲುಗಳು ಮತ್ತು ಭಾವನಾತ್ಮಕ ಸನ್ನಿವೇಶಗಳನ್ನು ಅವರು ಹೆಣೆದ ರೀತಿ ತಮಿಳು ಚಿತ್ರರಂಗದಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿತು. ಇವರ ನಿರ್ದೇಶನದ ‘ಒರು ಕೈ ಓಸೈ’ ಮತ್ತು ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ‘ಮುಂದಾನೈ ಮುಡಿಚ್ಚು‘ ಚಿತ್ರಗಳು ಇಂದಿಗೂ ಮಾದರಿಯಾಗಿವೆ.

- ಕೇವಲ ತಮಿಳಿಗಷ್ಟೇ ಸೀಮಿತವಾಗದೆ, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲೂ ತಮ್ಮದೇ ಮರುನಿರ್ಮಾಣಗೊಂಡು ಭರ್ಜರಿ ಯಶಸ್ಸು ಕಂಡವು. ಭಾಗ್ಯರಾಜ್ ಅವರ ಚಿತ್ರಕಥೆಗಳು ಉದಯೋನ್ಮುಖ ಬರಹಗಾರರಿಗೆ ಒಂದು ಸುಂದರ ಪಠ್ಯಪುಸ್ತಕದಂತೆ. ಅವರು ಕೇವಲ ದೃಶ್ಯಗಳನ್ನು ಬರೆಯುತ್ತಿರಲಿಲ್ಲ. ಬದಲಿಗೆ ಮನುಷ್ಯನ ನೈಜ ಸ್ವಭಾವವನ್ನು ತೆರೆಯ ಮೇಲೆ ತರುತ್ತಾರೆ ಎನ್ನುವ ಮಾತಿದ್ದು, 1980 ರ ದಶಕದಲ್ಲಿ ತಮಿಳು ಚಿತ್ರರಂಗದ ಅತ್ಯಂತ ಪ್ರಭಾವಶಾಲಿ ಬರಹಗಾರ-ನಿರ್ದೇಶಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಲ್ಲದೇ, ಅವರು ಭಾಗ್ಯ ಎಂಬ ತಮಿಳು ವಾರಪತ್ರಿಕೆಯ ಸಂಪಾದಕರಾಗಿದ್ದಲ್ಲದೇ ಹಲವಾರು ಕಾದಂಬರಿಗಳನ್ನು ಬರೆದಿದ್ದಾರೆ. 25 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಬರೆದು ನಿರ್ದೇಶಿಸಿದರು ಮತ್ತು 75 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. MGR ಅವರ ಅಪಾರ ಅಭಿಮಾನಿಯಾಗಿದ್ದ ಕಾರಣ, ಕೇವಲ ಚಿತ್ರರಂಗವಲ್ಲದೇ, ರಾಜಕೀಯದಲ್ಲೂ ಆಸಕ್ತಿ ಹೊಂದಿದ್ದ ಭಾಗ್ಯರಾಜ್, 1989 ರಲ್ಲಿ MGR ಮಕ್ಕಳ್ ಮುನ್ನೇತ್ರ ಕಳಗಂ ಅನ್ನು ಸ್ಥಾಪಿಸಿದರೂ, ಅವರ ಪಕ್ಷ ಜನರಿಂದ ಮನ್ನಣೆಗಳಿಸದ ಕಾರಣ ತಮ್ಮ ಪಕ್ಷವನ್ನು ಮುಂದೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದೊಂದಿಗೆ ವಿಲೀನ ಗೊಳಿಸಿದರು. ಹೀಗೆ 1990 ಮತ್ತು 2000 ರ ದಶಕದ ಆರಂಭದವರೆಗೂ ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದರೂ ಹೆಚ್ಚಿನ ಜನಮನ್ನಣೆ ಗಳಿಸಲಿಲ್ಲ.
ವಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡ ಭಾಗ್ಯರಾಜ್ ಮೊದಲು ನಟಿ ಪ್ರವೀಣಾ ಅವರನ್ನು ವಿವಾಹವಾಗಿದ್ದು, ಅವರು ಕಾಮಾಲೆ ರೋಗದಿಂದಾಗಿ 1983 ರಲ್ಲಿ ಅಕಾಲಿಕವಾಗಿ ಆಗಲಿದಾಗ ತೀವ್ರ ಆಘಾತವನ್ನು ಅನುಭವಿಸಿದ ನಂತರ ಫೆಬ್ರವರಿ 7, 1984 ರಂದು, ಖ್ಯಾತ ನಟಿ ಪೂರ್ಣಿಮಾ ಜಯರಾಮ್ ಅವರನ್ನು ಎರಡನೆ ಮದುವೆಯಾಗಿ ಅವರಿಬ್ಬರ ಸುಂದರ ದಾಂಪತ್ಯದ ಕುರುಹಾಗಿ ಶಂತನು ಭಾಗ್ಯರಾಜ್ ಮತ್ತು ಶರಣ್ಯಾ ಭಾಗ್ಯರಾಜ್ ಎಂಬ ಮಕ್ಕಳಿದ್ದು ಅವರೂ ಸಹಾ ತಮ್ಮ ಪೋಷಕರಂತೆಯೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಹಂತ ಹಂತವಾಗಿ ತಮಿಳು ಚಿತ್ರರಂಗದಿಂದ ಹೊರಬರುತ್ತಿದ್ದಂತೆ ಕಿರುತೆರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಡಿಡಿ ಪೊಧಿಗೈಗಾಗಿ ನೀಂಗ ನೆನೈಚಾ ಸಾಧ್ಯಕಳಂಗ ಮತ್ತು ಇದು ಒರು ಕಧಾಯಿನ್ ಕಧೈ ಎಂಬ ಟಿವಿ ಕಾರ್ಯಕ್ರಮಗಳನ್ನು ನಿರ್ದೇಶಿಸಿದರು ಮತ್ತು ಈ ಅವಧಿಯಲ್ಲಿ ಜಯಾ ಟಿವಿಯಲ್ಲಿ ಅಪಾಪಡಿ ಪೋಡುನಲ್ಲಿ ಕಾಣಿಸಿಕೊಂಡರು. ಅವರ ಟೆಲಿ-ಸೀರಿಯಲ್ ರೂಲ್ಸ್ ರಂಗಾಚಾರಿ ಡಿಡಿ ಚಾನೆಲ್‌ನಲ್ಲಿ ಬಹಳ ಪ್ರಸಿದ್ಧವಾಗಿತ್ತು ಮತ್ತು ಇದು 390 ಸಂಚಿಕೆಗಳನ್ನು ಪೂರ್ಣಗೊಳಿಸಿತು.आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳುಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್





