– ರಾಘವೇಂದ್ರ ಅಡಿಗ ಎಚ್ಚೆನ್

ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಗೋವಾದ ತಮ್ಮ ನಿವಾಸದಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. 75 ವರ್ಷದ ನಟ ಪ್ರಜ್ಞಾಹೀನರಾಗಿದ್ದಾಗ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸಿಲ್ಲ. ‘ಕ್ರಾಂತಿವೀರ’, ‘ಪರಿಂದಾ’ ಮತ್ತು ‘ವೆಲ್ ಕಮ್’ ಚಿತ್ರಗಳ ಮೂಲಕ ಕನ್ನಡಿಗರನ್ನೂ ಒಳಗೊಂಡಂತೆ ಕೋಟ್ಯಂತರ ಅಭಿಮಾನಿಗಳ ಮನ ಗೆದ್ದಿದ್ದ ಅವರ ಅಗಲಿಕೆಗೆ ಚಲನಚಿತ್ರ ರಂಗ ಕಂಬನಿ ಮಿಡಿದಿದೆ.
ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ದಿಗ್ಗಜ ನಟರಾಗಿದ್ದರು. ತಮ್ಮ ವಿಶಿಷ್ಟ ನಟನೆ ಮತ್ತು ಗಂಭೀರ ಸಂಭಾಷಣೆ ಶೈಲಿಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಭಾರತೀಯ ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ‘ಪರಿಂದಾ’, ‘ಕ್ರಾಂತಿವೀರ’ ಹಾಗೂ ‘ಅಬ್ ತಕ್ ಛಪ್ಪನ್’ ನಂತಹ ಸಿನಿಮಾಗಳು ಅವರಿಗೆ ದೊಡ್ಡ ಹೆಸರು ತಂದುಕೊಟ್ಟವು. ‘ವೆಲ್ ಕಮ್’ ನಂತಹ ಹಾಸ್ಯ ಚಿತ್ರಗಳ ಮೂಲಕವೂ ಜನಪ್ರಿಯತೆ ಗಳಿಸಿದ್ದರು. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ಎಂದರೆ ಅದು ‘ಯಕ್ಷ’.

1001885875

ಅವರ ಅಗಲಿಕೆಯಿಂದ ಭಾರತೀಯ ಚಿತ್ರರಂಗದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ. ಅವರು ಇತ್ತೀಚೆಗೆ ಚಿತ್ರರಂಗದಿಂದ ದೂರವೇ ಉಳಿದಿದ್ದರು
ನಾನಾ ಪಾಟೇಕರ್ ಅವರು, ಕೇವಲ ಕಲಾವಿದರಾಗಿ ಉಳಿಯದೆ ರೈತರು, ಬಡವರು ಹಾಗೂ ಸಂಕಷ್ಟದಲ್ಲಿರುವ ಕುಟುಂಬಗಳ ಪರವಾಗಿ ನಿಂತ ಮಾನವೀಯ ಹೃದಯದ ವ್ಯಕ್ತಿಯಾಗಿದ್ದರು. 2015ರಲ್ಲಿ ಮಕರಂದ ಅನಾಸ್ಪುರೆ ಅವರೊಂದಿಗೆ NAAM Foundation ಸ್ಥಾಪಿಸಿ, ಬರಪೀಡಿತ ರೈತ ಕುಟುಂಬಗಳಿಗೆ ನೆರವು, ಜಲ ಸಂರಕ್ಷಣೆ, ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ವಿಧವಾ ಕುಟುಂಬಗಳ ಕಲ್ಯಾಣ ಹಾಗೂ ವಿಪತ್ತು ಪರಿಹಾರ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಿಗೆ ಕೈಜೋಡಿಸಿದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ