``ನಾನು ಮೂಲತಃ ಮಾಡೆಲಿಂಗ್‌ ಮತ್ತು ಫ್ಯಾಷನ್‌ ಲೋಕದಿಂದ ಬಂದಿರುವುದು, ಈ ಫೀಲ್ಡ್ ನಲ್ಲಿ ಒಳ್ಳೆಯ ಹೆಸರು ಬಂದಿದೆ. ನಾನು ನಟಿಯಾಗಿ ಕಾಣಿಸಿಕೊಂಡಿದ್ದು, ಒಂದೆರಡು ಚಿತ್ರಗಳಲ್ಲಿ ಮಾತ್ರ. ಒಂದು, ತಮಿಳು ಚಿತ್ರ `ತುಳ್ಳಿ ವಿಳೆಯಾಡ್‌' ಹಾಗೂ ಕನ್ನಡದಲ್ಲಿ ಶೈಲೇಂದ್ರ ಬಾಬು ಪ್ರೊಡಕ್ಷನ್ಸ್ ನ `ತಿರುಪತಿ ಎಕ್ಸ್ ಪ್ರೆಸ್‌' ಚಿತ್ರದ ಪುಟ್ಟ ಪಾತ್ರವೊಂದರಲ್ಲಿ ಅಷ್ಟೇ..... ಮಾಡೆಲಿಂಗ್ ದುನಿಯಾದಲ್ಲಿ ಬಿಜಿಯಾಗಿರುವ ನಾನೀಗ `ಏಕ್‌ ಲವ್ ಯಾ' ಚಿತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಪಾತ್ರದ ಬಗ್ಗೆ ಏನೂ ಹೇಳುವ ಹಾಗಿಲ್ಲ. ಏಕೆಂದರೆ ಚಿತ್ರದ ಕಥೆ ಬಗ್ಗೆ ಪ್ರೇಮ್ ಸರ್‌ ಬಿಟ್ಟುಕೊಟ್ಟಿಲ್ಲ,'' ಎಂದು ಹೇಳುವ ಮಾಡಲ್ ಬೆಡಗಿ ಅಂಕಿತಾ ನಾಯಕ್ ಸಿನಿಮಾರಂಗದತ್ತ ಹೆಚ್ಚು ಒಲವು ತೋರಿಸುತ್ತಿರುವಂಥ ನಟಿ. ಓವರ್‌ ಟು ಅಂಕಿತಾ.

ನಟಿಯಾಗಬೇಕೆಂಬ ಆಸೆ ಮೊದಲಿನಿಂದಲೂ ಇತ್ತಾ......?

ಈ ಮೊದಲೇ ಪ್ರೇಮ್ ಸರ್‌ರನ್ನು ಭೇಟಿ ಮಾಡಿ ನನ್ನ ಫೋಟೋ ಕೊಟ್ಟಿದ್ದೆ. ಆಗ ಆ್ಯಕ್ಟಿಂಗ್‌ ಬಗ್ಗೆ ನನಗೆ ಅಷ್ಟೊಂದು ಗೊತ್ತಿರಲಿಲ್ಲ. ಆಡೀಶನ್‌ಗೆ ಹೋದಾಗಲೂ ಕಾನ್ಛಿಡೆನ್ಸ್ ಇರಲಿಲ್ಲ. ಆಗ ನನ್ನಲ್ಲಿ ಕಾನ್ಛಿಡೆನ್ಸ್ ತುಂಬಿ ಕಳಿಸಿದ್ದರು. ಅದಾದ ನಂತರ `ಏಕ್‌ ಲವ್ ಯಾ' ಚಿತ್ರಕ್ಕಾಗಿ ಕರೆ ಬಂದಾಗ ಪ್ರೇಮ್ ಸರ್‌ ಕೊಟ್ಟ ಪಾತ್ರವನ್ನು ಖುಷಿಯಿಂದ ಒಪ್ಪಿಕೊಂಡೆ. ಒಂದು ವಾರ ಟ್ರೇನಿಂಗ್ ಕೊಡಿಸಿದರು. ಅವರ ಅಸಿಸ್ಟೆಂಟ್‌ ಡೈರೆಕ್ಟರ್‌ ನನಗೆ ಡೈಲಾಗ್‌ ಹೇಳೋದರಿಂದ ಹಿಡಿದು ನಟನೆವರೆಗೂ ಎಲ್ಲವನ್ನೂ ಕಲಿಸಿದರು.

ankita-nayak

ಚಿತ್ರದಲ್ಲಿನ ಅನುಭವ ಹೇಗಿತ್ತು?

ನಿಜ ಹೇಳಬೇಕೆಂದರೆ ನಾನೊಂದು ಫಿಲಂ ಇನ್ಸ್ ಟಿಟ್ಯೂಟ್‌ಗೆ ಹೋದಂತೆ ಅನಿಸಿತ್ತು. ತುಂಬಾನೇ ಕಲಿತೆ, ಪ್ರೇಮ್ ಸರ್‌ಗೆ ತುಂಬಾನೇ ಥ್ಯಾಂಕ್ಸ್ ಹೇಳ್ತೀನಿ. ಕ್ಯಾಮೆರಾ ಫೇಸ್‌ ಮಾಡುವಾಗ ಆತ್ಮವಿಶ್ವಾಸ ಬೆಳೆದಿತ್ತು. ಇಡೀ ತಂಡದ ಪ್ರೋತ್ಸಾಹ ಸಿಕ್ಕಿತು.

ನಿಮ್ಮ ಪಾತ್ರದ ಬಗ್ಗೆ ಹೇಳಿ ?

ಇಂಪಾರ್ಟೆಂಟ್‌ ರೋಲ್‌, ತುಂಬಾನೇ ಬೋಲ್ಡ್ ಆಗಿದೆ. ಜಾಸ್ತಿ ಏನೂ ಹೇಳುವ ಹಾಗಿಲ್ಲ.

ನಿಮ್ಮ ಹಿನ್ನೆಲೆ ?

ನಾನು ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ವಿದ್ಯಾಭ್ಯಾಸ ಮೌಂಟ್‌ ಕಾರ್ಮೆಲ್ ‌ಕಾಲೇಜಿನಲ್ಲಿ. ಓದುತ್ತಿರುವಾಗಲೇ ಮಾಡೆಲಿಂಗ್‌ ಮಾಡಲು ಶುರು ಮಾಡಿದೆ. ಚಿಕ್ಕವಳಿಂದಲೂ ಮಾಡೆಲ್ ‌ಆಗುವ ಆಸೆ ಇತ್ತು. ಪ್ರಿಂಟ್‌ ಆ್ಯಡ್‌, ಜಾಹೀರಾತು, ಫಿಲಂಗಳಲ್ಲಿ ಕಾಣಿಸಿಕೊಂಡಿದ್ದೆ.  ಜ್ಯೂವೆಲರಿ, ಸ್ಯಾರಿ ಜಾಹೀರಾತುಗಳಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಮನೆಯಿಂದಲೂ ಬಹಳ ಪ್ರೋತ್ಸಾಹ ಇತ್ತು. ಕಾಲೇಜಿನಲ್ಲಿ ನನ್ನ ಸೀನಿಯರ್‌ ಆಗಿ ತಾರೆ ಅನುಷ್ಕಾ ಶರ್ಮ ಇದ್ದಳು. ನಮಗೆಲ್ಲ ಸಿಕ್ಕಾಪಟ್ಟೆ ರಾಗಿಂಗ್‌ಮಾಡುತ್ತಿದ್ದಳು.

ಇದಾದ ಮೇಲೆ ಮುಂದಿನ ಬೆಳವಣಿಗೆ.....?

`ಏಕ್‌ ಲವ್ ಯಾ' ಚಿತ್ರದ ನಂತರ ಬಹಳ ಆಫರ್ಸ್‌ ಬರಬಹುದು ಎಂಬ ನಂಬಿಕೆ ಇದೆ. ಆ್ಯಕ್ಟಿಂಗ್‌ ಬಗ್ಗೆ ಆಸಕ್ತಿ ಹುಟ್ಟಿಕೊಂಡಿದೆ. ಈ ಸಿನಿಮಾದ ನಿರ್ಮಾಪಕಿ ರಕ್ಷಿತಾ ಅವರ ಪರಿಚಯ ಮೊದಲಿನಿಂದಲೂ ಇತ್ತು. ಪಾರ್ಟಿಗಳಲ್ಲಿ ಬಹಳ ಸಲ ಮೀಟ್‌ ಮಾಡ್ತಿದ್ವಿ. ಅವರು ನನ್ನ ಮೆಚ್ಚಿನ ತಾರೆ, ನನಗೆ ತುಂಬಾ ಪ್ರೋತ್ಸಾಹ ನೀಡಿದ್ದಾರೆ.

ನಿಮಗೆ ಮುಂದೆ ಯಾವ ರೀತಿ ಪಾತ್ರ ಮಾಡಬೇಕು ಎಂಬ ಆಸೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ