`ವಿಕ್ರಾಂತ್‌ ರೋಣ'  ಚಿತ್ರದಿಂದ ಕಂಬ್ಯಾಕ್‌ ಆಗಿರುವ ಬೆಡಗಿ ನೀತಾ ಅಶೋಕ್‌, ಬಹಳಷ್ಟು ಭಿನ್ನವಾಗಿರುವ ಈ ಚೆಲುವೆ ಎಲ್ಲವರಂಥಲ್ಲ. ಕಿರುತೆರೆಯಿಂದ ಹಿರಿತೆರೆಗೆ ಹಾರಿದ ಈ ನಟಿ, ತನ್ನ ಬಗ್ಗೆ ಹೇಳಿದ ಮಾತುಗಳೇನು.....?

ಕಣ್ಬಿಟ್ಟರೆ ಮನಮೋಹಕ, ಕಣ್ಮುಚ್ಚಿದರೆ ಮಾದಕ, ನಕ್ಕರೆ ನಗುವಿನ ಒಡತಿ, ಅತ್ತರೆ ಆ ಪಾತ್ರಕ್ಕೆ ಬೆಳಗಬೇಕು ಆರತಿ. ಕೆಂಗುಲಾಬಿಯ ಆ ತುಟಿಗಳಿಗೆ ಕಳಶವಿಟ್ಟಂತಿರುವ ದಂತಪಂಕ್ತಿ. ಅವಳ ಸೌಂದರ್ಯ ವರ್ಣನೆಗೆ ಪದಗಳೇ ಸಾಲದು. ಅಷ್ಟರಮಟ್ಟಿಗೆ ಬ್ಯೂಟಿ ಎನ್ನುವ ಬಳಪದಲ್ಲೇ ತಿದ್ದಿ ತೀಡಿದಂತಿರುವ ಚೆಲುವೆಯೇ ನಟಿ ನೀತಾ ಅಶೋಕ್‌.

ಒಬ್ಬ ನಟಿಗೆ ಏನು ಬೇಕೊ ಅದೆಲ್ಲವನ್ನೂ ಮೈಗೂಡಿಸಿಕೊಂಡಿರುವ ನೀತಾ ಅಶೋಕ್‌, ಸಖತ್‌ ಚ್ಯೂಸಿ. ತಾವು ಅಭಿನಯಿಸುವ ಪಾತ್ರಕ್ಕೆ ನ್ಯಾಯ ಒದಗಿಸುವ ಗುಣ ಇವರದ್ದು. ಹಾಗಂತ ಎಲ್ಲಾ ಪಾತ್ರಗಳನ್ನೂ ಒಪ್ಪಿಕೊಳ್ಳುವುದಿಲ್ಲ. ಜನರು ಒಪ್ಪಿಕೊಳ್ಳುವಂತಹ ಪಾತ್ರ ಬಂದರೆ ಬಿಡೋದಿಲ್ಲ. ಅಷ್ಟರಮಟ್ಟಿಗೆ ಸೃಜನಶೀಲತೆಯ ಅಭಿನೇತ್ರಿ ನೀತಾ ಎಂದರೂ ತಪ್ಪಾಗಲಿಕ್ಕಿಲ್ಲ.

ಕರುನಾಡಿನ ಮನೆ ಮನೆಯಲ್ಲೂ ನೀತಾ ತುಂಬಾನೇ ಪ್ರಸಿದ್ಧಿ. ಈಗ ಮತ್ತೆ ಕಿರುತೆರೆಗೆ ಕಂಬ್ಯಾಕ್‌ ಆಗುತ್ತಿದ್ದಾರೆ. ಸ್ಟಾರ್‌ ನಟಿಯಾಗಿ ನೀತಾ ಮಿಂಚುವ `ವಿಕ್ರಾಂತ್‌ ರೋಣ' ಚಿತ್ರದ ನಾಯಕಿ ನೀತಾ. ಈಕೆ ಕನ್ನಡ ಕಿರುತೆರೆಯಲ್ಲಿ ಮಿಂಚಿ ಕೆಲವು ಕಾಲ ಮರೆಯಾಗಿದ್ದರು. `ವಿಕ್ರಾಂತ್‌ ರೋಣ' ಚಿತ್ರದಲ್ಲಿ ಅಪರ್ಣಾ ಬಲ್ಲಾಳ್‌ ಪಾತ್ರ ನಿರ್ವಹಿಸಿದ್ದು, ನಿರೂಪ್‌ ಭಂಡಾರಿಗೆ ಜೋಡಿಯಾಗಿ ನಟಿಸಿದ್ದರು. ಕಿರುತೆರೆಯಿಂದ ನೇರವಾಗಿ ಸ್ಟಾರ್‌ ನಟನ ಜೊತೆಗೆ ತೆರೆ ಹಂಚಿಕೊಂಡ ಈ ನಟಿ, ಈ ಹಿಂದೆ ಕಿರುತೆರೆಯಲ್ಲಿ ಮೂಡಿ ಬಂದ `ಯಶೋದೆ, ನಾ ನಿನ್ನ ಬಿಡಲಾರೆ, ನೀಲಾಂಬರಿ' ಧಾರಾವಾಹಿಗಳಲ್ಲಿ ನಟಿಸಿದ್ದರು.

ಹಿಂದಿಯ `ಆಶಾಯೇ' ಎಂಬ ಸರಣಿಯಲ್ಲೂ ಕಾಣಿಸಿಕೊಂಡಿದ್ದರು. `ಕಿನ್ನರಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. `ಜಬರ್ದಸ್ತ್ ಶಂಕರ' ಎನ್ನುವ ತುಳು ಸಿನಿಮಾದಲ್ಲೂ ಮಿಂಚಿದ್ದರು.

Neetha-ashok-(5)

ಯಶೋದೆ ಪಾತ್ರದ ಖ್ಯಾತಿ

ನೀತಾ ಎನ್ನುವುದಕ್ಕಿಂತ ಯಶೋದೆ ಎಂದರೆ ಕಿರುತೆರೆ ಪ್ರೇಕ್ಷಕರಿಗೆ ಸುಲಭವಾಗಿ ಆಕೆಯ ಪರಿಚಯ ಸಿಗುತ್ತದೆ. ಹೌದು, ದಶಕಗಳ ಹಿಂದೆ ಈ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ `ಯಶೋದೆ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದ ನಟಿ ನೀತಾ, ಇದೀಗ `ನಾ ನಿನ್ನ ಬಿಡಲಾರೆ' ಧಾರಾವಾಹಿಯ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಆರು ವರ್ಷಗಳ ನಂತರ ಕಿರುತೆರೆ ನಟನೆಗೆ ಹಿಂದಿರುಗಿದ್ದಾರೆ.

ಕನ್ನಡಿಗರ ನೆಚ್ಚಿನ ಕುಂದಾಪುರದ `ಯಶೋದೆ' ಮೂಲತಃ ಉಡುಪಿಯವರಾದ ನೀತಾ ಹುಟ್ಟಿದ್ದು, ಕುಂದಾಪುರ ಬಳಿಯ ಕೋಟಾ ಎಂಬ ಹಳ್ಳಿಯಲ್ಲಿ. ಇವರ ತಂದೆ ಅಶೋಕ್‌ ಹೆರ್ಲೆ ಬ್ಯಾಂಕ್‌ ಉದ್ಯೋಗಿ ಹಾಗೂ ತಾಯಿ ಗೀತಾ ಅಶೋಕ್‌ ಗೃಹಿಣಿ.

ನೀತಾ ಓದಿ ಬೆಳೆದಿದ್ದೆಲ್ಲಾ ಉಡುಪಿ, ಮಂಗಳೂರು, ದೆಹಲಿ ಹಾಗೂ ಬೆಂಗಳೂರಿನಲ್ಲಿ. ಎಂ.ಬಿ.ಎ ಓದಿದ ಬಳಿಕ ಕ್ಯಾಂಪಸ್ ಸೆಲೆಕ್ಷನ್‌ ನಲ್ಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ಫೇಸ್‌ ಬುಕ್‌ ಮುಖಾಂತರ ನಟನೆಯ ಅವಕಾಶ ದೊರೆತು, `ಯಶೋದೆ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು.

Neetha-ashok-(1)

ಕೌಟುಂಬಿಕದಿಂದ ಹಾರರ್‌ ಗೆ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ