Sj*

ಲಂಡನ್, ಯುಕೆ: ನಟ, ನಿರ್ಮಾಪಕ ಹಾಗೂ ರಾಜಕಾರಣಿ ಅನಿಲ್ ಶೆಟ್ಟಿ, ಭಾರತದ ಹೆಮ್ಮೆಯ ಜಾಗತಿಕ ಮಹಿಳಾ ನಾಯಕರಾದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಹಾಗೂ ಐಎಂಎಫ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞೆ ಡಾ. ಗೀತಾ ಗೋಪಿನಾಥ್ ಅವರನ್ನು ಅಭಿನಂದಿಸಿ ಭಾವಪೂರ್ಣ ಸಾಮಾಜಿಕ ಜಾಲತಾಣ ಪೋಸ್ಟ್ ಹಂಚಿಕೊಂಡಿದ್ದಾರೆ.

ಲಂಡನ್‌ನಲ್ಲಿ ಇಂಡಿಯಾ ಗ್ಲೋಬಲ್ ಫೋರಂ ಆಯೋಜಿಸಿದ್ದ ಯುಕೆ ಇಂಡಿಯಾ ಅವಾರ್ಡ್ಸ್ ಸಮಾರಂಭದಲ್ಲಿ ಕಿರಣ್ ಮಜುಂದಾರ್ ಶಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅನಿಲ್ ಶೆಟ್ಟಿ ಇಬ್ಬರು ನಾಯಕರನ್ನು ಭೇಟಿಯಾಗಿ ಅವರೊಂದಿಗೆ ಸಂವಾದ ನಡೆಸಿದರು.

ತಮ್ಮ ಪೋಸ್ಟ್‌ನಲ್ಲಿ, ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆಯಿಂದ ಪ್ರತಿನಿಧಿಸಿರುವ ಈ ಇಬ್ಬರು ಸ್ವಯಂ ನಿರ್ಮಿತ ಮಹಿಳಾ ಸಾಧಕರಿಗೆ ಅನಿಲ್ ಗೌರವ ಸಲ್ಲಿಸಿದ್ದಾರೆ. ಮಹಿಳೆಯರಿಗೆ ಸಮಾಜವು ಕಾಣದ ಮಿತಿಗಳನ್ನು ವಿಧಿಸದೆ, ಸಮಾನ ಅವಕಾಶಗಳನ್ನು ನೀಡಿದರೆ ಅವರು ವಿಶ್ವವನ್ನು ಇನ್ನಷ್ಟು ಉತ್ತಮ ಭವಿಷ್ಯದತ್ತ ಮುನ್ನಡೆಸುವ ಶಕ್ತಿ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅವಕಾಶಗಳು ಲಿಂಗದ ಆಧಾರದ ಮೇಲೆ ಅಲ್ಲ, ಪ್ರತಿಭೆ, ಸಾಮರ್ಥ್ಯ ಮತ್ತು ಅರ್ಹತೆಯ ಆಧಾರದ ಮೇಲೆ ದೊರೆಯಬೇಕು ಎಂಬ ಸಂದೇಶವನ್ನೂ ಅವರು ತಮ್ಮ ಪೋಸ್ಟ್‌ನಲ್ಲಿ ಒತ್ತಿ ಹೇಳಿದ್ದಾರೆ.

ಅನಿಲ್ ಶೆಟ್ಟಿಯವರ ಮಾರ್ಗದರ್ಶಕರಾಗಿರುವ ಕಿರಣ್ ಮಜುಂದಾರ್ ಶಾ ಅವರ ಜಾಗತಿಕ ದೃಷ್ಟಿಕೋನ ಹಾಗೂ ನಾಯಕತ್ವದ ಚಿಂತನೆ ರೂಪುಗೊಳ್ಳುವಲ್ಲಿ ಮಹತ್ವದ ಪ್ರಭಾವ ಬೀರಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ಅನಿಲ್ ಶೆಟ್ಟಿ ಈ ವರ್ಷ ನಿರ್ದೇಶಕ ಸಿಂಪಲ್ ಸುನಿ ಅವರ ಸೈನ್ಸ್ ಫಿಕ್ಷನ್ ಸಾಮಾಜಿಕ ಥ್ರಿಲ್ಲರ್ “ಲಂಬೋಧರ 2.0” ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ