ಕಿಯಾರಾಳ ಬೋಲ್ಡ್ ಇಮೇಜ್

ಬಾಲಿವುಡ್‌ನ ಹೊಸ ಹುಡುಗಿ ಕಿಯಾರಾ ಇತ್ತೀಚೆಗೆ ತನ್ನ ಸೆಕ್ಸೀ ಬಾಡಿಯನ್ನು ಫೇಸ್‌ಬುಕ್‌ ಇತ್ಯಾದಿಗಳಲ್ಲಿ ಬೇಕೆಂದೇ ಧಾರಾಳ ಪ್ರದರ್ಶಿಸುತ್ತಿದ್ದಾಳೆ. ಒಂದು ಚಿತ್ರದ ನಂತರ ಮತ್ತೊಂದು ಸಿಗಲು ಬಹಳ ತಡವಾದಾಗ, ಕಿಯಾರಾ ಮತ್ತೇನು ಮಾಡಿಯಾಳು? ಜನರ ಮನಸ್ಸಿನಿಂದ ತಾನು ಅಳಿಸಿ ಹೋಗಬಾರದೆಂದು ಈ ರೀತಿ ಏನೇನೋ ಸರ್ಕಸ್‌ ಮಾಡುತ್ತಿದ್ದಾಳೆ. ಬರಲಿರುವ ದಿನಗಳಲ್ಲಿ ಅವಳು `ಕಬೀರ್‌ ಸಿಂಗ್‌, ಕಳಂಕ್‌, ಗುಡ್‌ ನ್ಯೂಸ್‌' ಮುಂತಾದ ಚಿತ್ರಗಳಲ್ಲಿ ಮೋಸ್ಟ್ ಗ್ಲಾಮರಸ್‌ ಆಗಿ ಕಾಣಿಸಲಿದ್ದಾಳೆ.

ಹಾಲಿವುಡ್‌ ರೀಮೇಕ್‌ ಚಿತ್ರದಲ್ಲಿ ಆಮೀರ್‌

ಅಮೀರ್‌ ಖಾನ್‌ ತನ್ನ ಲುಕ್ಸ್, ಹಾಗೂ ಬಾಡಿ ಬಗ್ಗೆ ಕೆಲಸ ಮಾಡಲು ಶುರು ಮಾಡಿದ ತಕ್ಷಣ, ಮೀಡಿಯಾದಲ್ಲಿ ಟೆನ್ಶನ್‌ ಉಂಟಾಗುತ್ತದೆ. ಈಗ ಮಿಸ್ಟರ್‌ ಪರ್ಫೆಕ್ಷನಿಸ್ಟ್ ಯಾವ ಮೋಡಿ ಮಾಡಲಿದ್ದಾನೋ ಎಂದು ಎಲ್ಲರೂ  ಕಾಯುತ್ತಾರೆ. ಇದೀಗ ಆಮೀರ್‌ ಆಸ್ಕರ್‌ ಅವಾರ್ಡ್‌ ವಿನ್ನರ್‌  ಫಿಲ್ಮ್ `ಫಾರೆಸ್ಟ್ ಜಂಪ್‌'ನ ಬಾಲಿವುಡ್‌ ರೀಮೇಕ್‌ `ಲಾಲ್‌ಸಿಂಗ್‌ ಚಡ್ಡ' ಚಿತ್ರದಲ್ಲಿ ಸರ್ದಾರ್ಜಿ ಪಾತ್ರ ವಹಿಸುತ್ತಿದ್ದಾನೆ. ಆದರೆ ಈ ಚಿತ್ರಕ್ಕಾಗಿ ಜನ ಇನ್ನೂ ಕಾಯಬೇಕು.

ಸ್ಪೈ ಚಿತ್ರ ಎಲ್ಲರಿಗೂ ಸೈ!

ಹಾಲಿವುಡ್‌ ಅಥವಾ ಬಾಲಿವುಡ್‌ ಇರಲಿ, ಪತ್ತೇದಾರಿ ಸ್ಪೈ ಚಿತ್ರಗಳು ಎಲ್ಲೆಡೆ ಮಾನ್ಯ. ಎಲ್ಲಾ ವರ್ಗದ ವೀಕ್ಷಕರಿಗೂ ಬೇಕೇಬೇಕು. ಹೀಗಿರುವಾಗ ಬಾಲಿವುಡ್‌ನ ಸ್ಪೈ ಮೂವಿ ಭಾರತ-ಪಾಕ್‌ಗೆ ಸಂಬಂಧಿಸಿದ್ದರೆ, ಮತ್ತೇನು ಹೇಳುವುದು? ಜಾನ್‌ ಅಬ್ರಹಾಂನ ಬರಲಿರುವ ಚಿತ್ರ `ರೋಮಿಯೋ ಅಕ್ಬರ್‌ ವಾಲ್ಟರ್‌' ಇಂಥ ಜಾಸೂಸ್‌ ಕಥೆ ಹೊಂದಿದೆ. ಹೀರೋ ಪಾಕ್‌ಗೆ ನುಗ್ಗಿ ಅಲ್ಲಿನ ಡಿಫೆನ್ಸ್ ರಹಸ್ಯ ಭೇದಿಸುವುದೇ ಇದರ ಮರ್ಮ. ವೀಕ್ಷಕರಿಗೆ ಇದು ಎಷ್ಟು ರುಚಿಸುತ್ತದೆ ಎಂಬುದನ್ನು ಚಿತ್ರದ ಬಿಡುಗಡೆ ನಂತರವೇ ತಿಳಿಯಬೇಕು.

ಹಾಸ್ಯ ಅಪಹಾಸ್ಯ ಆಗಬಾರದಷ್ಟೆ

ಈ ಮಾತನ್ನು ನಾವು ಹೇಳುತ್ತಿಲ್ಲ, ಬದಲಿಗೆ `ಪ್ಯಾರ್‌ ಕೇ ಪಾಪಡ್‌' ಧಾರಾವಾಹಿಯಲ್ಲಿ ಮಾನವ್ ಪಾತ್ರ ನಿರ್ವಹಿಸುತ್ತಿರುವ ಅಖಿಲೇಂದ್ರ ಮಿಶ್ರಾ ಹೇಳುತ್ತಿದ್ದಾರೆ. ಇತ್ತೀಚಿನ ಕಿರುತೆರೆ ಕಾಮಿಡಿ ಯಾಕೋ ಸರಿ ಇಲ್ಲ ಎಂಬುದು ಅವರ ಅಭಿಮತ. ಈ ಧಾರಾವಾಹಿಯಲ್ಲಿ ಮಾವ ಅಳಿಯನ ಮಧ್ಯೆ ನಡೆಯುವ ಲಟಾಪಟಿಯೇ ಕಥಾವಸ್ತು. ಆದರೆ ಅದು ಅಶ್ಲೀಲತೆಯ ಗಡಿಗೆ ನುಸುಳಬಾರದು ಎನ್ನುತ್ತಾರೆ. ಇದರಲ್ಲಿ ಅಳಿಯನ ಪಾತ್ರ ವಹಿಸಿದವರು ಅಕ್ಷಯ್‌ ಮಿಶ್ರಾ.

ನಾನೂ ಲೈಂಗಿಕ ಶೋಷಣೆಗೆ ಒಳಗಾದವಳೇ!

ದಬಂಗ್‌ ಗರ್ಲ್ ಫಾತಿಮಾ ಸನಾ ಶೇಕ್‌ ಒಮ್ಮೆ ತನ್ನ ಬೋಲ್ಡ್  ಲುಕ್ಸ್, ಮತ್ತೊಮ್ಮೆ ಸಡಿಲ ಮಾತುಗಳಿಂದಾಗಿ ಚರ್ಚೆಯಲ್ಲಿರುತ್ತಾಳೆ. ಇತ್ತೀಚೆಗೆ ಅವಳು ತಿಳಿಯಪಡಿಸಿದ ವಿಷಯವೆಂದರೆ,  ತಾನೂ ಲೈಂಗಿಕ ಶೋಷಣೆಗೆ ಒಳಗಾದವಳಂತೆ! ಪತ್ರಕರ್ತರು ಇದು ಯಾವಾಗ ಹೇಗಾಯಿತು ಎಂದು ಕೇಳಿದಾಗ, ಅದೆಲ್ಲ ಹೇಳಲು ಈಗ ಸಮಯ ತಕ್ಕುದಲ್ಲ, ಮುಂದೆ ನೋಡೋಣ ಎನ್ನುತ್ತಾಳೆ. ಇದೊಳ್ಳೆ ಕಥೆ ಕಣ್ರಿ, ಇದನ್ನು ಹೇಳಲಿಕ್ಕೂ ಮುಹೂರ್ತ ಬೇಕೇ?

ಮತ್ತೆ ಬರಲಿದ್ದಾಳೆ ಅಥಿಯಾ

ನಾಯಕಿ ಅಥಿಯಾಳ ಆರಂಭಿಕ ಚಿತ್ರಗಳಾದ `ಹೀರೋ, ಮುಬಾರ್ಕಾ' ವೀಕ್ಷಕರಿಗೆ ಇಷ್ಟವಾಗದ ಕಾರಣ ಮಖಾಡೆ ಮಲಗಿತು. ಅಷ್ಟು ಮಾತ್ರಕ್ಕೆ ಇವಳು ಸೋಲೊಪ್ಪುವಳೇ? ಈ ತಿಂಗಳಾಂತ್ಯದಲ್ಲಿ ಇವಳ `ಮೋತಿ ಚೂರ್‌ ಚಕ್ನಾ ಚೂರ್‌' ಚಿತ್ರ ಬಿಡುಗಡೆ ಕಾಣಲಿದೆ. ಈ ಚಿತ್ರದಲ್ಲಿ ನಾಯಕ ಎಂದರೆ ನಾಜುದ್ದೀನ್‌ ಸಿದ್ದಿಕಿ. ನಾಜ್‌ ಹಿಟ್‌ ಚಿತ್ರ ನೀಡುತ್ತಿರುವುದರಿಂದ ಆ ನೆಪದಲ್ಲಿ ಅಥಿಯಾಗೆ ಪಾಸ್‌ ಮಾರ್ಕ್ಸ್ ಸಿಗಬಹುದೇ....? ನೋಡೋಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ