– ರಾಘವೇಂದ್ರ ಅಡಿಗ ಎಚ್ಚೆನ್.

ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಸಿನಿಮಾ ಇಂದು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಸಂಚಿತ್ ಸಂಜೀವ್ ಚೊಚ್ಚಳ ಚಿತ್ರಕ್ಕಾಗಿ ಸ್ಯಾಂಡಲ್​ವುಡ್ ಸ್ಟಾರ್ಸ್ ಒಂದಾಗಿದ್ದು, ಚಿತ್ರದ ಪ್ರಚಾರದ ಬ್ಯಾನರ್‌ಗಳಲ್ಲಿ ಕನ್ನಡದ ದಿಗ್ಗಜರು ಹಾಗೂ ಇಂದಿನ ಯುವ ಸ್ಟಾರ್‌ಗಳ ಫೋಟೋಗಳು ರಾರಾಜಿಸುತ್ತಿವೆ.

ಮ್ಯಾಂಗೋ ಪಚ್ಚ’ನಿಗಾಗಿ ನಟ ದರ್ಶನ್, ಕಿಚ್ಚ ಸುದೀಪ್ ಅವರ ಫೋಟೋಗಳು ಒಂದೇ ಬ್ಯಾನರ್‌ನಲ್ಲಿ ಕಾಣಿಸಿಕೊಂಡಿವೆ. ಚಿತ್ರದ ಬ್ಯಾನರ್​ನಲ್ಲಿ ಡಾ. ರಾಜ್​ಕುಮಾರ್, ಅಂಬರೀಶ್, ಶಂಕರ್​ನಾಗ್​, ಡಾ. ಪುನೀತ್ ರಾಜ್​ಕುಮಾರ್ ಹಾಗೂ ಇಂದಿನ ನಟರಾದ ಡಾಲಿ ದನಂಜಯ್, ಯಶ್, ರಿಷಬ್ ಶೆಟ್ಟಿ ಫೋಟೋ ಕೂಡ ಇದೆ.

mango2

ಸ್ಯಾಂಡಲ್​ವುಡ್​ನ ದಿಗ್ಗಜರು ಹಾಗೂ ಇಂದಿನ ಯುವ ಸ್ಟಾರ್‌ಗಳ ಆಶೀರ್ವಾದ ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಮೇಲಿದ್ದು, ನಾಳೆ ರಾಜ್ಯಾದ್ಯಂತ ಅತ್ಯಂತ ಅದ್ಧೂರಿಯಾಗಿ ಚಿತ್ರ ತೆರೆಗೆ ಬರುತ್ತಿದೆ. ಸಂತೋಷ್ ಚಿತ್ರಮಂದಿರ ಸೇರಿದಂತೆ ನಗರದ ಹಲವು ಪ್ರಮುಖ ಚಿತ್ರಮಂದಿರಗಳಲ್ಲಿ ಸ್ಯಾಂಡಲ್​ವುಡ್ ಸ್ಟಾರ್‌ಗಳ ಫೋಟೋಗಳಿರುವ ಬ್ಯಾನರ್ ಅಳವಡಿಸಿ, ಪಚ್ಚನನ್ನು ಅದ್ಧೂರಿಯಾಗಿ ಚಿತ್ರರಂಗಕ್ಕೆ ಸ್ವಾಗತಿಸಲಾಗುತ್ತಿದೆ.

ವಿಶೇಷವೆಂದರೆ ಕಿಚ್ಚ ಸುದೀಪ್ ಅವರ ಸಿನಿ ಬದುಕಿನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ, ಅವರ ಪಾಲಿನ ಲಕ್ಕಿ ಥಿಯೇಟರ್ ಎಂದೇ ಹೆಸರಾಗಿರುವ ಚಿತ್ರಮಂದಿರದಲ್ಲೇ ಸೋದರಳಿಯ ಸಂಚಿತ್ ಅವರ ‘ಮ್ಯಾಂಗೋ ಪಚ್ಚ’ ಕೂಡ ಬಿಡುಗಡೆಯಾಗುತ್ತಿದೆ.

mango3

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಸಂಚಿತ್ ಸಂಜೀವ್​​ಗೆ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಪ್ರಶಾಂತ್ ಹಿರೇಮಠ್, ಜೈ ಗೋಪಿನಾಥ್, ಹರಿಣಿ ಶ್ರೀಕಾಂತ್, ಉಗ್ರಂ ಮಂಜು, ಮಯೂರ್ ಪಟೇಲ್ ತಾರಾಗಣದಲ್ಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ