ಮೀನಾರ ಪ್ರತಿಬಿಂಬವಾಗಲಿರುವ ಕಂಗನಾ

ಮೀನಾ ಕುಮಾರಿಯಂಥ ಖ್ಯಾತ ಕಲಾವಿದೆಯ ಜೀವನವನ್ನು ಬೆಳ್ಳಿತೆರೆಯ ಮೇಲೆ ಜೀವಂತಾಗಿಸುವುದು ಇಂದಿನ ಆಧುನಿಕ ನಟೀಮಣಿಯರಿಗೆ ದೊಡ್ಡ ಸವಾಲೇ ಸರಿ. ಹೀಗಾಗಿ ಮೀನಾ ಕುಮಾರಿ (ಕನ್ನಡದಲ್ಲಿ ಕಲ್ಪನಾ ಕುರಿತು `ಅಭಿನೇತ್ರಿ' ಚಿತ್ರ ಬಂದಂತೆ) ಬಯೋಪಿಕ್‌ ಚಿತ್ರ ರೂಪಿಸಿಸುತ್ತಿರುವ ತಿಗ್ಮಾಂಶೂ ಧೂಲಿಯಾ, ಈ ಟ್ರಾಜಿಡಿ ಕ್ವೀನ್‌ನನ್ನು ಸಮರ್ಥವಾಗಿ ತೋರಿಸಲೆಂದೇ ಕಂಗನಾ ರಾಣಾವತ್‌ಳನ್ನು ಆರಿಸಿದ್ದಾರೆ. ಅವರು ಸಿನಿ ಪತ್ರಕರ್ತ ವಿನೋದ್‌ ಮೆಹ್ತಾರ `ಮೀನಾ ಕುಮಾರಿ : ಕ್ಲಾಸಿಕ್‌ ಬಯಾಗ್ರಫಿ' ಆಧಾರಿತ ಇನ್ನೂ ಹೆಸರಿಡದ ಚಿತ್ರ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದ ನಿರ್ಮಾಪಕರಾದ ಸುನೀಲ್ ಬೋಹ್ರಾ ಈ ಪುಸ್ತಕದ ಹಕ್ಕುಗಳನ್ನೂ ಪಡೆದಿದ್ದಾರೆ. ಕಂಗನಾಳ ನಿಕಟವರ್ತಿಗಳ ಪ್ರಕಾರ, ಆಕೆ ಈ ಚಿತ್ರಕ್ಕಾಗಿ ತನ್ನ ಡೇಟ್ಸ್ ಸಹ ಕೊಟ್ಟಿದ್ದಾಳಂತೆ. ಬಹುಶಃ ಆಗಸ್ಟ್ ಹೊತ್ತಿಗೆ ಚಿತ್ರೀಕರಣ ಶುರುವಾಗಬಹುದು.

nawajuddin

ಹರಾಮ್ ಖೋರ್ನವಾಜುದ್ದೀನ್‌!

ಇದೇನು ಶೀರ್ಷಿಕೆ ಎಂದು ಹುಬ್ಬೇರಿಸದಿರಿ. ಅಸಲಿಗೆ ನವಾಜುದ್ದೀನ್‌ ಸಿದ್ದಿಕಿ ಇದೀಗ `ಹರಾಮ್ ಖೋರ್‌' ಚಿತ್ರದಲ್ಲಿ ಶ್ವೇತಾ ತ್ರಿಪಾಠಿ ಜೊತೆ ಕೆಲಸ ಮಾಡುತ್ತಿದ್ದಾರೆ. ಶ್ಲೋಕ್‌ ಶರ್ಮಾರ ನಿರ್ದೇಶನದಲ್ಲಿ ಮೂಡಲಿರುವ ಈ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ಇಂಡಿಯನ್‌ ಫೆಸ್ಟಿವ್ ‌ಆಫ್‌ ಲಾಸ್‌ಏಂಜಲೀಸ್‌ನಲ್ಲಿ ನಡೆಯಲಿದೆ. 29 ವರ್ಷದ ಶ್ವೇತಾಳಿಗೆ ಇದು ಡೆಬ್ಯು ಚಿತ್ರ. ದೆಹಲಿ ನಿವಾಸಿ ಶ್ವೇತಾಳ ತಂದೆ ಮಾಜಿ ಮಂತ್ರಿಗಳೂ ಹೌದು. ಈ ಚಿತ್ರದಲ್ಲಿ ನವಾಜುದ್ದೀನ್‌ಗೆ ತನ್ನ ವಿದ್ಯಾರ್ಥಿನಿಯನ್ನೇ ಪ್ರೇಮಿಸುವ ಶಿಕ್ಷಕನ ಪಾತ್ರ! ಅವರಿಬ್ಬರ ಸಂಬಂಧವನ್ನು ಸಮಾಜ ಒಪ್ಪದಿರುವುದೇ ಇದರ ಕಥೆ.

Madhuri-Dixit-Latest-HD-Wallpapers

ನನ್ನ ಸೌಂದರ್ಯದ ರಹಸ್ಯ

ಪ್ರೌಢ ವಯಸ್ಸಿನಲ್ಲೂ  ಇನ್ನೂ ಯಂಗ್‌ ಆಗಿಯೇ ಕಾಣಿಸಿಕೊಳ್ಳುವ ಮಾಧುರಿ ದೀಕ್ಷಿತ್‌, ಇಂದಿಗೂ ತನ್ನ ಮೋಡಿ ಉಳಿಸಿಕೊಂಡಿದ್ದಾಳೆ. ಈ ವಯಸ್ಸಿನಲ್ಲೂ ತನ್ನ ಚರ್ಮದ ಮೈಕಾಂತಿ ಹೀಗಿರುವ ಗುಟ್ಟನ್ನು ತೆರೆದಿಟ್ಟಿದ್ದಾಳೆ. `ವಿಶ್ವ ಆರೋಗ್ಯ ದಿನ'ದಂದು ಮಾತನಾಡುತ್ತಾ ಈಕೆ ತನ್ನ ಅಭಿಮಾನಿಗಳಿಗೆ ಸದಾ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾಳೆ. ತನ್ನ ಸೌಂದರ್ಯದ ಕುರಿತಾಗಿ ಮಾಧುರಿ ಟ್ವೀಟರ್‌ನಲ್ಲಿ, ನಟನೆ ಮತ್ತು ನೃತ್ಯ ತನ್ನನ್ನು ಸದಾ ಬಿಝಿ ಆಗಿರಿಸಿದೆ. ಇದರಿಂದಾಗಿ ತನುಮನ ಸದಾ ಆರೋಗ್ಯಕರವಾಗಿದೆ. ನೀವು ನಿಮ್ಮ ದೇಹವನ್ನು ಸದಾ ಫಿಟ್‌ ಆಗಿರಿಸಿಕೊಳ್ಳಬಯಸಿದರೆ, ನಿಯಮಿತವಾಗಿ ಬೆಳಗಿನ ವಾಕಿಂಗ್‌ ಜಾಗಿಂಗ್‌ ಹಾಗೂ ವ್ಯಾಯಾಮಕ್ಕೆ ಮಹತ್ವ ಕೊಡಿ. ನಿಮ್ಮ ಆಹಾರ ಸದಾ ಪೌಷ್ಟಿಕ ಹಾಗೂ ಹೆಲ್ದಿ ಆಗಿರಬೇಕು ಎನ್ನುತ್ತಾಳೆ.

Daisy-Shah-HD-Wallpaper

ಡೇಝಿಗೆ ಸಲ್ಲು ನೀಡಿದ ಸಲಹೆ

ಸಲ್ಮಾನ್‌ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿ ಇದೀಗ ದೊಡ್ಡ ಪಾತ್ರದ ಹುಡುಕಾಟದಲ್ಲಿರುವ ನಟಿ ಡೇಝಿಗೆ ಐಟಂ ಸಾಂಗ್ಸ್ ಅಥವಾ ಕ್ಯಾಮಿಯೋ ರೋಲ್ಸ್ ಸಾಕಾಗಿದೆಯಂತೆ. ಆಕೆಯ ಈ ಚಿಂತೆಗೆ ಸಲ್ಲು ಪರಿಹಾರ ಹೇಳಿದ್ದಾನೆ. ಕೆಲವು ದಿನಗಳ ಹಿಂದೆ ನಿರ್ಮಾಪಕ ಭೂಷಣ್‌ ಕುಮಾರ್‌ ತಮ್ಮ ಮುಂದಿನ `ಐ ಹೇಟ್‌ ಲವ್ ಸ್ಟೋರೀಸ್‌' ಚಿತ್ರಕ್ಕಾಗಿ ನಾಯಕಿ ಬೇಕೆಂದು  ಹುಡುಕುತ್ತಿದ್ದರು. ತಕ್ಷಣ ಸಲ್ಲು ಭೂಷಣ್‌ಗೆ ಡೇಝಿಯ ಹೆಸರು ಶಿಫಾರಸ್ಸು ಮಾಡಿದನಂತೆ. ಅಂಥ ಸಲ್ಮಾನ್‌ ಫ್ರೆಂಡ್‌ ಆಗಿ ಜೊತೆಗಿರುವಾಗ ಡೇಝಿ ಮುಂದಿನ ಚಿತ್ರಗಳಿಗಾಗಿ ಅವರಿವರನ್ನು ಬೇಳಾಡಬೇಕಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ