- ರಾಘವೇಂದ್ರ ಅಡಿಗ ಎಚ್ಚೆನ್.

ಕಲಾಭೂಮಿ ಕಂಬೈನ್ಸ್ ಅಡಿಯಲ್ಲಿ ಆಸ್ಕರ್ ಕೃಷ್ಣ ನಿರ್ದೇಶಿಸುತ್ತಿರುವ “ಕುಡುಕ ನನ್ಮಕ್ಳು” ಚಿತ್ರದ ಮೊದಲನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಈ ಚಿತ್ರದಲ್ಲಿ ನಟಿ ಚೈತ್ರಾ ಕೊಟ್ಟೂರು ಮೈಚಳಿ ಬಿಟ್ಟು ನಟಿಸಿದ್ದು ಪಡ್ಡೆ ಹುಡುಗರ ಎದೆ ಝಲ್ಲೆನ್ನುವಂತೆ ಮಾಡಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ದಸರಾ ಅಥವಾ ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ.
‘ತುಂಬಾ ಒಳ್ಳೆಯವರು’ ಅಡಿ ಬರಹ ಹೊಂದಿರುವ ಚಿತ್ರವು  ಬೆಂಗಳೂರು ನಗರ ಹಾಗೂ  ಹೊರ ವಲಯಗಳಲ್ಲಿ ಸುಮಾರು ಇಪ್ಪತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಿದ ಚಿತ್ರತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳಾದ ಚಂದ್ರಪ್ರಭ, ವಿನೋದ್ ಗೊಬ್ರಗಾಲ, ಮಿಮಿಕ್ರಿ ಗೋಪಿ, ಸಚಿನ್ ಪುರೋಹಿತ್, ಚೈತ್ರಾ ಕೊಟ್ಟೂರು ಸೇರಿದಂತೆ ಹಾಸ್ಯ ಕಲಾವಿದರ ದಂಡೇ ಇದೆ.

kuduka 1
ಚಿತ್ರದಲ್ಲಿ ಎರಡು ಹಾಡುಗಳಿದ್ದು  ಸಾಹಿತ್ಯ ಮತ್ತು ಸಂಗೀತ ಮಂಜು ಕವಿ ಅವರದಿದೆ. ವಿನಯ್ ಗೌಡ ಛಾಯಾಗ್ರಹಣ, ಅಯುರ್ ಸಂಕಲನ, ಹಲವಾರು ರಿಯಾಲಿಟಿ ಶೋಗಳಿಗೆ ಹಾಸ್ಯ ಸಾಹಿತ್ಯವನ್ನೊದಗಿಸಿದ ವೆಂಕಟ್‌ರವರ ಸಂಭಾಷಣೆ, ಪಿ.ಆರ್ ಓ ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಆಗಿದ್ದಾರೆ.
ಅರುಣ ಎಲ್ ಶೆಟ್ಟಿ, ವೈಶಾಲಿ ಮುರಳೀಧರ್, ಪಲ್ಲವಿ ಅಗ್ನಿಹೋತ್ರಿ, ಬಾಬು ಎಸ್. ಹೆಚ್(ತುಮಕೂರು), ರವಿ ನಾಯಕ್, ನಿಂಗರಾಜು.ಬಿ, ಲೋಕೇಶ್ ಕೆ.ಎಸ್ ಮತ್ತು ಸಿದ್ದಲಿಂಗಯ್ಯ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. 25,30,35,40 ವರ್ಷದ ನಾಲ್ವರು ವ್ಯಕ್ತಿಗಳ ಬದುಕಿನ ಮೂಲಕ ಕುಡಿತದ ಪರಿಣಾಮ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮನರಂಜನೆಯ ಮೂಲಕ ತೋರಿಸಲಾಗುತ್ತಿದ್ದು ಅರ್ಥಪೂರ್ಣ ಸಂದೇಶವೂ ಚಿತ್ರದಲ್ಲಿದೆ ಎಂದು ನಿರ್ದೇಶಕ ಆಸ್ಕರ ಕೃಷ್ಣ ತಿಳಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ