ಕಾಲ ಕಳೆದಂತೆ ಬಾಲಿವುಡ್‌ನಲ್ಲೂ ಬೇಕಾದಷ್ಟು ಬದಲಾವಣೆಗಳಾಗಿವೆ. ಈಗ ಹಿರಿತೆರೆ, ಕಿರುತೆರೆ ಸ್ಟಾರ್‌ಗಳು ಸರಿಸಮಾನರು. ಯಾರೂ ಯಾರಿಗೂ ಕಡಿಮೆಯಲ್ಲ. ಟಿವಿ ಕಲಾವಿದರು ಹಿರಿತೆರೆಯಲ್ಲಿ ಬೇಕಾದಷ್ಟು ಮಿಂಚುತ್ತಿದ್ದಾರೆ. ಇವರಲ್ಲಿ ಒಬ್ಬಳು ಅಂಕಿತಾ ಲೋಖಂಡೆ. ಕಳೆದ 6 ವರ್ಷಗಳಿಂದ ಸತತ ಪ್ರಸಾರವಾಗುತ್ತಿದ್ದ `ಪವಿತ್ರ ರಿಶ್ತಾ' ಧಾರಾವಾಹಿ ಮುಗಿದಾಗ ಯಶಸ್ಸಿನ ತುದಿಯೇರಿದ್ದ ಅಂಕಿತಾ, ಹಿಂದಿರುಗಿ ನೋಡದೆ ಹಿರಿತೆರೆಗೆ ನಡೆದಿದ್ದಳು. ಕಳೆದ ವರ್ಷ ಬಿಡುಗಡೆಗೊಂಡ `ಮಣಿಕರ್ಣಿಕಾ' ಚಿತ್ರದಲ್ಲಿ ಈಕೆ ಝಾನ್ಸಿ ರಾಣಿಯ ಪಾತ್ರ ನಿರ್ವಹಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಳು. ಅದಾದ ಮೇಲೆ ರಿತೇಶ್‌ ದೇಶ್‌ಮುಖ್‌ ಜೊತೆ `ಭಾಗಿ-3' ಚಿತ್ರದ ನಾಯಕಿಯಾಗಿ ಮತ್ತೆ ಯಶಸ್ಸು ಪಡೆದಳು.

ಒಂದು ಸಣ್ಣ ಊರಿನಿಂದ ಮುಂಬೈ ಮಹಾನಗರ ಪ್ರವೇಶಿಸಿ ಟಿವಿ ಸ್ಟಾರ್‌ ಆಗಿ ಯಶಸ್ಸು ಪಡೆಯುವುದು ಸುಲಭವಲ್ಲ....

`ಪವಿತ್ರ ರಿಶ್ತಾ' ನಂತರ ಸ್ಟಾರ್ಆದ ನೀನು ಎಡವಿದ್ದೆಲ್ಲಿ?

ನನಗಂತೂ ಎಲ್ಲೂ ಎಡವಟ್ಟು ಕಾಣುತ್ತಿಲ್ಲ......ಆದರೆ 2014ರಲ್ಲಿ `ಪವಿತ್ರ ರಿಶ್ತಾ' ಮುಗಿಯಿತು.

ಅದಾದ ಮೇಲೆ ನೀನು ಟಿವಿಯಲ್ಲಿ ಮಿಂಚಲಿಲ್ಲ?

ನನಗೆ ಬಂದ ಆಫರ್‌ಗಳನ್ನು ನಾನೇ ತಿರಸ್ಕರಿಸಿದೆ, ಅವು ನನ್ನ ಲೆವೆಲ್ ‌ಆಗಿರಲಿಲ್ಲ. ಸತತ 6 ವರ್ಷಗಳ ದುಡಿಮೆಯಿಂದ ಸುಸ್ತಾಗಿದ್ದ ನಾನು ವಿಶ್ರಾಂತಿ ಬಯಸುತ್ತಿದ್ದೆ. 1 ವರ್ಷ ಲಾಂಗ್‌ ಲೀವ್‌, ಅದಾದ ನಂತರ ಬಂದ ಹಲವು ಆಫರ್ಸ್ ಬಿಟ್ಟೆ. ನಂತರ ಸಿನಿಮಾ ಸೇರಲು ನಿರ್ಧರಿಸಿದೆ. ಸಿನಿಮಾಗೆ ಡೇಟ್ಸ್ ಕೊಡುವಾಗ ಟಿವಿ ಡೇಟ್ಸ್ ಕ್ಲಾಶ್‌ಆಗುತ್ತಿತ್ತು. ಆದರ್ಶ ಸೊಸೆ ಪಾತ್ರ ಸಾಕೆನಿಸಿ ಸಿನಿಮಾದಲ್ಲಿ ಗ್ಲಾಮರ್‌ ಪಾತ್ರ ಹುಡುಕಿದೆ, ಹೀಗಾಗಿ ಬ್ರೇಕ್‌ನಿಂದ ಗ್ಯಾಪ್‌ ಆಯ್ತು. ನನಗಿಲ್ಲಿ ಯಾರೂ ಗಾಡ್‌ಫಾದರ್‌ ಇಲ್ಲ!

ನೀನು ಇಂದೋರ್ನಂಥ ಸಾಧಾರಣ ಊರಿಂದ ಬಂದು ಮುಂಬೈನಲ್ಲಿ ಸ್ಥಾನ ಭದ್ರಪಡಿಸಿಕೊಂಡದ್ದು ಸಾಧಾರಣ ವಿಷಯವಲ್ಲ, ಮಟ್ಟ ಏರಲು ನೀನು ಪಟ್ಟ ಸಂಘರ್ಷಗಳೆಷ್ಟು?

ನನಗೆ ಅಂಥ ದೊಡ್ಡ ಸಂಘರ್ಷ ಏನೂ ಇರಲಿಲ್ಲ. ನಾನು ಮೊದಲಿನಿಂದ ಮಹಾ ಕಾನ್ಛಿಡೆಂಟ್‌ ಹುಡುಗಿ. ಮುಂದೆ ಹೇಗೆ ಹೆಜ್ಜೆ ಇಡಬೇಕೆಂದು ಚೆನ್ನಾಗಿ ಗೊತ್ತು. ಬಹಳ ಹೊಸ ಧಾರಾವಾಹಿಗಳ ಆಫರ್‌ ಏನೋ ಬಂತು, ಎಲ್ಲದರಲ್ಲೂ ಅದೇ ಆದರ್ಶ ಸೊಸೆ ಪಾತ್ರ..... ಸಾಕಾಗಿ ಹೋಗಿತ್ತು. ಉತ್ತಮ ಪಾತ್ರ ಹುಡುಕುತ್ತಿದ್ದೆ. ಜನರಿಗೆ ನನ್ನ ವಿಚಾರ ಹುಚ್ಚುಚ್ಚು ಎನಿಸಬಹುದು. ಆದರೆ ನಾನು ಕಷ್ಟಪಡುತ್ತಿದ್ದೇನೆ ಎಂದೇನೂ ಅನಿಸಲಿಲ್ಲ. ಸಂಘರ್ಷ ಅಂತೂ ತೀರಾ ದೊಡ್ಡ ಪದವಾಯ್ತು. ನನ್ನ ಪಾಡಿಗೆ ನಾನು ಹಾಯಾಗಿಯೇ ಇದ್ದೇನೆ. ನಾನು ಇದುವರೆಗೂ ಜೀವನದಲ್ಲಿ ಎರಡೇ ಸಲ ಆಡಿಶನ್‌ ನೀಡಿರುವೆ. ನನಗೆ ಯಶಸ್ಸು ಒಂದೇ ಮುಖ್ಯ ಆಗಿರಲಿಲ್ಲ! ನಾನು ಬಯಸುವಂಥ ಪಾತ್ರಗಳಿಂದ ಸಿನಿಮಾದಲ್ಲಿ ಮುಂದುರಿದೆ. ನನಗಾಗಿ ಇಷ್ಟೆಲ್ಲ ದುಡಿದಿರುವ ತಾಯಿತಂದೆಯರ ಸಂಪೂರ್ಣ ಜವಾಬ್ದಾರಿ ನಾನೇ ಹೊರಬಯಸಿದೆ.

ankita-lokhnde

ಕೆಲವು ಟಿವಿ ಕಲಾವಿದರು ಆತ್ಮಹತ್ಯೆ ಸಹ ಮಾಡಿಕೊಂಡಿದ್ದಾರೆ. ಹೀಗೆ ಏಕೆ ಆಗುತ್ತದೆ?

ನಿರಾಶೆ ಆ ಮಟ್ಟಕ್ಕೆ ಎಳೆದೊಯ್ಯುತ್ತದೇನೋ...... ಅದಕ್ಕಿಂತ ಹೆಚ್ಚಿಗೆ ನನಗೆ ಗೊತ್ತಿಲ್ಲ. ಅಂಥವರನ್ನು ನಾನು ಭೇಟಿ ಸಹ ಮಾಡಿಲ್ಲ. ಹೀಗಾಗಿ ಅಂಥವರ ಬಗ್ಗೆ ನೇರವಾಗಿ ಏನು ಹೇಳಲಿ? ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯರಿಗೆ ಆತ್ಮವಿಶ್ವಾಸ ಇರೋದಿಲ್ಲ. ಅವರ ಕುಟುಂಬದವರೂ ಸಪೋರ್ಟ್‌ ಮಾಡಿರಲ್ಲ. ನಾನೂ ಹತಾಶಳಾಗಿದ್ದೆ, ಆಗ ನನ್ನ ಕುಟುಂಬದವರು ನನ್ನ ಕೈ ಬಿಡಲಿಲ್ಲ. ನಾನು ಜಾಯಿಂಟ್‌ ಫ್ಯಾಮಿಲಿಗೆ ಸೇರಿದವಳು. ಅಣ್ಣ, ತಂಗಿ, ಅಕ್ಕ, ತಮ್ಮ, ಅಜ್ಜಿ, ತಾತಾ..... ಎಲ್ಲ ಇದ್ದರೇನೇ ಚೆಂದ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ