ರಾಘವೇಂದ್ರ ಅಡಿಗ ಎಚ್ಚೆನ್.

ಶ್ರೀ ಗುರು ಕರಿಬಸವೇಶ್ವರ ಪ್ರೊಡಕ್ಷನ್ ಲಾಂಛನದಲ್ಲಿ ಬಿ.ಸಿದ್ದಲಿಂಗಯ್ಯ ನಿರ್ಮಿಸುತ್ತಿರುವ ಹಾಗೂ ಎಸ್ ಪ್ರದೀಪ್ ವರ್ಮ ನಿರ್ದೇಶಿಸುತ್ತಿರುವ “ಪ್ರೇಮಿ” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ “ಮನಸ್ಸು ಏನೋ ಕಾಡಿದೆ” ಹಾಡು ಎಲ್ಲರ ಮನ ಗೆದ್ದಿದೆ. ಇತ್ತೀಚೆಗೆ ಈ ಚಿತ್ರದ “ಬಾರೋ ಬಾರೋ ಎಣ್ಣೆ ಹೊಡೆಯೋಣ” ಹಾಡನ್ನು ಖ್ಯಾತ ಗೀತರಚನೆಕಾರ ಡಾ. ವಿ.ನಾಗೇಂದ್ರಪ್ರಸಾದ್ ಬಿಡುಗಡೆ ಮಾಡಿದರು.‌ “ಹಾಡು ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲಿ” ಎಂದು ನಾಗೇಂದ್ರ ಪ್ರಸಾದ್ ಹಾರೈಸಿದರು.
ಚಿತ್ರದ ನಿರ್ದೇಶಕರಾದ ಎಸ್ ಪ್ರದೀಪ್ ವರ್ಮ ಅವರೆ ಬರೆದು, ಹಾಡಿ ಹಾಗೂ ಸಂಗೀತವನ್ನು ಸಂಯೋಜಿಸಿರುವ ಈ ಹಾಡಿನಲ್ಲಿ ಅದ್ವಿಕ್, ಕಿರಣ್ ರಾಜ್, ಹರ್ಷಿತಾ ಕಲ್ಲಿಂಗಲ್, ಎನ್ ಎಮ್ ವಿಮಲ್ ರಾಜ್, ಹರೀಶ್ ಉಕ್ಕಡಗಾತ್ರಿ ಅಭಿನಯಿಸಿದ್ದಾರೆ. ಫೆಬ್ರವರಿ 2ರ ಸಂಜೆ 6 ಗಂಟೆಗೆ ಈ ಹಾಡು ಬಿಡುಗಡೆಯಾಗಲಿದೆ.

premis 1

“ಪ್ರೇಮಿ” ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ದಾವಣಗೆರೆ, ದೇವರಬೆಳಕೆರೆ, ಗೋಕರ್ಣ,‌ ಕನಕಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ “ಪ್ರೇಮಿ” ಚಿತ್ರಕ್ಕೆ ಟಿ.ಎಸ್ ಅಕ್ಕಮಹಾದೇವಿ ಕಥೆ ಬರೆದಿದ್ದಾರೆ. ಎಸ್ ಪ್ರದೀಪ್ ವರ್ಮ ನಿರ್ದೇಶನ ಮಾಡಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮ ಅವರೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಸಹ ನಿರ್ದೇಶನ ಮಾಡಿರುವ ಎನ್ ವಿಮಲ್ ರಾಜ್ ಅವರ ಸಂಭಾಷಣೆ, ಕಿರಣ್ ರಾಜ್, ಶಂಕರ್ ಅಂಬಿ ಹಾಗೂ ಪೂರ್ಣಚಂದ್ರ ಎಂ ದೇವಂಗ ಸಹಾಯಕ ನಿರ್ದೇಶನ, ಗೌತಮ್ ಮಟ್ಟಿ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ರಾಮ್ ದೇವ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಕೆ.ಎಂ.ಹರೀಶ್ ಉಕ್ಕಡಗಾತ್ರಿ ಲೈನ್ ಪ್ರೊಡ್ಯೂಸರ್ ಹಾಗೂ ವೀರೇಶ್ ಎರೆಕುಪ್ಪಿ ಹಿರೇಮಠ ಕಾರ್ಯ ನಿರ್ವಾಹಕ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿರುವ “ಪ್ರೇಮಿ” ಚಿತ್ರದ ನಾಯಕನಾಗಿ ಅದ್ವಿಕ್ ನಟಿಸಿದ್ದಾರೆ. ಸಾತ್ವಿಕ, ಶೋಭಿತ, ಎಸ್ ಪ್ರದೀಪ್ ವರ್ಮ, ಹರೀಶ್ ಉಕ್ಕಡಗಾತ್ರಿ, ಶಂಕರ್ ಅಂಬಿ, ಹೆಚ್ ಜಿ ವೀರೇಶ್, ದ್ವಿತ ಕೆ ಗೌಡ, ಸಂದೇಶ್, ಸಂಗಮೇಶ್ ದೇವರಬೆಳಕೆರೆ, ಕಲ್ಕಿ, ಮಾಸ್ಟರ್ ಹರ್ಷಲ್, ಮಾಸ್ಟರ್ ಸಂತೃಪ್ತಿ ಶಿವಧರಮಠ, ಸಮರ್ಥ್ ರಾಘವೇಂದ್ರ, ಸುರೇಶ್ ಬಾಬು , ಸಂದೇಶ ಮುಂತಾದವರು “ಪ್ರೇಮಿ” ಚಿತ್ರದ ತಾರಾಬಳಗದಲ್ಲಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ