ಫಿಫಾ ವಿಶ್ವಕಪ್ 2026ರ ಕ್ವಾರ್ಟರ್-ಫೈನಲ್‌ನಲ್ಲಿ ಸ್ಪೇನ್ ಮತ್ತು ಬೆಲ್ಜಿಯಂ ತಂಡಗಳು ಮುಖಾಮುಖಿಯಾಗುತ್ತಿದ್ದು, ಎರಡು ಭಿನ್ನ ಫುಟ್‌ಬಾಲ್ ಶೈಲಿಗಳ ನಡುವಿನ ಈ ಕದನ ಕುತೂಹಲ ಮೂಡಿಸಿವೆ. ಸ್ಪೇನ್ ತಂಡವು ತನ್ನ ಸಾಂಪ್ರದಾಯಿಕ 'ಪೊಸೆಷನ್' ಆಟವನ್ನು ನಂಬಿದ್ದರೆ, ಬೆಲ್ಜಿಯಂ ತಂಡವು ಮಾರಕವಾದ 'ಕೌಂಟರ್-ಅಟ್ಯಾಕ್' ತಂತ್ರಕ್ಕೆ ಹೆಸರುವಾಸಿಯಾಗಿದೆ.

ಸ್ಪೇನ್ ತಂಡದ ಮಿಡ್‌ಫೀಲ್ಡ್ ಮಾಂತ್ರಿಕರಾದ ಪೆಡ್ರಿ ಮತ್ತು ರೋಡ್ರಿ ಹಾಗೂ ಯುವ ಪ್ರತಿಭೆ ಲ್ಯಾಮಿನೆ ಯಾಮಲ್ ಬೆಲ್ಜಿಯಂನ ರಕ್ಷಣಾ ಕೋಟೆಯನ್ನು ಭೇದಿಸಲು ಸಜ್ಜಾಗಿದ್ದಾರೆ. ಆದರೆ, ಬೆಲ್ಜಿಯಂ ತಂಡವು ಕೆವಿನ್ ಡಿ ಬ್ರೂಯ್ನೆ, ಜೆರೆಮಿ ಡೊಕು ಮತ್ತು ಲಿಯಾನ್‌ಡ್ರೊ ಟ್ರೊಸಾರ್ಡ್ ಅವರಂತಹ ಚುರುಕಾದ ಆಟಗಾರರ ಮೂಲಕ ಕ್ಷಣಾರ್ಧದಲ್ಲಿ ದಾಳಿ ನಡೆಸಬಲ್ಲದು.

ಈ ಪಂದ್ಯದ ಕುರಿತು ಜೀ5 (Zee5) ತಜ್ಞ ಮತ್ತು ಭಾರತೀಯ ಫುಟ್‌ಬಾಲ್ ಮಾಜಿ ಆಟಗಾರ ರಾಬಿನ್ ಸಿಂಗ್ ಮಾತನಾಡಿ, ಸ್ಪೇನ್ ತಂಡವು ಮಿಡ್‌ಫೀಲ್ಡ್​​ನಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಪೆಡ್ರಿ ಅವರು ಎದುರಾಳಿಯ ರಕ್ಷಣಾವ್ಯೂಹದ ನಡುವೆ ಆಟವನ್ನು ಮುನ್ನಡೆಸಬೇಕು. ಲ್ಯಾಮಿನೆ ಯಾಮಲ್ ಅವರಿಗೆ ಒಬ್ಬರ ವಿರುದ್ಧ ಒಬ್ಬರು (1v1) ಆಡುವ ಅವಕಾಶಗಳನ್ನು ಸೃಷ್ಟಿಸಿಕೊಟ್ಟರೆ, ಅದು ಬೆಲ್ಜಿಯಂ ತಂಡಕ್ಕೆ ದೊಡ್ಡ ಸವಾಲಾಗಲಿದೆ. ಮತ್ತೊಂದೆಡೆ, ಬೆಲ್ಜಿಯಂ ತಂಡವು ರಕ್ಷಣಾತ್ಮಕವಾಗಿ ಆಡುತ್ತಲೇ ಡೊಕು ಮತ್ತು ಟ್ರೊಸಾರ್ಡ್ ಅವರ ವೇಗವನ್ನು ಬಳಸಿಕೊಂಡು ಪ್ರತಿ-ದಾಳಿ ನಡೆಸಲು ಕಾಯುತ್ತದೆ. ಅವರು ಪಂದ್ಯದ ಆರಂಭದಲ್ಲಿಯೇ ಗೋಲು ಗಳಿಸಿದರೆ, ಸ್ಪೇನ್ ತಂಡ ಒತ್ತಡಕ್ಕೆ ಸಿಲುಕಿ ಡಿಫೆನ್ಸ್​ನಲ್ಲಿ ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ. ಆದ್ದರಿಂದ ಸ್ಪೇನ್ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಬೇಕು ಮತ್ತು ಬೆಲ್ಜಿಯಂಗೆ ಪ್ರತಿ-ದಾಳಿಗೆ ಅವಕಾಶ ನೀಡಬಾರದು. ರಕ್ಷಣಾ ವಿಭಾಗದಲ್ಲಿ 5-4-1 ಫಾರ್ಮೇಷನ್ ಅಳವಡಿಸಿಕೊಂಡಿರುವ ಬೆಲ್ಜಿಯಂ ತಂಡ, ಕೇವಲ ರಕ್ಷಣೆಯನ್ನೇ ನಂಬಿಕೊಂಡರೆ ಸ್ಪೇನ್‌ನಂತಹ ಬಲಿಷ್ಠ ತಂಡದ ವಿರುದ್ಧ ಸೋಲುವ ಅಪಾಯವಿದೆ," ಎಂದು ರಾಬಿನ್ ಎಚ್ಚರಿಸಿದ್ದಾರೆ.

ಲ್ಯಾಮಿನೆ ಯಾಮಲ್ vs ಬೆಲ್ಜಿಯಂ ಡಿಫೆನ್ಸ್ (Lamine Yamal vs Belgium's left flank ): ಯಾಮಲ್ ಬಹಳ ವೇಗವಾಗಿ ಚೆಂಡನ್ನು ತೆಗೆದುಕೊಂಡು ಹೋಗುತ್ತಾರೆ. ಅವರನ್ನು ಬೆಲ್ಜಿಯಂ ಆಟಗಾರರು ಹೇಗೆ ತಡೆಯುತ್ತಾರೆ ಎನ್ನುವುದರ ಮೇಲೆ ಪಂದ್ಯದ ಫಲಿತಾಂಶ ನಿಂತಿದೆ.

ಜೆರೆಮಿ ಡೊಕು vs ಪೆಡ್ರೊ ಪೊರೊ (Jeremy Doku vs Pedro Porro ) : ಸ್ಪೇನ್‌ನ ಡಿಫೆಂಡರ್ ಪೆಡ್ರೊ ಪೊರೊ ದಾಳಿಗೆ ಹೋದಾಗ, ಬೆಲ್ಜಿಯಂನ ಡೊಕು ತಮ್ಮ ವೇಗದಿಂದ ಸ್ಪೇನ್‌ಗೆ ತೊಂದರೆ ಕೊಡಬಹುದು. ಆದ್ದರಿಂದ, ಡೊಕು ಅವರ ಮೇಲೆ ನಿಗಾ ಇಡುವುದು ಸ್ಪೇನ್‌ಗೆ ಬಹಳ ಮುಖ್ಯ.

ರೋಡ್ರಿ vs ಕೆವಿನ್ ಡಿ ಬ್ರೂಯ್ನೆ (Rodri vs Kevin De ಬೃಯ್ನ್) : ಇವರಿಬ್ಬರೂ ತಮ್ಮ ತಂಡದ ಪ್ರಮುಖ ಆಟಗಾರರು. ಇವರಿಬ್ಬರಲ್ಲಿ ಯಾರು ಮಿಡ್‌ಫೀಲ್ಡ್​ನಲ್ಲಿ ಚೆನ್ನಾಗಿ ಆಡುತ್ತಾರೋ, ಅವರ ತಂಡವೇ ಪಂದ್ಯದ ಗತಿಯನ್ನು ನಿರ್ಧರಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ