ಮಾಲಿವುಡ್ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಬೆಂಗಳೂರಿನಲ್ಲಿ ರಸ್ತೆ ಬದಿ ನಿಂತು ದೋಸೆ ಸವಿಯುತ್ತಿರೋ ಫೋಟೋ ಹಾಗೂ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ಕನ್ನಡದ ವಿಷ್ಣುಪ್ರಿಯಾ ಚಿತ್ರದ ಪ್ರಮೋಶನ್ ಗಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಿಯಾ, ಶ್ರೇಯಸ್ ಜೊತೆ ಬೆಂಗಳೂರು ಸುತ್ತಿ, ರಸ್ತೆ ಬದಿ ನಿಂತು ದೋಸೆ ತಿಂದಿದ್ದಾರೆ.
ವಿಷ್ಣುಪ್ರಿಯಾ ಚಿತ್ರವನ್ನು ವಿ.ಕೆ.ಪ್ರಕಾಶ್ ನಿರ್ದೇಶಿಸಿದ್ದು, ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಿನೋದ್ ಭಾರತಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಶ್ರೇಯಸ್ ಮಂಜು ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ.
ಮಾಲಿವುಡ್‌ನ ಒರು ಅದಾರ್ ಲವ್ ಸ್ಟೋರಿ ಅನ್ನೋ ಚಿತ್ರದಲ್ಲಿ ಕಣ್ಸನ್ನೆ ಮಾಡಿ ಎಲ್ಲರ ಹೃದಯ ಕದ್ದಿರುವ ಪ್ರಿಯಾ ವಾರಿಯರ್, ಈ ಒಂದು ಚಿತ್ರದ ಕ್ರೇಜ್ ಇರೋ ಸಮಯದಲ್ಲಿಯೇ, ಕನ್ನಡದ ವಿಷ್ಣುಪ್ರಿಯಾ ಚಿತ್ರ ಒಪ್ಪಿದ್ದರು. ಅದು ಇದೀಗ ರಿಲೀಸ್ ಹಂತಕ್ಕೆ ಬಂದಿದೆ.
ಚಿತ್ರದ ನಾಯಕ ಶ್ರೇಯಸ್ ಮಂಜು ಈ ಚಿತ್ರಕ್ಕೆ ಡೆಡಿಕೇಟೆಡ್ ಆಗಿಯೇ ಕೆಲಸ ಮಾಡಿದ್ದಾರೆ. ಈ ಚಿತ್ರಕ್ಕೂ ಮೊದಲು ಶ್ರೇಯಸ್ ಮಂಜು, ಪಡ್ಡೆಹುಲಿ ಚಿತ್ರ ಮಾಡಿದ್ದರು. ತದನಂತರ ರಾಣಾ ಸಿನಿಮಾ ಮಾಡಿದರು. ಈ ಸಿನಿಮಾ ಆದ್ಮೇಲೆ ದಿಲ್ ದಾರ್ ಅನ್ನೋ ಮತ್ತೊಂದು ಚಿತ್ರ ಒಪ್ಪಿದ್ದಾರೆ. ಈ ಚಿತ್ರದ ಶೂಟಿಂಗ್ ಇನ್ನು ನಡೆಯುತ್ತಿದೆ.
ಪ್ರಿಯಾ ವಾರಿಯರ್ ಕೂಡ ಬ್ಯುಸಿ ಇದ್ದು, ಕನ್ನಡದಲ್ಲಿ ವಿಷ್ಣುಪ್ರಿಯಾ ರಿಲೀಸ್‌ಗೆ ರೆಡಿ ಆಗಿದೆ. ಹಿಂದಿಯಲ್ಲೂ ಪ್ರಿಯಾ ವಾರಿಯರ್ ಸಿನಿಮಾ ಮಾಡಿದ್ದಾರೆ. ಲವ್ ಹ್ಯಾಕರ್ಸ್, 3 ಮಂಕೀಸ್ ಅನ್ನೋ ಸಿನಿಮಾ ಕೂಡ ಇದೆ.
ನಟಿ ಪ್ರಿಯಾ ವಾರಿಯರ್ ಒಂದು ಕಣ್ಸನ್ನೆ ಮೂಲಕ ರಾತ್ರೋ ರಾತ್ರಿ ಖ್ಯಾತಿ ಪಡೆದಿದ್ದರು. ಎಲ್ಲೆಡೆ ಕಣ್ಸನ್ನೆ ವಿಡಿಯೋ ವೈರಲ್ ಆಗಿತ್ತು. ಇವರ ಕಣ್ಣು ತುಂಬಾ ಆಕರ್ಷಕವಾಗಿವೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದರು.
ಏನೇ ಆಗ್ಲಿ ಮಾಲಿವುಡ್ ಬೆಡಗಿ ಸ್ಯಾಂಡಲ್ವುಡ್ಗೂ ಬಂದು ಬೆಂಗಳೂರಿನ ಅದರಲ್ಲೂ ಯಾವುದೇ ಹಮ್ಮು ಬಿಮ್ಮು ತೋರದೆ ರಸ್ತೆ ಬದಿಯಲ್ಲಿ ನಿಂತು ದೋಸೆ ತಿನ್ನುತ್ತಿರೋದನ್ನು ನೋಡಿದ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ.