- ರಾಘವೇಂದ್ರ ಅಡಿಗ ಎಚ್ಚೆನ್.

ಎಸ್ ಪಿ ಜಿ ಸಿನಿಮಾಸ್  ಅವರ ‘ಕೊಹಿನೂರು’  ಚಿತ್ರದ ಅಡಿ ಬರಹ ‘ದ ಮಿರಾಕಲ್ ಡೈಮಂಡ್‌’  ಎಂಬ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭವು  ಹಾರೋಹಳ್ಳಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಥ್ರಿಲ್ಲರ್, ಹಾರರ್,ದೈವಭಕ್ತಿ ಮತ್ತು ಶಕ್ತಿಯನ್ನು ಒಳಗೊಂಡಿರುವ ಚಿತ್ರಕ್ಕೆ ಪ್ರಿಯದರ್ಶನ, ಸಂತೋಷ್ ಕ್ಯಾಮರಾಗುಂಡಿ ಒತ್ತುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರೆ, ಭಾನುಮತಿ ಗಜೇಂದ್ರ ಕ್ಲಾಪ್ ಮಾಡಿದರು. ಮುಹೂರ್ತಕ್ಕೆ ಆಗಮಿಸಿದ ಗಣ್ಯರು ಚಿತ್ರ ತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳು, ನಾಲ್ಕು   ಸಾಹಸ ದೃಶ್ಯಾವಳಿಗಳಿವೆ. ಈಗ ಸತತ ಚಿತ್ರೀಕರಣ ನಡೆಸುತ್ತಿದ್ದು  ಒಂದೇ ಹಂತದಲ್ಲಿ ಚಿತ್ರೀಕರಣವನ್ನು  ಮುಗಿಸುವ ಯೋಜನೆಯನ್ನು ಹಾಕಿದ್ದೇವೆ.ಈ ಕಥೆಯನ್ನು ಚಿತ್ರಮಂದಿರದಲ್ಲೇ ಪ್ರೇಕ್ಷಕರು ನೋಡಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಅದರ ಸಾರ ಹೇಳುತ್ತಿಲ್ಲ ಸಧ್ಯ ಹಾರೋಹಳ್ಳಿಯ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ ಎಂದು   ನಿರ್ದೇಶಕರಾದ ಕೆ ಸುರೇಶ್ ಗೋಸ್ವಾಮಿ ಹೇಳಿದರು.
ತಾರಾಗಣದಲ್ಲಿ ಭಾವನ, ರುದ್ರಾಕ್ಷ , ಜೀವನ್, ಹಿಮ, ನವೀನ್, ತನು, ಪ್ರಸಾದ್,ಸುನಿಲ್ ಕುಮಾರ್, ಶ್ರೀಕಾಂತ್,ವಿನಯ್, ಇ ಎಸ್‌. ರವಿ, ಮಾದೇಗೌಡ, ತ್ಯಾಗ ಮೊದಲಾದವರು ಅಭಿನಯಿಸುತ್ತಿದ್ದು , ಕ್ಯಾಮೆರಾ   ರಾಜ ಶಿವಶಂಕರ್,   ಈ ಚಿತ್ರದ ಚಿತ್ರದ ಕಥೆ ಬರೆಯುವದರೊಂದಿಗೆ  ರಾಜಂ ಅರ್‌. ಇ ಗಜೇಂದ್ರ ಅವರು  ನಿರ್ಮಾಪಕರೂ ಆಗಿದ್ದಾರೆ.  ಸಾಹಸ ನಿರ್ದೇಶನ ಸುಪ್ರೀಂ ಸುಬ್ಬು, ಸಂಗೀತ  ದಿವಾಕರ್, ಸಂಕಲನ ದುರ್ಗಾ ಪ್ರಸಾದ್, ಪತ್ರಿಕಾ ಸಂಪರ್ಕ ಕಾರ್ತಿಕ ಸುಧನ್ , ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಸುರೇಶ, ಧೀರನ್ ,ಆನಂದ್, ಹರಿಹರನ್ ಬಿ.ಪಿ ಸಹನಿರ್ದೇಶಕರಾಗಿದ್ದು, ಸಹ ನಿರ್ಮಾಪಕರಾಗಿ ಪ್ರಿಯಾ ದರ್ಶನ ರವರು ಬಂಡವಾಳ ಹೂಡಿದ್ದಾರೆ. ಚಿತ್ರವನ್ನು ಆದಷ್ಟು ಬೇಗ ತೆರೆಗೆ ತರುವದಾಗಿ ನಿರ್ಮಾಪಕರು ತಿಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ