ಚಿತ್ರ: ಪ್ರೇಮದ ಊರಲಿ
ನಿರ್ದೇಶನ: ಮನೋಜ್ ಕುಮಾರ್
ನಿರ್ಮಾಣ: ಮಮತಾ ದೇವೇಂದ್ರ, ಪ್ರಶಾಂತ ಡಿಎಸ್, ರಮೇಶ್ ಎನ್.
ತಾರಾಗಣ: ರಂಗಾಯಣ ರಘು, ಶ್ರೀ ರಾಮ್, ತಪಸ್ವಿನಿ ಪೂಣಚ್ಚ, ರಮಿಕಾ ಶಿವು, ಇಳಾ ವಿಟ್ಲಾ ಗೋವಿಂದೇಗೌಡ ಮುಂತಾದವರು.
ರೇಟಿಂಗ್: 4/5 ****
- ರಾಘವೇಂದ್ರ   ಅಡಿಗ ಎಚ್ಚೆನ್.

ನಾಗಣ್ಣ (ರಂಗಾಯಣ ರಘು) ಪತ್ನಿ ತೀರಿಕೊಂಡ ಮೇಲೆ ಮತ್ತೆ ಮದುವೆ ಆಗದೆ ಮಗ ಸಂತು  (ಶ್ರೀರಾಮ್) ನನ್ನ ಬಹಳ ಪ್ರೀತಿಯಿಂದ ಬೆಳೆಸಿರುತ್ತಾನೆ. ಸರಿಯಾಗಿ ವಿದ್ಯಾಭ್ಯಾಸ ಮಾಡದ ಸಂತುವಿಗೆ ಪದವಿ ಓದಿದ ಹುಡುಗಿಯನ್ನು ಮದುವೆ ಮಾಡಿಸಬೇಕು ಎಂಬುದು ಅವನ ಆಸೆ. ಆದರೆ ರೈತರಿಗೆ ಹೆಣ್ಣು ಸಿಗದೆ ಮದುವೆ ಮುಂದೆ ಹೋಗುತ್ತಿರುತ್ತದೆ. ಈ ನಡುವೆ ಒಂದು ಆಕಸ್ಮಿಕ ಸಂದರ್ಭದಲ್ಲಿ ಸಂತುವಿನ ಮದುವೆ ವಿದೇಶದಲ್ಲಿ ಓದಿದ ಯುವತಿ ಜೊತೆ ಆಗುತ್ತದೆ. ಇದು ಹೇಗೆ? ಮುಂದಿನ ಕಥೆ ಏನು ಎನ್ನುವುದು ತಿಳಿಯಲು ನೀವು ಈ ವಾರ ತೆರೆಗೆ ಬಂದ "ಪ್ರೇಮದ ಊರಲಿ" ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು.
ಇದು ಬರೀ ಗ್ರಾಮೀಣ ಸೊಗಡಿನ ಕಥೆ ಇರುವ ಸಿನಿಮಾ ಮಾತ್ರವಲ್ಲ. ಇದರಲ್ಲಿ ಎಮೋಷನಲ್ ಆದಂತಹ ಪ್ರೇಮಕಥೆ ಕೂಡ ಇದೆ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವಂತಹ ಗುಣ ಈ ಸಿನಿಮಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರೈತ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದನ್ನು ಕೇಂದ್ರಬಿಂದುವಾಗಿ ಮಾತ್ರ ಇಟ್ಟುಕೊಂಡು, ಅದರ ಸುತ್ತ ಒಂದು ಸುಂದರವಾದ ಪ್ರೇಮಕಥೆಯನ್ನು ತೋರಿಸಲಾಗಿದೆ. ಅಲ್ಲಿ ತ್ರಿಕೋನ ಪ್ರೇಮಕಥೆ ಕೂಡ ಹೈಲೈಟ್ ಆಗಿದೆ. ಕೌಟುಂಬಿಕ ಮೌಲ್ಯಗಳನ್ನು ಉತ್ತಮವಾಗಿ ಕಟ್ಟಿಕೊಡಲಾಗಿದೆ.

1001851201

ರಂಗಾಯಣ ರಘು ಅವರು ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆಶ್ರೀರಾಮ್ ಅವರ ವೃತ್ತಿಜೀವನದ ದಿ ಬೆಸ್ಟ್ ಚಿತ್ರ ಇದಾಗಿದೆ. ನಟಿ ಇಳಾ ವಿಟ್ಲಾ ಅವರು ಅಜ್ಜಿಯ ಪಾತ್ರವನ್ನು  ನಿಭಾಯಿಸಿದ್ದಾರೆ. ನಾಯಕಿಯರಾದ ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಮನಸ್ಸು ತಟ್ಟುವ ರೀತಿಯಲ್ಲಿ ಅಭಿನಯಿಸಿದ್ದಾರೆ.
ಸುನಾದ್ ಗೌತಮ್ ಸಂಗೀತ ಭಾವತೀವ್ರತೆ ಹೆಚ್ಚಿಸಿದೆ. ರಾಜ್​ಕಾಂತ್ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.
ಸಣ್ಣ-ಪುಟ್ಟ ಮೈನಸ್ ಅಂಶಗಳ ನಡುವೆಯೂ ಇದೊಂದು ಉತ್ತಮ ಸಿನಿಮಾ ಎನಿಸಿಕೊಳ್ಳುತ್ತದೆ. ಇದೊಂದು ಒಂದು ಪಕ್ಕಾ ಕೌಟುಂಬಿಕ ಕಥೆಯಾಗಿದ್ದು ಹಲವಾರು ಬಾರಿ ಪ್ರೇಕ್ಷಕರನ್ನು ಭಾವತೀವ್ರತೆಯಲ್ಲಿ ಮುಳುಗಿ ತೇಲಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ