ನಟಿ ತಮನ್ನಾ ಭಾಟಿಯಾ ಲೈಫ್ನಲ್ಲಿ ಒಂದು ಗುಡ್ನ್ಯೂಸ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ, ಇತ್ತೀಚೆಗಷ್ಟೇ ತಮ್ಮ ಬಾಯ್ಫ್ರೆಂಡ್ ನಟ ವಿಜಯ್ ವರ್ಮಾ ಜೊತೆಗೆ ಬ್ರೇಕ್ ಅಪ್ ಆಯ್ತು ಅನ್ನೋವಾಗ್ಲೇ ಈಗ ಅದೆಲ್ಲಾ ಸುಳ್ಳು ಅನ್ನೋ ಸುದ್ದಿ ಸಿಕ್ಕಿದೆ. ಕೆಲದಿನಗಳ ಹಿಂದಷ್ಟೇ ಇಬ್ಬರೂ ಬ್ರೇಕ್ ಅಪ್ ಆದ್ರು ಅನ್ನೋ ಸುದ್ದಿ ದಟ್ಟವಾಗಿತ್ತು. ಆದ್ರೀಗ ಹೋಳಿ ಹಬ್ಬದ ಸಂಭ್ರಮದಲ್ಲಿ ಇಬ್ಬರೂ ಭಾಗಿಯಾಗಿದ್ದು, ಅದೆಲ್ಲಾ ಸುಳ್ಳಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇಬ್ಬರೂ ಕೂಡ ಹೋಳಿ ಆಚರಿಸಿರೋ ವಿಡಿಯೋ ಭಾರೀ ವೈರಲ್ ಆಗ್ತಿದೆ.
ಸೌತ್ ಸಿನಿ ಇಂಡಸ್ಟ್ರಿಯ ಮಾದಕ ಮತ್ತು ಮೋಹಕ ನಟಿ.. ಮಿಲ್ಕಿ ಬ್ಯೂಟಿ ತಮನ್ನಾ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಮದುವೆ ಆಗಿಬಿಡ್ತಾರೆ ಅನ್ನೋದು ಭಾರೀ ಚರ್ಚೆಯಾಗ್ತಿದೆ. ಅದಕ್ಕೆ ಇಂಬು ನೀಡುವಂತೆ ಇತ್ತೀಚಿನ ದಿನಗಳಲ್ಲಿ ಇಬ್ಬರೂ ಕೈ ಕೈ ಹಿಡಿದು ಸುತ್ತಾಡುತ್ತಿದ್ದದ್ದು ಜಾಸ್ತಿನೇ ಆಗಿತ್ತು. ಆದ್ರೆ, ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ಗಳು ಮತ್ತು ಇತ್ತೀಚೆಗೆ ವಿಜಯ್ ವರ್ಮಾ ಒಬ್ಬಂಟಿಯಾಗಿ ವಿಮಾನ ಹತ್ತಿದ್ದನ್ನ ನೋಡಿದ್ದ ನೆಟ್ಟಿಗರು ಅಯ್ಯೋ.. ಇಬ್ಬರೂ ಮಾತನಾಡೋದನ್ನ ಬಿಟ್ಟಿದ್ದಾರೆ.. ಇನ್ನೇನು ಬ್ರೇಕ್ ಅಪ್ ಆಯ್ತು ಅನ್ನೋ ಲೆವೆಲ್ಗೆ ಮಾತನಾಡಿಕೊಂಡಿದ್ದರು. ಆದ್ರೀಗ ಅದೆಲ್ಲವೂ ಸುಳ್ಳಾಗಿಸಿದ್ದು, ಬಾಲಿವುಡ್ ನಟಿ ರವೀನಾ ಟಂಡನ್ ಆಯೋಜಿಸಿದ್ದ ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದರು.
ಬ್ರೇಕ್ ಬಳಿಕ ಇದೇ ಮೊದಲ ಬಾರಿಗೆ ರವೀನಾ ಮನೆಗೆ ಪ್ರತ್ಯೇಕವಾಗಿ ಬಂದಿದ್ದರು. ಅವರು ಛಾಯಾಗ್ರಾಹಕರನ್ನು ಸ್ವಾಗತಿಸಿ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದರು. ಅದಾಗ್ಯೂ ಬ್ರೇಕಪ್ ಸಂಬಂಧಿಸಿದ ಸುದ್ದಿಗೆ ಇಬ್ಬರೂ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ.
2023 ರಲ್ಲಿ ಬಿಡುಗಡೆಯಾದ 'ಲಸ್ಟ್ ಸ್ಟೋರೀಸ್ 2' ವೆಬ್ ಸರಣಿಯನ್ನು ಚಿತ್ರದ ವೇಳೆ ತಮನ್ನಾ ವಿಜಯ್ ವರ್ಮಾ ಲವ್ ಮಾಡುತ್ತಿದ್ದರು. ಈ ಸರಣಿಯ ಬಿಡುಗಡೆಯ ಮೊದಲು, ಗೋವಾದಲ್ಲಿ ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸಿದ್ದರು. ನಂತರ, ಒಂದು ಸಂದರ್ಶನದಲ್ಲಿ, ತಮನ್ನಾ ವಿಜಯ್ ವರ್ಮಾ ಅವರೊಂದಿಗಿನ ತಮ್ಮ ಪ್ರೇಮ ಸಂಬಂಧವನ್ನು ಓಪನ್ ಆಗಿ ಹೇಳಿಕೊಂಡಿದ್ದರು.
ಅಂದಿನಿಂದ ಜೋಡಿ ಎಲ್ಲಿಗೆ ಹೋದರೂ ಕೈ ಹಿಡಿದು ಜೊತೆಯಾಗಿಯೇ ಹೋಗುತ್ತಿದ್ದರು. ಸುಮಾರು ಎರಡು ವರ್ಷಗಳ ಕಾಲ ಒಟ್ಟಿಗೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ವರ್ಷ ಮದುವೆ ಕೂಡ ಆಗ್ತಾರೆ ಅನ್ನೋ ಮಾತಿತ್ತು. ಆದ್ರೆ, ಇತ್ತೀಚೆಗೆ ಬ್ರೇಕ್ ಅಪ್ ಅನ್ನೋ ಸುದ್ದಿ ದಟ್ಟವಾಗಿತ್ತು. ಅದಾಗ್ಯೂ ಹೋಳಿ ಹಬ್ಬದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದನ್ನ ನೋಡಿರೋ ನೆಟ್ಟಿಗರು.. ಒಳ್ಳೇದಾಯ್ತು.. ಇಬ್ಬರೂ ಒಂದಾದ್ರು ಅಂತಾ ಖುಷಿ ಖುಷಿಯಾಗಿ ಕಮೆಂಟ್ ಹಾಕ್ತಿದ್ದಾರೆ.