ನ್ಯಾಷನಲ್ ಕ್ರಶ್.. ಬಹುಭಾಷಾ ನಟಿ.. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಯಾರನ್ನ ಲವ್ ಮಾಡ್ತಿದ್ದಾರೆ..? ಯಾರನ್ನ ಮದುವೆ ಆಗ್ತಾರೆ..? ತೆಲುಗು ನಟ ವಿಜಯ್ ದೇವರಕೊಂಡ ಅವರನ್ನ ಲವ್ ಮಾಡ್ತಿದ್ದಾರಾ..? ಅವರನ್ನೇ ಮದುವೆ ಆಗ್ತಾರಾ..? ಅನ್ನೋ ಪ್ರಶ್ನೆ ಮೇಲೆ ಪ್ರಶ್ನೆ ಹುಟ್ಟಿಕೊಳ್ತಿರುವ ಹೊತ್ತಿನಲ್ಲೇ ನಟಿ ರಶ್ಮಿಕಾ ಮಂದಣ್ಣ ಒಂದು ಸ್ಫೋಟಕ ಸುದ್ದಿಯೊಂದನ್ನ ಬ್ಲಾಸ್ಟ್ ಮಾಡಿದ್ದಾರೆ. ತಾನು ಒಂಟಿಯಲ್ಲ ಜಂಟಿ ಅಂತಾ ಹೇಳೋ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.
‘ಛಾವಾ’ ಸಿನಿಮಾದ ರಿಲೀಸ್ ಬ್ಯುಸಿಯಲ್ಲಿರೋ ನಟಿ ರಶ್ಮಿಕಾ ಮಂದಣ್ಣ ತಾವು ರಿಲೇಶನ್ಶಿಪ್ನಲ್ಲಿರೋದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ‘ಪಾರ್ಟ್ನರ್’ ಅಂತಾ ಪದ ಬಳಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಅಂತೆ ಕಂತೆಯ ಸಂತೆ ಶುರುವಾಗಿಬಿಟ್ಟಿದೆ. ರಶ್ಮಿಕಾಗೆ ಪಾರ್ಟ್ನರ್ ಆಗಿರೋದು ಯಾರು..? ಅವರೇನಾ..? ಅಂತೆಲ್ಲಾ ಚರ್ಚೆ ಜೋರಾಗಿದೆ.
ರಶ್ಮಿಕಾ ಹೇಳಿದ್ದಿಷ್ಟು: ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ರಶ್ಮಿಕಾ ಮಂದಣ್ಣ ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. ತಮ್ಮ ಖುಷಿಯ ಜಾಗ ಯಾವುದು ಅಂತಾ ಹೇಳುವಾಗ ತನ್ನ ಸಂಗಾತಿಯ ಬಗ್ಗೆಯೂ ತಿಳಿಸಿದ್ದಾರೆ. ಆದ್ರೆ, ಅವರು ಯಾರು ಅನ್ನೋದನ್ನ ಮಾತ್ರ ಬಹಿರಂಗಪಡಿಸಿಲ್ಲ. ‘ನನಗೆ ನನ್ನ ಮನೆಯೇ ಖುಷಿ ಕೊಡುವ ಪ್ಲೇಸ್. ಇವತ್ತು ಇರೋ ನೇಮು ಫೇಮು ನಾಳೆ ಇರಬಹುದು.. ಇಲ್ಲದೆನೂ ಇರಬಹುದು. ಸಕ್ಸಸ್ ಅನ್ನೋದು ಬರುತ್ತೆ.. ಹೋಗುತ್ತೆ.. ಯಾವುದೂ ಪರ್ಮನೆಂಟ್ ಅಲ್ಲ. ಆದ್ರೆ, ಮನೆ ಅನ್ನೋದು ಮಾತ್ರ ಪರ್ಮನೆಂಟ್. ಎಷ್ಟೇ ನೇಮ್ ಸಿಕ್ರೂ ಕೂಡ ನಾನು ಒಬ್ಬ ಮಗಳು.. ಒಬ್ಬ ಸಿಸ್ಟರ್.. ಒಬ್ಬ ಪಾರ್ಟ್ನರ್ ಕೂಡ ಹೌದು. ಸದಾ ನಗ್ತಿರೋ ವ್ಯಕ್ತಿ ಮತ್ತು ಯಾರು ಅವರ ಸುತ್ತಲಿರೋ ಜನರನ್ನು ಗೌರವಿಸುತ್ತಾರೋ ಅಂಥೋರು ಇಷ್ಟವಾಗ್ತಾರೆ’ ಅಂತಾ ರಶ್ಮಿಕಾ ಹೇಳಿರೋದು ಮತ್ತೊಂದು ಹಂತದ ಗುಸು ಗುಸು ಚರ್ಚೆಗೆ ನಾಂದಿ ಹಾಡಿದೆ.
ವಿಜಯ್ ದೇವರಕೊಂಡ ಜೊತೆ ಓಡಾಟ:
ಅಸಲಿಗೆ ‘ಗೀತ ಗೋವಿಂದ’, ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ನಟ ವಿಜಯ್ ದೇವರಕೊಂಡ ಜೊತೆ ನಟಿಸಿದ್ದರು. ಆಗ ಒಂದೇ ಟೈಮ್ನಲ್ಲಿ ಫಾರಿನ್ಗೆ ಹೋಗಿ ಕಾಲ ಕಳೆಯುತ್ತಿದ್ದರು. ಅಷ್ಟೇ ಅಲ್ಲ, ವಿಜಯ್ದೇವರಕೊಂಡ ಮನೇಲಿ ರಶ್ಮಿಕಾ ಇರೋ ಫೋಟೋಗಳು ಕೂಡ ವೈರಲ್ ಆಗಿದ್ವು. ಇನ್ನೇನು ಲವ್ ಮಾಡೇಬಿಟ್ರು ಅನ್ನೋ ಸುದ್ದಿ ಆದಾಗ.. ನಾವಿಬ್ಬರೂ ಫ್ರೆಂಡ್ಸ್ ಅಂತಾ ಹೇಳಿದ್ದರು. ವಿಜಯ್ ಅವರು ಒಂದು ಸಂದರ್ಶನದಲ್ಲಿ “ರಶ್ಮಿಕಾ ನನ್ನ ಡಾರ್ಲಿಂಗ್” ಎಂದಿದ್ದರು. ಅಷ್ಟೇ ಅಲ್ಲದೆ “ನನಗೆ ಈಗ 35 ವರ್ಷ ವಯಸ್ಸು. ನಾನು ಸಿಂಗಲ್ ಆಗಿ ಇರ್ತೀನಿ ಅಂತ ಅನಿಸತ್ತಾ?” ಎಂದು ಪ್ರಶ್ನೆ ಮಾಡಿದ್ದರು. ಇಷ್ಟೆಲ್ಲಾ ಆದ್ಮೇಲೆ ಇವರು ಲವ್ ಮಾಡ್ತಿದ್ದಾರೆ ಅನ್ನೋ ಸುದ್ದಿ ಜೋರಾಗಿತ್ತು. ಆದ್ರೆ, ಯಾವುದೂ ಕೂಡ ಅಧಿಕೃತವಾಗಿರಲಿಲ್ಲ.
2016ರಲ್ಲಿ ನಿಶ್ಚಿತಾರ್ಥ.. ಬ್ರೇಕಪ್ :
ಕನ್ನಡದ ನಟಿ.. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ 2016ರಲ್ಲಿ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಜೊತೆ ನಟಿಸಿದ್ದರು. ಬಳಿಕ ರಕ್ಷಿತ್ ಶೆಟ್ಟಿ ಜೊತೆಗೇ ಇದ್ದ ಸ್ನೇಹ ಪ್ರೀತಿಗೆ ತಿರುಗಿ ನಿಶ್ಚಿತಾರ್ಥ ಕೂಡ ಆಗಿತ್ತು. ಅದೇ ವೇಳೆ ರಶ್ಮಿಕಾ ತೆಲುಗು ಚಿತ್ರರಂಗಕ್ಕೆ ಹಾರಿದರು. ಬಳಿಕ ಬ್ರೇಕಪ್ ಕೂಡ ಆಯ್ತು. ಆದ್ರೆ, ಕಾರಣ ಏನು ಅನ್ನೋದು ಇದುವರೆಗೂ ಗೊತ್ತಾಗಲೇ ಇಲ್ಲ. ಇದೀಗ ರಶ್ಮಿಕಾ ಮತ್ತೆ ಮದುವೆ ಸುದ್ದಿಯಲ್ಲಿದ್ದಾರೆ. ಆದ್ರೆ, ಹುಡುಗ ಯಾರು ಅನ್ನೋದು ಇನ್ನೂ ರಿವೀಲ್ ಆಗಿಲ್ಲ.