ಸರಸ್ವತಿ*

ನ್ಯಾಚುರಲ್ ಸ್ಟಾರ್ ಚಿಕ್ಕಣ್ಣ ಹೀರೋ ಆಗಿ‌ ನಟಿಸುತ್ತಿರುವ ಎರಡನೇ ಸಿನಿಮಾ ಲಕ್ಷ್ಮಿಪುತ್ರ. ಎಪಿ ಅರ್ಜುನ್ ಫಿಲ್ಮ್‌ ಬ್ಯಾನರ್ ನಡಿ ಮೂಡಿ ಬರ್ತಿರುವ ಈ ಚಿತ್ರಕ್ಕೆ ವಿಜಯ್ ಸ್ವಾಮಿ ಆಕ್ಷನ್ ಕಟ್ ಹೇಳ್ತಿದ್ದಾರೆ.‌ ಲಕ್ಷ್ಮಿಪುತ್ರ ಸಿನಿಮಾದ ಬಹುತೇಕ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದೆ. ಹೀಗಿದ್ದರೂ ಚಿತ್ರತಂಡ ನಾಯಕಿ‌ ಪರಿಚಯ ಮಾಡಿರಲಿಲ್ಲ. ಇದೀಗ ಲಕ್ಷ್ಮಿಪುತ್ರನಿಗೆ‌ ಜೋಡಿ ಯಾರು ಅನ್ನೋದು ರಿವೀಲ್ ಆಗಿದೆ.

ಲಕ್ಷ್ಮಿಪುತ್ರ ಚಿಕ್ಕಣ್ಣನಿಗೆ ಹೊಸ ನಟಿ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಅವರೇ ವಂದಿತಾ. ಚಿಕ್ಕಣ್ಣನಿಗೆ ಜೋಡಿಯಾಗಿ ವಂದಿತಾ ಅಭಿನಯಿಸಲಿದ್ದಾರೆ. ಸ್ಪೆಷಲ್ ಪ್ರೋಮೋ ಬಿಡುಗಡೆ ಮಾಡಿರುವ ಚಿತ್ರತಂಡ ವಂದಿತಾ ಅವರನ್ನು ತಮ್ಮ ಬಳಗಕ್ಕೆ ಸ್ವಾಗತ ಮಾಡಿಕೊಂಡಿದೆ.

Nanditha 1

ಚಿತ್ರದಲ್ಲಿ ತಾರಾ, ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಗಣವಿದೆ. ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದ್ದು, ಎ.ಪಿ ಅರ್ಜುನ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಚಿತ್ರದಲ್ಲಿ ತಾಯಿ, ಮಗನ ಬಾಂಧವ್ಯದ ಕಥೆಯನ್ನು ಹೇಳಲಾಗ್ತಿದೆ.

Nanditha

ಎಪಿ ಅರ್ಜುನ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಎಪಿ ಅರ್ಜುನ್ ಪತ್ನಿ ಅನ್ನಪೂರ್ಣ ಅರ್ಜುನ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ರವಿಕಿರಣ್ ಗೌಡ ಸಹ-ನಿರ್ಮಾಣದಲ್ಲಿ ಸಾಥ್ ಕೊಡುತ್ತಿದ್ದಾರೆ.

ಚಿತ್ರದ ಆ್ಯಕ್ಷನ್ ಸೀಕ್ವೆನ್ಸ್‌ಗಳಿಗೆ ಮಾಸ್ ಮಾದ ನಿರ್ದೇಶನ ಮಾಡಿದ್ದಾರೆ. ಗಿರೀಶ್ ಆರ್ ಗೌಡ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ