ಅಪ್ಪಟ ಕನ್ನಡ ಪ್ರತಿಭೆ, ಮಲೆನಾಡಿನ ಮಿಂಚಿನ ಬೆಡಗಿ ಮೇದಿನಿಗೆ ಸ್ಯಾಂಡಲ್ ವುಡ್ನಲ್ಲಿ ಅತ್ಯುತ್ತಮ ಅವಕಾಶಗಳು ದೊರಕುತ್ತಿವೆ. ಇವರ ಪ್ರತಿಭೆಗೆ ತಕ್ಕಂತೆ ಭವಿಷ್ಯದಲ್ಲಿ ಇನ್ನಷ್ಟು ವಿಶೇಷ ಅವಕಾಶಗಳು ಸಿಗಲಿ, ಸಿನಿ ಪ್ರಪಂಚದಲ್ಲಿ ನವತಾರೆಯಾಗಿ ಬೆಳಗಲಿ....!

ಕಳೆದ ವರ್ಷ ತೆರೆಕಂಡ ರಿಯಲ್ ಸ್ಟಾರ್‌ ಉಪೇಂದ್ರ ನಿರ್ದೇಶನದ `ಯುಐ' ಸಿನಿಮಾ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದುಕೊಂಡಿದೆ. ಎಲ್ಲಾ ವಿಭಾಗದಿಂದಲೂ ಗಮನಸೆಳೆದ ಈ ಸಿನಿಮಾದಲ್ಲಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿ ಮೇದಿನಿ ಕೆಳಮನೆ ಮಿಂಚಿದ್ದರು. ಉಪೇಂದ್ರ ತಾಯಿಯಾಗಿ ಸವಾಲಿನ ಪಾತ್ರವನ್ನು ಸೊಗಸಾಗಿ ನಿಭಾಯಿಸಿ ಸಿನಿರಸಿಕರಿಂದ ಸೈ ಎನಿಸಿಕೊಂಡಿದ್ದರು. ಹಾಗಿದ್ದರೆ ಮೇದಿನಿ ಕೆಳಮನೆ ಯಾರು? ಅವರ ಹಿನ್ನೆಲೆ ಏನು? ನೋಡೋಣ ಬನ್ನಿ :

470938495_18323608117092649_5683043546765494001_n

ಮೇದಿನಿ ನಡೆದು ಬಂದ ದಾರಿ

ಮೂಲತಃ ಹೆಗ್ಗೋಡಿನವರಾದ ಮೇದಿನಿ ಕೆಳಮನೆ ನದೆಹಲಿಯ ನ್ಯಾಷನಲ್ ಸ್ಕೂಲ್ ‌ಆಫ್‌ ಡ್ರಾಮಾದಿಂದ ಪದವಿ ಪಡೆದಿದ್ದಾರೆ. ಕಲೆ ಮತ್ತು ಸಂಸ್ಕೃತಿಯ ವಾತಾವರಣದಲ್ಲಿ ಬೆಳೆದಿದ್ದರಿಂದ ಬಾಲ್ಯದಿಂದಲೇ ನಾಟಕ, ಸಿನಿಮಾದ ಬಗ್ಗೆ ಆಸಕ್ತಿ ಹೊಂದಿದ್ದರು. ಪದವಿಯ ಅವಧಿಯಲ್ಲಿಯೂ ಹಾಗೂ ನಂತರ, ಅನುರಾಧಾ ಕಪೂರ್‌, ಅಭಿಲಾಷ್‌ ಪಿಳ್ಳೈ ಮತ್ತು ಕುಲಿ ಕೊಜಾಕುಲಿ ಮೊದಲಾದ ಪ್ರಖ್ಯಾತ ನಿರ್ದೇಶಕರು ಮತ್ತು ನಾಟಕಕಾರರೊಂದಿಗೆ ವಿವಿಧ ನಾಟಕಗಳಲ್ಲಿ ಅಭಿನಯಿಸಿದ್ದರು.

ಪದವಿಯ ನಂತರ ದೆಹಲಿ ಹಾಗೂ ಮುಂಬೈನಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ, ಅವರು ಪ್ರಾಯೋಗಿಕ ನಾಟಕಗಳಲ್ಲಿ, ಕಿರುಚಿತ್ರ, ಟಿವಿ ಜಾಹೀರಾತುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಮೇದಿನಿ, ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ತಮ್ಮ ಸಹೋದರನೊಂದಿಗೆ `ದಾಳಿ' ಮತ್ತು `ಮುಕ್ತ' ಎಂಬ ಎರಡು ಕನ್ನಡ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. `ದಾಳಿ' ಕಿರುಚಿತ್ರಕ್ಕೆ 2017ರ ಪ್ರಖ್ಯಾತ ಟೋಟೋ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಸಿನಿಮಾ ಜರ್ನಿ ಶುರು ಶೈಲಜಾ ಪಡಿಂದಳ ನಿರ್ದೇಶಿಸಿರುವ `ನಾನು ಲೇಡೀಸ್‌' ಚಿತ್ರದ ಮೂಲಕ ಅವರು ತಮ್ಮ ಸಿನಿಮಾ ಜರ್ನಿ ಶುರು ಮಾಡಿದರು. ಇದರಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಇಬ್ಬರು ಹುಡುಗಿಯರ ನಡುವಿನ ಪ್ರೀತಿಯ ಕಥೆಯನ್ನು ವಿವರಿಸುವ ಕನ್ನಡದ ಮೊದಲ ಲೆಸ್ಬಿಯನ್‌ ಸಿನಿಮಾ!

ನಟೇಶ್‌ ಹೆಗ್ಡೆ ನಿರ್ದೇಶನದ, ರಿಷಬ್ ಶೆಟ್ಟಿ ಫಿಲಮ್ಸ್ ನಿರ್ಮಿಸಿ `ಪೆಡ್ರೊ' ಎಂಬ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ ಮತ್ತು ವಿಶ್ವದಾದ್ಯಂತ ವಿವಿಧ ಪ್ರಶಸ್ತಿ ಮತ್ತು ಮೆಚ್ಚುಗೆಗಳನ್ನು ಪಡೆದಿದೆ. ಇಷ್ಟೇ ಅಲ್ಲದೆ, ವಿನಯ್‌ ರಾಜ್‌ ಕುಮಾರ್‌ ನಟನೆಯ `ಪೆಪೆ' ಚಿತ್ರದಲ್ಲಿ ಸಹ ಮೇದಿನಿ ಅಭಿನಯ ಗಮನ ಸೆಳೆಯುವಂತಿತ್ತು.

471515244_18323608063092649_4437879644606002001_n

ಬಾಲಿವುಡ್ನಲ್ಲೂ ಮೋಡಿ

ಕನ್ನಡ ಮಾತ್ರವಲ್ಲ, ಬಾಲಿವುಡ್‌ ಅಂಗಳದಲ್ಲಿಯೂ ಮೇದಿನಿ ಮೋಡಿ ಮಾಡಿದ್ದಾರೆ. ಅನುರಾಗ್‌ ಕಶ್ಯಪ್‌ ನಿರ್ದೇಶಿಸಿರುವ `ದೋಬಾರಾ' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಮೇದಿನಿ ಬಾಲಿವುಡ್‌ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಅವರ ಪ್ರಸ್ತುತ ಹಿಂದಿ ಚಿತ್ರ ಹಂಸ್‌ ಮೆಹ್ತಾ ನಿರ್ದೇಶನದ `ಗಾಂಧಿಬಿಪೇರ್‌ ಇಂಡಿಯಾ' ವೆಬ್‌ ಸೀರೀಸ್‌ ಆಗಿದ್ದು, 2025ರ ಅಂತ್ಯದಲ್ಲಿ ಬಿಡುಗಡೆಗೊಳ್ಳಲಿದೆ. ವಿನಯ್‌ ರಾಜ್‌ ಕುಮಾರ್‌ ಅಭಿನಯ ಮತ್ತು ಶ್ರೀಲೇಶ್‌ ಎಸ್‌. ನಾಯರ್‌ ನಿರ್ದೇಶಿಸಿದ `ಪೆಪೆ' ಸಿನಿಮಾದಲ್ಲಿ ಮೇದಿನಿಯರ `ಪ್ರಭಾ' ಪಾತ್ರ ವಿಶೇಷವಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. `ಬಿಟಿಎಸ್‌' ಎಂಬ ಅಂತೋಲಜಿ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ