ಅಂದು ಬೀದಿ ಬದಿಯಲ್ಲಿ ದೊಡ್ಡ ಜನರ ಗುಂಪು ನೆರೆದಿತ್ತು. ಅಲ್ಲಿ ಹಲ್ಲಿಯೊಂದರ ಹರಾಜು ನಡೆದಿತ್ತು.

ರಾಮಯ್ಯ : ನಾನು 10 ಸಾವಿರ ಕೊಡ್ತೀನಿ!

ಸೋಮಯ್ಯ : ನಾನು 20 ಸಾವಿರ ಕೊಡ್ತೀನಿ!

ಭೀಮಯ್ಯ : ನಾನು 30 ಸಾವಿರ ಕೊಡ್ತೀನಿ!

ಹನುಮಯ್ಯ : ನಾನು 40 ಸಾವಿರ ಕೊಡ್ತೀನಿ!

ಆಗ ಕಾನ್‌ಸ್ಟೇಬಲ್ ಕರಿಯಣ್ಣ ಅದೇ ದಾರಿಯಲ್ಲಿ ಹಾದು ಬಂದು ಜನರ ಗುಂಪು ಗಮನಿಸಿ ಸೈಕಲ್ ನಿಲ್ಲಿಸಿ ಕೇಳಿದ. ``ಇಲ್ಲೇನು ನಡೆಯುತ್ತಿದೆ?''

ಅದಕ್ಕೆ ಜವರಯ್ಯ ವಿವರಿಸಿದ, ``ಈ ಹಲ್ಲಿಗೆ ಮಾತ್ರ ಹೆಂಡ್ತೀರು ಹೆದರೋದು!'

'ಒಂದು ಆರ್ಟ್‌ ಎಗ್ಸಿಬಿಷನ್‌ಗೆ ಪತಿಪತ್ನಿ ಇಬ್ಬರೂ ಹೊರಟರು. ಅಲ್ಲಿ ಒಂದು ಸುಂದರ ಸುವರ್ಣ ಚಿತ್ರದಲ್ಲಿ ಹುಡುಗಿಯೊಬ್ಬಳು ತನ್ನ ದೇಹವನ್ನು ಕೇವಲ ಎಲೆಗಳಿಂದ ಮುಚ್ಚಿಕೊಂಡಿದ್ದಳು. ಪತಿ ಅದನ್ನೇ ನೋಡುತ್ತಾ ಅವಾಕ್ಕಾಗಿ ಅಲ್ಲೇ ನಿಂತುಬಿಟ್ಟ.

ಇದನ್ನು ಕಂಡು ಸಾಕಾದ ಪತ್ನಿ ಸಿಡುಕಿದಳು, ``ಏನು.... ಮನೆಗೆ ಬರ್ತೀರೋ ಅಥವಾ ಬಿರುಗಾಳಿ ಬರಲಿ ಅಂತ ಕಾಯ್ತಾ ಇಲ್ಲೇ ಇದ್ದುಬಿಡ್ತೀರೋ?''

ಡಾಕ್ಟರ್‌ : ಕಂಗ್ರಾಜುಲೇಶನ್ಸ್ ಮೇಡಂ ನಿಮ್ಮ ಪತಿಯ ಕೊರೋನಾ ಟೆಸ್ಟ್ ನೆಗೆಟಿವ್ ‌ಬಂದಿದೆ.

ಸುಂದ್ರಾಂಗಿ : ಅಯ್ಯೋ ಬಿಡಿ ಡಾಕ್ಟರ್‌, ಆ ಮನುಷ್ಯ ಎಲ್ಲದರಲ್ಲೂ ನೆಗೆಟಿವೇ!

ಸುರೇಶ್‌ : ನನ್ನ ಹೆಂಡತಿಯ ಟಿಕ್‌ ಟಾಕ್‌ ಕಿರಿಕಿರಿ ಕೇಳಿ ಕೇಳಿ ಸಾಕಾಗಿದೆ ಕಣಯ್ಯ.

ಮಹೇಶ : ಆದರೆ ಬೇರೆಯವರ ಹೆಂಡತಿಯ ಟಿಕ್‌ ಟಾಕ್‌ ಚೆನ್ನಾಗಿರುತ್ತೆ ಅಲ್ವಾ.....?

ಗುಂಡ : ನಿನಗೆ ಗೊತ್ತಾ? ಆಕಾಶದಿಂದ ಕೆಳಗೆ ಬೀಳುವ ಉಲ್ಕೆಯನ್ನು ಕಂಡು ನಾವೇನಾದರೂ ವರ ಬೇಡಿಕೊಂಡರೆ ಅದು ತಕ್ಷಣ ಫಲಿಸುತ್ತದೆ.

ನಾಣಿ : ಹೌದಾ? ನೀನು ಟ್ರೈ ಮಾಡಿ ನೋಡಿದ್ದೀಯಾ?

ಗುಂಡ : ಆದರೆ ನನ್ನ ವಿಷಯದಲ್ಲಿ ಅದ್ಯಾಕೋ ಉಲ್ಟಾ ಹೊಡೀತು!

ನಾಣಿ : ಯಾಕೆ.... ಏನಾಯ್ತು?

ಗುಂಡ : ಆ ಉಲ್ಕೆ ಬೀಳುವ ಸಮಯದಲ್ಲಿ ನಾನು ನನ್ನ ಹೆಂಡತಿಯನ್ನು ಎದುರಿಸಲು ಧೈರ್ಯ ಕೊಡು ಅಂತ ಪ್ರಾರ್ಥಿಸಿದರೆ, ಅದು ಭೂಮಿಗೆ ಅಪ್ಪಳಿಸುವ ಬದಲು ವಾಪಸ್ಸು ಅಂತರಿಕ್ಷಕ್ಕೇ ಹೋಗಿಬಿಡುವುದೇ?

ಡಾಕ್ಟರ್‌ : ನಿನಗೇನೂ ಕೊರೋನಾ ರೋಗ ಇಲ್ಲವಮ್ಮ.... ಬಾಕಿ ಎಲ್ಲಾ ಓ.ಕೆ. ಆದರೆ ನಿನ್ನ ದೇಹದಲ್ಲಿ ನೀರಿನ ಕೊರತೆ ಇದೆ.

ಕಮಲಿ : ಹೌದು ಸಾರ್‌, ಬಹಳ ದಿನಗಳಿಂದ ಪಾನಿಪೂರಿ ತಿಂದಿಲ್ಲ.

ಮಹೇಶ : ನಮ್ಮ ದೇಶದ ವಿವಾಹಿತ ಸ್ತ್ರೀಯರು ತಮ್ಮ ಪತಿಯಲ್ಲೇ ಪರಮೇಶ್ವರನನ್ನು ಕಾಣುವ ಸಾಧ್ವಿಮಣಿಗಳು, ಎಂಥ ಪತಿಪತ್ರೆಯರು ಗೊತ್ತಾ?

ಸುರೇಶ : ಅದೆಲ್ಲ ಸರಿ, ಆದರೆ ಗಂಡನ ಒಂದು ಮಾತೂ ಒಪ್ಪಿಕೊಳ್ಳದೆ ಸದಾ ಅವನನ್ನು ಗೋಳುಗುಟ್ಟಿಸುವುದು ಯಾಕಂತೆ?

ಪತ್ನಿ : ಡಾಕ್ಟರ್‌ ನನಗೆ ಕೊರೋನಾ ಇಲ್ಲ, ಆದರೆ ರಕ್ತದ ಕೊರತೆ ಇದೆ ಎಂದು ಹೇಳಿದ್ದಾರೆ. ಹಾಗಾದರೆ ಯಾರ ರಕ್ತ ಕುಡಿಯಲಿ.....?

ಪತಿ : ಅಯ್ಯೋ ದಡ್ಡಿ, ಅಷ್ಟೂ ತಿಳಿಯಲಿಲ್ಲವೇ? ನಮ್ಮ ಮಾನ್ಯ ಪ್ರಧಾನಿ ಹೇಳಿದಂತೆ ನಾವು ಸದಾ ಸ್ವಾವಲಂಬಿಗಳಾಗಿ ಇರಬೇಕು ಎಂಬುದನ್ನು ಮರೆಯಬೇಡ.

ಗುಂಡನಿಗೆ ಸದಾ ಪಕ್ಕದ ಮನೆಯ ಪಂಕಜಾಳನ್ನು ಮಾತನಾಡಿಸುವ ಚಪಲ. ವರ್ಕ್‌ಫ್ರಂ ಹೋಂ ನೆಪದಲ್ಲಿ ಸದಾ ಮನೆಯಲ್ಲೇ ಬಿದ್ದಿರುತ್ತಿದ್ದ. ಏನೂ ಕಾರಣ ಸಿಗದಿದ್ದರೆ ಪಂಕಜಾಳನ್ನು ಮಾತನಾಡಿಸಲು ಹೀಗೊಂದು ನೆಪ ಹುಡುಕುತ್ತಿದ್ದ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ