ಪ್ರಿಯಾಳ ಬರ್ತ್ಡೇ

ತಾರೆಯರ ಬರ್ತ್‌ ಡೇ ಅಂದರೆ ಅಭಿಮಾನಿಗಳ ಪಾಲಿಗದು ಹಬ್ಬ. ವಾರದಿಂದಲೇ ತಯಾರಿ ಮಾಡಿಕೊಳ್ಳುತ್ತಾರೆ. ಸ್ಟಾರುಗಳನ್ನು ಕಟ್ಟೋದು, ಬ್ಯಾನರ್‌ ಹಾಕೋದು, ಕೇಕ್‌ಗಳನ್ನು ಹೊತ್ತು ತಂದು ತಾರೆಯರ ಮನೆ ಮುಂದೆ ಕಟ್‌ ಮಾಡಿಸೋದು, ಆದರೆ ಇವೆಲ್ಲದಕ್ಕಿಂತ ವಿಭಿನ್ನವಾಗಿ ಇತ್ತೀಚೆಗೆ ಹರಿಪ್ರಿಯಾ ತಮ್ಮ ಬರ್ತ್‌ ಡೇಯನ್ನು ಆಚರಿಸಿಕೊಂಡದ್ದು ವಿಶೇಷ. `ನೀರ್‌ ದೋಸೆ' ಚಿತ್ರಕ್ಕೆ ರಮ್ಯಾ ಮಾಡಬೇಕಾಗಿದ್ದ ಪಾತ್ರವನ್ನು ನಿರ್ವಹಿಸುತ್ತಿರುವ ಹರಿಪ್ರಿಯಾ ಚಿತ್ರೀಕರಣಕ್ಕೆ ಹಾಜರಾಗಿ ಅಲ್ಲಿಯೇ ತಂಡದೊಂದಿಗೆ ಕೇಕ್‌ ಕತ್ತರಿಸಿ ಆಚರಿಸಿಕೊಂಡಳು. ಚಿತ್ರದ ನಿರ್ದೇಶಕರು ಅಭಿಮಾನಿಗಳ ಜೊತೆ ಹರಿಪ್ರಿಯಾ ಸೆಲ್ಛಿ ತೆಗೆಸಿಕೊಳ್ಳುವಂತೆ ಅನುಕೂಲ ಮಾಡಿಕೊಟ್ಟರು. `ಉಗ್ರಂ' ನಂತರ ದಿಢೀರನೇ ಜನಪ್ರಿಯಳಾದ ಹರಿಪ್ರಿಯಾ ಕನ್ನಡದಲ್ಲೀಗ ಅತ್ಯಂತ ಬಿಜಿ ತಾರೆ. 5 ಚಿತ್ರಗಳ ಚಿತ್ರೀಕರಣದಲ್ಲಿ ಪಾಲ್ಗೊಂಡು ಜನಪ್ರಿಯ ತಾರೆಯರ ಪಟ್ಟಿಗೆ ಸೇರಿಕೊಂಡಿದ್ದಾಳೆ.

chitrashobha-2 - Copy

ಮುದ್ದಾದ ಜೋಡಿ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್

ರಚಿತಾ ರಾಮ್ ದೊಡ್ಡ ದೊಡ್ಡ ನಾಯಕರ ಜೊತೆ ನಟಿಸುತ್ತಲೇ ತನ್ನ ತಾರಾ ವೃತ್ತಿ ಶುರು ಮಾಡಿದಂಥ ಅದೃಷ್ಟದ ಹುಡುಗಿ. ದರ್ಶನ್‌ ಜೊತೆ `ಬುಲ್ ‌ಬುಲ್‌,' `ಅಂಬರೀಷ' ಚಿತ್ರದಲ್ಲಿ ನಟಿಸಿ ಸುದೀಪ್‌ ಜೊತೆ `ರನ್ನ' ಚಿತ್ರದಲ್ಲಿ ನಟಿಸಿದ್ದ ರಚಿತಾಳಿಗೆ ಪುನೀತ್‌ ರಾಜ್‌ಕುಮಾರ್‌ಗೆ ಜೋಡಿಯಾಗಿ ನಟಿಸುವ ಅವಕಾಶ ಸಿಕ್ಕಾಗ ಈ ಜೋಡಿ ತೆರೆ ಮೇಲೆ ಹೇಗೆ ಕಾಣಬಹುದೆಂಬ ಕುತೂಹಲ ಎಲ್ಲರಿಗೂ ಮೂಡಿಬಂದಿತು. ಹೆಸರಿಡದ ಹೊಸ ಚಿತ್ರದಲ್ಲಿ ಪುನೀತ್‌ ರಚಿತಾ ಜೋಡಿಯಾಗಿ ನಟಿಸುತ್ತಿದ್ದು ಚಿತ್ರೀಕರಣ ಭರದಿಂದ ಸಾಗಿದೆ. ಅದ್ಧೂರಿಯಾಗಿ ವಿಶೇಷವಾಗಿ ಹಾಕಲಾಗಿರುವ ಸೆಟ್‌ನಲ್ಲಿ ಶೂಟಿಂಗ್‌ ನಡೆಯುತ್ತಿದೆ. ಪುನೀತ್‌ ಅವರ ಬಗ್ಗೆ ಹೇಳುತ್ತಾ, ``ಅಪ್ಪು ದೊಡ್ಡ ತಾರೆಯಾದರೂ ತುಂಬಾನೆ ಸರಳ ವ್ಯಕ್ತಿ ಶೂಟಿಂಗ್‌ನಲ್ಲಿ ಎಲ್ಲರೊಂದಿಗೆ ಮಾತನಾಡುತ್ತಾ ಸಿಂಪಲ್ಲಾಗಿ ಇರುತ್ತಾರೆ. ಅವರಿಂದ ನಾನು ತುಂಬಾ ಕಲಿಯುತ್ತಿದ್ದೇನೆ,'' ಎನ್ನುತ್ತಾಳೆ ರಚಿತಾ.

ಪ್ರಜ್ವಲ್ ರಾಗಿಣಿ ಮದುವೆ

ಇಷ್ಟು ದಿನ ತನ್ನ ಬ್ಯಾಚುಲರ್‌ ದಿನಗಳನ್ನು ಕಳೆಯುತ್ತಿದ್ದ ಪ್ರಜ್ವಲ್ ದೇವರಾಜ್‌ ಗುಟ್ಟು ಗುಟ್ಟಾಗಿಯೇ ರಾಗಿಣಿಯನ್ನು ಪ್ರೀತಿಸುತ್ತಿದ್ದುದು ಯಾರಿಗೂ ತಿಳಿದಿರಲಿಲ್ಲ. ಗಾಸಿಪ್‌ ಕಾಲಂಗಳಲ್ಲಿ ಆಹಾರವಾಗುವ ಮೊದಲೇ ನಾನು ಮದುವೆಯಾಗ್ತಿದ್ದೀನಿ ಎಂದು ಹೇಳಿ ಅಚ್ಚರಿ ಮೂಡಿಸಿದ್ದ. ರಾಗಿಣಿ ನೃತ್ಯಪಟು  ಹಾಗೂ ಮಾಡೆಲ್‌. ಪ್ರಜ್ವಲ್‌ನ ಆಪ್ತ ಗೆಳತಿಯಾಗಿದ್ದಳು. ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿದಾಗ ಎರಡೂ ಮನೆಯ ಕುಟುಂಬದವರು ಸಂತೋಷವಾಗಿಯೇ ಮದುವೆಯಾಗಿ ಎಂದು ಹಾರೈಸಿದ್ದರು. ಇತ್ತೀಚೆಗೆ ಪ್ರಜ್ವಲ್ ರಾಗಿಣಿ ವಿವಾಹ ಅದ್ಧೂರಿಯಾಗಿ ಅರಮನೆ ಆವರಣದಲ್ಲಿ ನಡೆಯಿತು. ಸ್ಯಾಂಡಲ್ ವುಡ್‌ನ ತಾರೆಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ರಾಜಕಾರಣಿಗಳು ಆಗಮಿಸಿ ಹೊಸ ಜೋಡಿಗೆ ಶುಭ ಕೋರಿದರು. ದೇವರಾಜ್‌ ದಂಪತಿ ಮಗನ ಮದವೆ ಸಂಭ್ರಮದಲ್ಲಿ ಎಲ್ಲರನ್ನು ಸ್ವಾಗತಿಸುತ್ತಾ ಸಡಗರ ಪಡುತ್ತಿದ್ದರು.

ಬೆಳದಿಂಗಳ ಬಾಲೆ ಬಂದಳು

`ಬೆಳದಿಂಗಳ ಬಾಲೆ' ಸುಮನ್‌ ನಗರ್‌ಕರ್‌ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಸುನೀಲ್ ಕುಮಾರ್‌ ದೇಸಾಯಿ ಅವರ `ರೇ....' ಚಿತ್ರದಲ್ಲಿ ಗೆಸ್ಟ್ ರೋಲ್‌ನಲ್ಲಿ ಹಾಗೂ ನಾಗತೀಹಳ್ಳಿ ಚಂದ್ರಶೇಖರ್ ಅವರ ಹೊಸ ಚಿತ್ರದಲ್ಲೂ ನಟಿಸಿದ್ದಾರೆ. ದೇಸಾಯಿ ಅವರ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮಕ್ಕೆ ಸುಮನ್‌ ಆಗಮಿಸಿ ಸರ್‌ಪ್ರೈಸ್‌ ಕೊಟ್ಟಿದ್ದರು. ಒಳ್ಳೆ ಅವಕಾಶಗಳು ಸಿಕ್ಕರೆ ಖಂಡಿತ ನಟಿಸುವೆ ಎಂದು ಹೇಳುವ ಸುಮನ್‌ ಕ್ಯಾಲಿಫೋರ್ನಿಯಾದಲ್ಲಿ ಪತಿ ಜೊತೆ ನೆಲೆಸಿದ್ದಾರೆ. ಅಲ್ಲಿಯೇ ಮ್ಯೂಸಿಕ್‌ ಕ್ಲಾಸ್‌ ನಡೆಸುತ್ತಿದ್ದಾರೆ. ಕನ್ನಡದಲ್ಲಿ ನಟಿಸಲು ಆಸೆ ಹೊತ್ತಿರುವ ಸುಮನ್‌ ಒಳ್ಳೆ ಪಾತ್ರ ಸಿಕ್ಕರೆ ವಿದೇಶದಿಂದ ಹಾರಿ ಬಂದು ಶೂಟಿಂಗ್‌ ಮುಗಿಸಿ ಹೋಗಲು ರೆಡಿ. ಇಂಥ ಪ್ರತಿಭಾವಂತ ನಟಿಗೆ ಒಳ್ಳೆ ಅವಕಾಶಗಳು ಸಿಗಲಿ ಎಂದು ಹಾರೈಸೋಣ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ