- ರಾಘವೇಂದ್ರ ಅಡಿಗ ಎಚ್ಚೆನ್.

ಉದಯೋನ್ಮುಖ ರಂಗಭೂಮಿ ಕಲಾವಿದ ಮತ್ತು ಕಿರುಚಿತ್ರಗಳ ನಟ ಮುರಳಿ ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಸಾರಕ್ಕಿ ಸಮೀಪದ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮುರಳಿ ಅವರ ಮೃತದೇಹ ಪತ್ತೆಯಾಗಿದೆ. ಈ ಘಟನೆ ಸಹ ಕಲಾವಿದರು ಹಾಗೂ ರಂಗಭೂಮಿ ವಲಯದಲ್ಲಿ ತೀವ್ರ ವಿಷಾದ ಮೂಡಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಮುರಳಿ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಕೆಲ ಕಿರುಚಿತ್ರಗಳಲ್ಲಿಯೂ ಅಭಿನಯಿಸಿದ್ದರು. . ಕಲೆಯ ಮೇಲಿನ ಅಪಾರ ಆಸಕ್ತಿ ಹೊಂದಿದ್ದ ಅವರು, ತಮ್ಮ ಅಭಿನಯದ ಮೂಲಕ ಸ್ನೇಹಿತರು ಹಾಗೂ ಸಹ ಕಲಾವಿದರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿದ್ದರು.  ಮುರಳಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರು ಮುರಳಿ ಸಾವಿಗೆ ಕಂಬನಿ ಮಿಡಿದಿದ್ದು, "ರಂಗಶಂಕರದ ಬಳಿ ಎದುರಿಗೆ ಸಿಕ್ಕಾಗ , ಹಾಯ್ ಹೇಳುತ್ತಿದ್ದ ನಗುವೊಂದು ತನ್ನನ್ನು ತಾನು ಅಂತ್ಯಗೊಳಿಸಿಕೊಂಡಿದೆ, ಆ ನಗುವಿನ ಹಿಂದಿನ ನೋವು ಅವರಿಗೆ ಗೊತ್ತಿರುತ್ತದೆ, ಆದರೆ ಅವರ ಈ ಸಡನ್ ಎಂಡ್, ಬದುಕಿರುವವರಿಗೆ ನೀಡುವ ದುಃಖ ದೀರ್ಘವಾದುದು, ಏನು ಹೇಳುವುದೋ ಗೊತ್ತಾಗ್ತಿಲ್ಲ" ಎಂದು ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ