ಪ್ರೇಯಸಿ : ಮದುವೆ ನಂತರದ ನಿನ್ನ ಎಲ್ಲಾ ದುಃಖವನ್ನೂ ನನ್ನದೆಂದೇ ಭಾವಿಸಿ, ಅದನ್ನು ಹಂಚಿಕೊಳ್ಳುತ್ತೇನೆ!
ಪ್ರಿಯತಮ : ಅಯ್ಯೋ... ಆದರೆ ನನಗೆ ಯಾವ ದುಃಖ ಇಲ್ಲವಲ್ಲ.....?
ಪ್ರೇಯಸಿ : ಅರೇ.... ನಾನು ಹೇಳಿದ್ದು ಮದುವೆ ಆದ ನಂತರ ಶುರುವಾಗುವ ದುಃಖಗಳ ಬಗ್ಗೆ!
ಪತ್ನಿ : ಅದು ಸರಿ, ನಾನು ಹಾಡು ಹೇಳಲು ಶುರು ಮಾಡಿದಾಗೆಲ್ಲ ನೀವೇಕೆ ಹೋಗಿ ಬಾಲ್ಕನಿಯಲ್ಲಿ ನಿಂತುಬಿಡ್ತೀರಿ?
ಪತಿ : ಇದರಿಂದ ನಮ್ಮ ನೆರೆಹೊರೆಯವರಿಗೆ ನಾನು ನಿನ್ನನ್ನು ಹೊಡೆದೂ ಬಡಿದೂ ಮಾಡ್ತಿಲ್ಲ, ಒಂಟಿಯಾಗಿ ಬಾಲ್ಕನಿಯಲ್ಲೇ ನಿಂತಿದ್ದೇನೆ ಅಂತ ಸ್ಪಷ್ಟವಾಗಿ ಗೊತ್ತಾಗಲಿ ಎಂಬುದೇ ನನ್ನ ಉದ್ದೇಶ!
ಕನ್ಯಾಪಿತೃ : ಎಲ್ಲಾ ಸರಿ ಕಣಪ್ಪ, ನೀನು ಯಾವ ಕೆಲಸ ಮಾಡಿಕೊಂಡಿದ್ದೀಯಾ?
ಸೀನ : ನಾನಾ? ಐ ಆ್ಯಮ್ ಏರ್ ಡಿಫ್ಯೂಷನ್‌ಮಾನಿಟರಿಂಗ್ ಟೆಕ್ನಿಶಿಯನ್!
ಕನ್ಯಾಪಿತೃ : ಆಹಾ.... ಇಂಥ ಅಳಿಯನನ್ನು ಪಡೆಯಲು ನಾ ಪುಣ್ಯ ಮಾಡಿದ್ದೆ.
ಮದುವೆ ಆಗಿ 1 ವಾರ ಕಳೆಯುವಷ್ಟರಲ್ಲಿ ಮಗಳು ಮುನಿಸಿಕೊಂಡು ತನ್ನ ಪೆಟ್ಟಿಗೆ ಸಮೇತ ತವರಿಗೆ ಬಂದು ಇಳಿದಳು. ಆಗ ಇದೇಕೆ ಎಡವಟ್ಟಾಯಿತು ಎಂದು ಅಳಿಯನ ಕುರಿತು ಮಾವ ಹೋಗಿ ವಿಚಾರಿಸಿದಾಗ, ಅವನು ಕಲಾಸಿಪಾಳ್ಯದ ಮೂಲೆ ಮರದ ಕೆಳಗೆ ಗಾಡಿಗಳಿಗೆ ಟ್ಯೂಬ್ ಸರಿಪಡಿಸುವ ಪಂಕ್ಚರ್ ಕೆಲಸ ಮಾಡುತ್ತಾನೆ ಎಂದು ಖಾತ್ರಿಯಾಯಿತು. ಅದನ್ನು ಸ್ಟೈಲಾಗಿ ಇಂಗ್ಲಿಷ್ ನಲ್ಲಿ ಅಳೀಮಯ್ಯ ಪ್ರಾಮಾಣಿಕವಾಗಿ ಹೇಳಿದವನೇ... ಎಂದು ಕಣ್ಣಾರೆ ಕಂಡಿದ್ದನ್ನು ಮತ್ತೆ ಮತ್ತೆ ವಿಶ್ಲೇಷಿಸಿದ ಮಾವ, 2-3 ಸಲ ಆತ್ಮಹತ್ಯೆಗೆ ಪ್ರಯತ್ನಿಸಿದಂತೆ!
ಮದುವೆಯ ಮೊದಲ ರಾತ್ರಿಯಂದು ಪತ್ನಿ ತಲೆಯ ಮೇಲೆ ಸೆರಗು ಹೊದ್ದು, ಹಾಲು ಹಿಡಿದು ಬಂದಳು. ವರ ಮಹಾಶಯ ಅವಳ ಸೆರಗು ಸರಿಪಡಿಸಿ.... ಒಂದು ಕ್ಷಣ ಮಾರ್ಮಿಕವಾಗಿ.... ಅಂತೂ ಸುಧಾರಿಸಿಕೊಂಡು ಎದ್ದು ಕುಳಿತ.
ಪತ್ನಿ : ಏನೂಂದ್ರೆ.... ಯಾವುದಾದರೂ ಸಿನಿಮಾ ನೋಡಿ ಹೆದರಿದ್ರಾ ಏನು?
ಪತಿ : ಬೇಡ ಬೇಡ ಅಂದ್ರೂ ನನ್ನ ಫ್ರೆಂಡ್ಸ್ ದೆವ್ವದ ಸಿನಿಮಾಗಳಿಗೆ ಕರೆದೊಯ್ಯುತ್ತಿದ್ದರು. ಅದೀಗ ಎಷ್ಟು ಸಹಾಯಕರ ಅಂತ ಗೊತ್ತಾಯ್ತು!
ಕಿಟ್ಟಿಯ ಮದುವೆಯಾಗಿ 1 ತಿಂಗಳು ಕಳೆದಿತ್ತು. ಅವನ ಪತ್ನಿ ಒಮ್ಮೆ ಗೊಣಗಿದಳು, ``ಇತ್ತೀಚೆಗೆ ನೀವು ನನ್ನ ಸೌಂದರ್ಯದ ಬಗ್ಗೆ ಹೊಗಳುವುದೇ ಇಲ್ಲ. ಮದುವೆಯಾದ ಹೊಸತರಲ್ಲಿ ಎಷ್ಟೊಂದು ವರ್ಣಿಸುತ್ತಿದ್ದಿರಿ....''
ಕಿಟ್ಟಿ ಹೇಳಿದ, ``ಡಾರ್ಲಿಂಗ್, ಯಾವುದು ಹೇಗಾದರೂ ಇರಲಿ, ನಿನ್ನ ಕೇಶ ಸೌಂದರ್ಯ ಮಾತ್ರ ಹೊಗಳದೇ ಇರಲಾಗದು. ಹಾಗಾಗಿಯೇ ನಿನ್ನ ದಟ್ಟ, ಮೇಘರಾಶಿಯಂಥ ಮುಂಗುರುಳು ಒಮ್ಮೆ ಪಲ್ಯ, ಒಮ್ಮೆ ರೊಟ್ಟಿ, ಒಮ್ಮೊಮ್ಮೆ ಅನ್ನದಲ್ಲೂ ಮಿಂಚುತ್ತಿರುತ್ತದೆ.....'' ಎನ್ನುವುದೇ?
ಈ ಸಲದ ಚಳಿಗಾಲದಲ್ಲಿ ಉ.ಭಾರತವಿಡೀ ಅತಿಯಾದ ಶೀತ, ಥಂಡಿಯಿಂದಾಗಿ ಎಲ್ಲರನ್ನೂ ನಡುಗಿಸಿಬಿಟ್ಟಿತ್ತು. ಆಗ ಸರಕಾರದ ಕಡೆಯಿಂದ ಒಂದು ವಿಶೇಷ ಸೂಚನೆ ಪ್ರಕಟವಾಯಿತು :
ನೀರಿನ ಕೊರತೆ ಇರುವುದರಿಂದ, ಈ ಸೀಸನ್ನಿನಲ್ಲಿ ಥಂಡಿ ಅತಿ ಹೆಚ್ಚಾಗಿರುವುದರಿಂದ, ಯಾರಿಗೆ ಸಾಧ್ಯವೋ ಅವರು ಮಾತ್ರ ಸ್ನಾನ ಮಾಡಿ. ಅಂಥ ವ್ಯಕ್ತಿಯನ್ನು ಮುಟ್ಟಿಕೊಂಡ ಇತರರನ್ನೂ ಸ್ನಾನ ಮಾಡಿದವರೆಂದೇ ಪರಿಗಣಿಸಲಾಗುತ್ತದೆ!





