- ರಾಘವೇಂದ್ರ ಅಡಿಗ ಎಚ್ಚೆನ್ 

ಕನ್ನಡದಲ್ಲಿ ಹೊಸ‌ಹೊಸ ಕಂಟೆಂಟುಗಳೊಂದಿಗೆ ಹೊಸ ತಂಡ ಚಿತ್ರರಂಗದಲ್ಲಿ ಮೋಡಿ ಮಾಡುತ್ತಿದೆ. ಅದರ ಸಾಲಿಗೆ "ಅವನಿರಬೇಕಾಗಿತ್ತು" ಚಿತ್ರ ತಂಡ ಹೊಸ ಸೇರ್ಪಡರಯಾಗಿದೆ.

ಅಂದಕಾಲಿತ್ತಲೇ.. ಇಂದ ಕಾಲಿತ್ತಲೇ ಹಾಡಿನ ಬಳಿಕ  ಚಿತ್ರದ  "ಓಹೋ..ಹೃದಯ " ಹಾಡು ಬಿಡುಗಡೆಯಾಗಿದೆ. ಅರ್ಪಾಜ್ ಉಳ್ಳಾಳ್ ಹಾಗು ಅನುರಾಧ ಭಟ್ ಹಾಡಿರುವ ಹಾಡಿನಲ್ಲಿ ಭರತ್ ಹಾಗು ಸೌಮ್ಯ ಜಾನ್  ಕಾಣಿಸಿಕೊಂಡಿದ್ದಾರೆ. ಲೋಕಿ ತಪಸ್ಯ ಸಂಗೀತ ನೀಡಿದ್ದಾರೆ. ಅಶೋಕ್ ಸಾಮ್ರಾಟ್ ಆಕ್ಷನ್ ಕಟ್ ಹೇಳಿದ್ದಾರೆ. ಮುರುಳಿ ಬಿಟಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

IMG-20250315-WA0037

ಹಾಡು ಬಿಡುಗಡೆ ಬಳಿಕ ಮಾತಿಗಿಳಿದ ನಿರ್ದೇಶಕ ಅಶೋಕ್ ಸಾಮ್ರಾಟ್,  ಮೊದಲ ಬಾರಿಗೆ ನಿರ್ದೇಶನ ಮಾಡಿದ್ದು ಬಾಲ್ಯದ ಗೆಳಯ ಮುರುಳಿ ಬಂಡವಾಳ ಹಾಕುವ ಮೂಲಕ ಸಾಥ್ ನೀಡಿದ್ದಾರೆ. ಓಹೋ ಹೃದಯ ಹಾಡಿಗೆ ಮುನ್ನ ಒಂದೂವರೆ ತಿಂಗಳು ಪ್ರಾಕ್ಟೀಸ್ ಮಾಡಲಾಗಿದೆ. ರಾಜಸ್ತಾನ, ಲಡಾಕ್ ನಲ್ಲಿ ಕೇರಳದಲ್ಲಿ ಬಿರು ಬಿಸಿಸಿಲ್ಲಿ ಚಿತ್ರೀಕರಣ ಮಾಡಲಾಗಿದೆ. ಛಾಯಾಗ್ರಾಹಕ ಪೃಥ್ವಿ ಮಾಲೂರು ಹಾಡನ್ನು ಸುಂದರವಾಗಿ ಚಿತ್ರೀಕರಿಸಿದ್ದಾರೆ ಎಂದರು.

ಅನುರಾಧ ಭಟ್, ಹಾಗು ಅರ್ಫಾಜ್ ಉಳ್ಳಾಳ್ ಅವರು ಓಹೋ ಹೃದಯ ಹಾಡು ಹಾಡಿದ್ದಾರೆ .ಅರುಣ್ ಸಾಹಿತ್ಯ ಬರೆದಿದ್ದಾರೆ. ಹಾಡಿಗೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗಿದೆ. ಬಾಲ್ಯದ ಗೆಳೆಯ ದೇವರಾಜ್ ಪೂಜಾರಿ  ಛಾಯಾಗ್ರಹಣ ಮಾಡಿದ್ದಾರೆ. ಕಲಾವಿದರು. ಸಹಕಾರ ನೀಡಿದ್ದಾರೆ.‌ಲಕ್ಷ್ಮಿ ದೇವಮ್ಮ, ಪ್ರಶಾಂಸ್ ಸಿದ್ದಿ, ಮಂಜುನಾಥ್, ಕಿರಣ್ ಹೆಗಡೆ ಹಳಬರು. ಇನ್ಜುಳಿದಂತೆ ಎಲ್ಲರೂ ಹೊಸಬರು. ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

IMG-20250315-WA0036

ಐಡೆಂಟಿಟ್ ಬಗ್ಗೆ ಹೇಳುವ ಚಿತ್ರ. ಐದು ದಿನಗಳ ಕಾಲ ರಾಜಸ್ತಾನ ,ಲಡಾಕ, ಕೇರಳದಲ್ಲಿ ಓಹೋ ಹೃದಯ ಹಾಡು ಚಿತ್ರೀಕರಣ ಮಾಡಲಾಗಿದೆ. ಕಥೆ,ಚಿತ್ರಕಥೆ ಗಮನ ಸೆಳೆಯಲಿದೆ.‌ಮೊದಲು ಮತ್ತು ದ್ವಿತೀಯಾರ್ಧದಲ್ಲಿ ಬೆರಳ ತುದಿಯಲ್ಲಿ ಚಿತ್ರವನ್ಜು ನೋಡಿಸಿಕೊಂಡು ಹೋಗಲಿದೆ .‌ಒಂದು ಹಾಡು ಬಾಕಿ ಇದೆ. ಟ್ರೈಲರ್ ಬಿಡುಗಡೆ ಆದ ನಂತರ ಮೂರನೇ ಹಾಡು ಬಿಡುಗಡೆ ಮಾಡಲಾಗುವುದು ಎಂದರು

ನಿರ್ಮಾಪಕ ಮುರುಳಿ ಬಿಟಿ ಮಾತನಾಡಿ,  ಡಿಗ್ರಿ ಯಲ್ಲಿ ನಿರ್ದೇಶಕ ಅಶೋಕ್ ನಾನು ಸ್ನೇಹಿತರು. ಸಿನಿಮಾಗೆ ಏನು‌ಬೇಕೋ ಅದನ್ನು ನೀಡಿದ್ದೇನೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಓಹೋ ಹೃದಯ ಹಾಡಿನಲ್ಲಿ ನಾಯಕ, ನಾಯಕಿ ಕಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ. ಮೈನಸ್ ಡಿಗ್ರಿ ಯಲ್ಲಿ ಕಡಿಮೆ ಬಟ್ಟೆಯಲ್ಲಿ ಯಾವುದನ್ನೂ ತೋರಿಸಿಕೊಳ್ಳದೆ ಚಿತ್ರೀಕರಣ ಮಾಡಿದ್ದಾರೆ ಎಲ್ಲರಿಗೂ ಋಣಿ ಆಗಿದ್ದೇನೆ ಎಂದು ಹೇಳಿಬಂದಿದೆಾಯಕ ಭರತ್ ಮಾತನಾಡಿ ಪೂರ್ಣ ಪ್ರಮಾಣದ ನಾಯಕನಾಗಿ ಮೊದಲ ಚಿತ್ರ. ಅಂದಕಾಲತ್ತಿಲ್ಲೆ‌. ಇಂದ ಕಾಲತ್ತಿಲ್ಲೇ.. ಹಾಡು ಒಂದು .ಮಿಲಿಯನ್ ದಾಟಿ ಮುನ್ನೆಡೆದಿದೆ. ಇದೀಗ ಓಹೋ ಹೃದಯ ಹಾಡು ಬಿಡುಗಡೆಯಾಗಿದ್ದು ಇದೂ ಇಷ್ಟವಾಗಲಿದೆ

IMG-20250315-WA0035

ನಾಯಕಿ ಸೌಮ್ಯ ಮಾತನಾಡಿ, ಮೊದಲ ಚಿತ್ರ ಆಡಿಷನ್ ಕೊಟ್ಟು ಚಿತ್ರಕ್ಕೆ ಆಯ್ಕೆಯಾದೆ.‌ ಸವಾಲಿನ ಪಾತ್ರ ಮಾಡುವ ಆಸೆ.ಜೊತೆಗೆ ಮೊದಲಿನಿಂದಲೂ ನಾಯಕಿಯಾಗಿ ನಟಿಸುವ ಆಸೆ ಇದ್ದುದರಿಂದ‌‌ ಕಷ್ಡ ಆದರೂ ಇಷ್ಡಪಟ್ಟು ಚಿತ್ರ ಮಾಡಿದ್ದೇನೆ.‌ನಿಮ್ಮ ಸಹಕಾರ ಪ್ರೋತ್ಸಾಹ ಇರಲಿ ಎಂದರು

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ