ಶರತ್ ಚಂದ್ರ
ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಎಷ್ಟೋ ಚಿತ್ರಗಳು ಸದ್ದಿಲ್ಲದೇ ಸೆಟ್ಟೇರಿ ಯಾವುದೇ ಪ್ರಚಾರವಿಲ್ಲದೆ ಬರೀ ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗುತ್ತಿದೆ.
ಅಂತಹ ಸಾಲಿಗೆ ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ನೀತಿ ' ಚಿತ್ರ ಕೂಡ ಸೇರುತ್ತದೆ.
ಚಿತ್ರತಂಡ ಹೇಳಿಕೊಂಡಿರುವಂತೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜೋನರ್ ಸಿನಿಮಾ ಆಗಿದ್ದು ಕೇವಲ 5 ಪಾತ್ರಗಳನ್ನು ಇಟ್ಟುಕೊಂಡು ಒಂದೇ ಮನೆಯಲ್ಲಿ ನಡೆಯುವ ಕಥೆಯನ್ನು ಹೆಣೆಯಲಾಗಿದೆ.
ಇತ್ತೀಚೆಗೆ' ಅಯ್ಯನ ಮನೆ' ವೆಬ್ ಸೀರಿಸ್ ಮೂಲಕ ಮನೆ ಮಾತಾಗಿರುವ ಖುಷಿ ರವಿಗೆ ಈ ಹಿಂದೆ ಮಾಡದೆ ಇರುವಂತಹ ವಿಭಿನ್ನ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಕೈಲ್ಲಿ ಗನ್ ಹಿಡ್ಕೊಂಡು ರಗಡ್ ಆಗಿ ಅಭಿನಯಿಸಿದ್ದಾರೆ.
ಒಂದು ಪ್ರಮುಖ ಪಾತ್ರದಲ್ಲಿ ಪೋಷಕ ನಟ ಸಂಪತ್ ಮೈತ್ರೆಯ ನಟಿಸಿದ್ದು ಟ್ರೈಲರ್ ನಲ್ಲಿ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಉಳಿದಂತೆ ನಾಯಕನಾಗಿ ಈ ಹಿಂದೆ 'ರವಿಕೆ ಪ್ರಸಂಗ' ಮೂಲಕ ಗಮನ ಸೆಳೆದ ಪ್ರವೀಣ್ ಅಥರ್ವ ಅಭಿನಯಿಸಿದ್ದಾರೆ.
ಡೈರೆಕ್ಟರ್ ಕಟ್ ಪ್ರೊಡಕ್ಷನ್ ಲಾಂಛನ ದಲ್ಲಿ ಗೌತಮ್ ಸಿನಿಮಾ ನಿರ್ಮಿಸಿದ್ದೂ ಈ ಚಿತ್ರವನ್ನು ರಾಜಗೋಪಾಲ್ ನಿರ್ದೇಶನ ಮಾಡಿದ್ದಾರೆ.
ಜೂನ್ 6 ರಂದು ಬಿಡುಗಡೆಯಾಗುತ್ತಿದ್ದರೂ ಕೂಡ ಪ್ರಚಾರದ ವಿಷಯದಲ್ಲಿ ಚಿತ್ರತಂಡ ಹಿಂದೆ ಬಿದ್ದಿದೆ. MRT ಚಾನೆಲ್ ನಲ್ಲಿ ಟ್ರೈಲರ್ ಬಿಟ್ಟಿದ್ದು, ಅದು ಬಿಟ್ಟರೆ ಸೋಶಿಯಲ್ ಮೀಡಿಯಾ ದಲ್ಲಿ ಒಂದಷ್ಟು ವಿಡಿಯೋ ಗಳನ್ನು ಚಿತ್ರ ತಂಡ ಬಿಟ್ಟಿದೆ. ಅದು ಬಿಟ್ಟರೆ ಅಲ್ಲೊಂದು ಇಲ್ಲೊಂದು ಪೋಸ್ಟರ್ ಗಳು ಕಾಣ ಸಿಗುತ್ತಿವೆ.
ನಮ್ಮಲ್ಲಿ ಒಳ್ಳೆ ಕಂಟೆಂಟ್ ಇಟ್ಟುಕೊಂಡು ಬರುವ ಹೆಚ್ಚಿನ ಸಿನಿಮಾಗಳು, ಪ್ರಚಾರದ ವಿಷಯಕ್ಕೆ ಬಂದಾಗ ಎಡವುತ್ತಿರುವುದು ಏಕೆ?ಇಂತಹ ಚಿತ್ರತಂಡಗಳು ಈ ಬಗ್ಗೆ ಉತ್ತರಿಸಬೇಕು.
ಒಟ್ಟಿನಲ್ಲಿ ಟ್ರೈಲರ್ ಮೂಲಕ ಭರವಸೆ ಮೂಡಿರುವ 'ನೀತಿ' ಸಾಕಷ್ಟು ಪ್ರೇಕ್ಷಕ ರಿಗೆ ತಲುಪಲಿ ಎಂದು ನಮ್ಮ ಹಾರೈಕೆ.