ಚಿತ್ರ ಪೀಟರ್
ನಿರ್ಮಾಪಕರು ವ್ರಿದ್ಧಿ ಸ್ಟುಡಿಯೋ
ನಿರ್ದೇಶನ ಸುಖೇಶ್ ಶೆಟ್ಟಿ
ಕಲಾವಿದರು. ರಾಜೇಶ್ ಧ್ರುವ, ಜಾನ್ವಿ ರಾಯಲ, ರವೀಕ್ಷ ಶೆಟ್ಟಿ, ರಕ್ಷಿತ್ ದೊಡ್ಡೇರ, ಮನು ಕಾಸರಗೋಡು, ರಾಧಾಕೃಷ್ಣ ಕುಂಬಳೆ, ಮುಂತಾದವರು.
ರೇಟಿಂಗ್ 3/5
- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದಲ್ಲಿ ಇತ್ತೀಚೆಗೆ ಹೊಸ ಪ್ರತಿಭೆಗಳ ಆಗಮನ ಸರ್ವೇ ಸಾಮಾನ್ಯವಾಗಿದೆ. ಅದರೊಡನೆ ವಿಭಿನ್ನ ಶೈಲಿಯ ನಿರೂಪಣೆಯುಳ್ಳ ಕಥೆಗಳೂ ಬರುತ್ತಿದೆ. ಅದಕ್ಕೀಗ ಹೊಸ ಸೇರ್ಪಡೆ ಈ ವಾರ ತೆರೆಗೆ ಬಂಡ "ಪಿಟರ್". ಈ ಮುನ್ನ ":ದೂರದರ್ಶನ" ಸಿನಿಮಾ ನಿರ್ದೇಶಿಸಿದ್ದ ಸುಕೇಶ್ ಶೆಟ್ಟಿ ಮತ್ತೊಮ್ಮೆ ಹೊಸ ಬಗೆಯ ಕಥೆ ಜೊತೆಗೆ ಬಂದಿದ್ದಾರೆ ರಾಜೇಶ್ ಧ್ರುವ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ವಿಮರ್ಶೆ ಇಲ್ಲಿದೆ...

ಪೀಟರ್ ( ರಾಜೇಶ್ ಧ್ರುವ ) ದೇವಾಲಯದಲ್ಲಿ ಚಂಡೆ ಹೊಡೆಯುವ ತಂಡದ ನಾಯಕ. ಅವನಷ್ಟು ಉತ್ತಮವಾಗಿ ಚಂಡೆ ಹೊಡೆಯುವವರು ಆ ಊರಲ್ಲಿ ಯಾರೂ ಇರುವುದಿಲ್ಲ. ಹಾಗಾಗಿ ಅವನು ಹಾಗೂ ಅವನ ತಂಡ ಊರಿಗೆಲ್ಲಾ ಹೆಸರಾಗಿರುತ್ತದೆ. ಆದರೆ ಅದೇ ಊರಿನ ಮತ್ತೊಂದು ತಂಡದೊಡನೆ ಪೀಟರ್ ಚಂಡೆ ತಂದಕ್ಕೆ ಜಗಳವಾಗುತ್ತದೆ. ಅದೇ ಪೀಟರ್ ಜೀವನದ ದಿಕ್ಕನ್ನು ಬದಲಿಸುವ ಘಟನೆಗೆ ಮುನ್ನುಡಿ. ಮತ್ತೆ ಪೀಟರ್ ಈ ಜಗಳದ ನಂತರ ಇದ್ದಕ್ಕಿದ್ದಂತೆ ಊರು ಬಿಡುತ್ತಾನೆ. ಮತ್ತೆ ಕೆಲವು ವರ್ಷಗಳ ನಂತರ ಮರಳಿ ಬರುವ ಪೀಟರ್ ಬದುಕಿನಲ್ಲಿ ಸಾಕಷ್ಟು ತಿರುವು ಸಿಕ್ಕುತ್ತದೆ ಇದೇ ಚಿತ್ರದ ಸಾರಾಂಶ. ಮುಂದೆ ಪೀಟರ್ ಏನಾದ ಅವನ ಬದುಕು ದಡ ಸೇರಿತೆ ಎಂದು ತಿಳಿಯಲು ನೀವು ಸಿನಿಮಾ ಮಂದಿರದಲ್ಲಿ ಪೀಟರ್ ಚಿತ್ರ ವೀಕ್ಷಿಸಬೇಕು. ಚಿತ್ರದಲ್ಲಿ ಪ್ರೀತಿ ಪ್ರೇಮ, ಸ್ನೇಹ, ತಾಯಿ ಸೆಂಟಿಮೆಂಟ್, ಸಸ್ಪೆನ್ಸ್, ಎಲ್ಲವೂ ಇರುವಂತ ಕಂಟೆಂಟ್ ಬೇಸ್ ಸಿನಿಮಾ ಇದು. ನಿರ್ದೇಶಕರು ಮಾನವನಲ್ಲಿರಬಹುದಾದ ತಾಮಸ ಗುಣಗಳನ್ನು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರಕಥೆಯಲ್ಲಿ ಕೆಲವೊಂದು ಕೊರತೆಗಳನ್ನು ಹೊರತುಪಡಿಸಿದರೆ ಕುತೂಹಲವನ್ನು ಕಡೆವರೆಗೆ ಉಳಿಸಿಕೊಳ್ಳುವಲ್ಲಿ ಸಹ ಅವರು ಯಶಸ್ವಿಯಾಗಿದ್ದಾರೆ.

ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ ಸೊಗಸಆಗಿದೆ. ರಿತ್ವಿಕ್ ಮುರಳೀಧರ್ ಸಂಗೀತವೇ ಈ ಚಿತ್ರದ ಹೈಲೈಟ್. ಹಾಡುಗಳು ಸಹ ಕಥೆಗೆ ಪೂರಕವಾಗಿದ್ದು ಹಿನ್ನೆಲೆ ಸಂಗೀತವಂತೂ ಥ್ರಿಲ್ಲರ್ ಸಿನಿಮಾಗೆ ಪೂರಕವಾಗಿದೆ.
ಪಾತ್ರವರ್ಗದ ವಿಷಯದಲ್ಲಿ ನಾಯಕ ರಾಜೇಶ್ ಪ್ರಬುದ್ದವಾಗಿ ಅಭಿನಯಿಸಿದ್ದಾರೆ. ಜಾನ್ವಿ ರಾಯಲ, ರವೀಕ್ಷ ಶೆಟ್ಟಿ, ಸಹ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಉಳಿದೆಲ್ಲಾ ಪಾತ್ರವರ್ಗವೂ ಸಹ ಕಥೆಗೆ ಪೂರಕವಾಗಿ ಬಂದಿದೆ. ಇನ್ನು ಒಟ್ಟಾರೆಯಾಗಿ ಹೇಳುವುದಾದರೆ ಲಾಜಿಕ್ ಅಂಶಗಳನ್ನು ಹೊರಗಿಟ್ಟು ನೋಡಿದರೆ ಇತ್ತೀಚೆಗೆ ಬಂದ ಒಂದು ಹೊಸ ಶೈಲಿಯ ಕಥೆಯುಳ್ಳ ಚಿತ್ರವಾಗಿ ಪೀಟರ್ ಸಿನಿಮಾವನ್ನು ನೀವೆಲ್ಲಾ ವೀಕ್ಷಿಸಲು ಯಾವ ತಕರಾರೂ ಇಲ್ಲ.





