ತಾರೆಯರ ಗುಂಪಲ್ಲಿ ಕಳೆದುಹೋಗಲಾರೆ
`ಅಂಗ್ರೇಝಿ ಮೀಡಿಯಂ' ಚಿತ್ರದಲ್ಲಿ ಇರ್ಫಾನ್ ಖಾನ್ ರಂಥ ದಿಗ್ಗಜರೊಂದಿಗೆ ನಟಿಸಿಯೂ ಎಲ್ಲರಿಂದ ಪ್ರಶಂಸೆ ಗಿಟ್ಟಿಸಿದ ನಟಿ ರಾಧಿಕಾ ಮದನ್ ಳ ಧೈರ್ಯ ಮೆಚ್ಚತಕ್ಕದ್ದು. ಇದಾದ ಮೇಲೆ ಇವಳಿಗೆ ದೊಡ್ಡ ಪ್ರಾಜೆಕ್ಟ್ ಸಿಗಲೇ ಇಲ್ಲ ಎಂಬುದು ಬೇರೆ ವಿಷಯ. ಆದರೆ ಈಕೆ ಉತ್ತಮ ನಟಿ ಎಂಬುದನ್ನು ಸಾಬೀತುಪಡಿಸಿದ್ದಳು. ಮುಂದೆ ತಾನು ಕೇವಲ ನಾಯಕಿಪ್ರಧಾನ ಚಿತ್ರಗಳಲ್ಲಷ್ಟೇ ನಟಿಸುವುದಾಗಿ ರಾಧಿಕಾ ಹೇಳುತ್ತಾಳೆ. ಕೇವಲ ನಾಯಕನನ್ನು ಓಲೈಸುತ್ತಾ, ಅವನ ಜೊತೆ ಗಿರಕಿ ಹೊಡೆದು ಹಾಡಿನಲ್ಲಿ ಕುಣಿಯುವ ಪಾತ್ರ ಬೇಡ ಅಂತಾಳೆ.
ಈ ಫಿಲ್ಮ್ ಇಂಡಸ್ಟ್ರಿಯೇ ವಿಚಿತ್ರ

ಕರಣ್ ಡಿಯೋಲ್ ಜೊತೆ `ಪಲ್ ಪಲ್ ದಿಲ್ ಕೆ ಪಾಸ್' ಚಿತ್ರದಲ್ಲಿ ನಟಿಸಿದ್ದ ಹುಡುಗಿ ಸಿಹರ್ ನೆನಪಿದ್ದಾಳಾ? ನೆನಪಿನಲ್ಲಿ ಉಳಿಯುವುದು ಕಷ್ಟ ಬಿಡಿ, ಏಕೆಂದರೆ ಅತ್ತ ಆ ಚಿತ್ರ ಓಡಲಿಲ್ಲ ಅಥವಾ ಅದರಲ್ಲಿ ನಟಿಸಿದವರಿಗೆ ಬೇರೆ ಚಿತ್ರಗಳೂ ಸಿಗಲಿಲ್ಲ. ಪಾಪ, ಇದಕ್ಕೆ ಸಿಹರ್ ಏನು ಮಾಡಿಯಾಳು? ಈ ಚಿತ್ರದ ನಂತರ ಅವಳು ಅನೇಕ ಕಡೆ ಆಡಿಶನ್ಸ್ ನೀಡಿದಳು, ಆದರೆ ಎಲ್ಲೂ ಬೇಳೆಕಾಳು ಬೇಯಲಿಲ್ಲ. ಒಂದು ಸಲವಂತೂ ಒಂದು ಚಿತ್ರಕ್ಕೆ ಇವಳನ್ನು ಸ್ಟಾರ್ ಕಾಸ್ಟ್ ಮಾಡಿದ್ದೂ ಆಯ್ತು, ಆ ಚಿತ್ರ ಶುರುವಾಯ್ತು. ಇವಳು ತವರಿನಿಂದ ಮುಂಬೈಗೆ ಬಂದು ಇನ್ನೇನು ಚಿತ್ರದ ಸೆಟ್ ಗೆ ದೌಡಾಯಿಸಬೇಕು, ಇಳ ಜಾಗದಲ್ಲಿ ಬೇರೊಬ್ಬಳಿದ್ದಳು! ಹೀಗಾಗಿ ಸಿಹರ್ ಈ ಫಿಲ್ಮಂ ಇಂಡಸ್ಟ್ರಿ ಭಲೇ ವಿಚಿತ್ರ ಅಂತಿದ್ದಾಳೆ!
ದುರ್ಬಲ ಎನಿಸಿದ ಅಜಯ್ ನ ಡಿಜಿಟಲ್ ಡೆಬ್ಯು

ತಡವಾಗಿ ಅವಕಾಶ ಒದಗಿ ಬಂದರೂ ಏಳಿಗೆ ಕಾಣಲಿಲ್ಲ. ಅರೆ, ನಮ್ಮ ಸಿಂಘಂಗೆ ಏನಾಯ್ತು? ಡಿಜಿಟಲ್ ಡೆಬ್ಯುಗಾಗಿ ಈತನಿಗೆ `ರುದ್ರಂ'ನಂಥ ದುರ್ಬಲ ಸ್ಕ್ರಿಪ್ಟ್ ಚಿತ್ರ ಸಿಗಬೇಕೇ? ಇದನ್ನು ಸೀರೀಸ್ ಎನ್ನುವುದು ತಪ್ಪಾದೀತು, ಏಕೆಂದರೆ ಇದನ್ನು ಕಚಡಾ ಕ್ರೈಂ ಶೋ ತರಹ ಚಿತ್ರಿಸಲಾಗಿದೆ, ಪ್ರತಿ ಎಪಿಸೋಡ್ ನಲ್ಲೂ ಅಲ್ಲಿ ಹೊಸ ಖಳರೇ ಇರುತ್ತಾರೆ. ಈಶಾ ಡಿಯೋಲ್ ಳನ್ನು ಇದರಲ್ಲಿ ಬಲವಂತವಾಗಿ ತುರುಕಾಗಿದೆ, ಇವಳು ಈ ಕಥೆಯಲ್ಲಿ ಇಲ್ಲದಿದ್ದರೂ ದೊಡ್ಡ ವ್ಯತ್ಯಸವೇನೂ ಆಗುತ್ತಿರಲಿಲ್ಲ. ಈಶಾ ಇದಕ್ಕೆ ಮುಂಚೆ ಎಂದೋ ಲಿಪ್ ಫಿಲರ್ಸ್ ನ ಕೆಲಸ ಮಾಡಿರಬೇಕು, ಇಲ್ಲಿ ಇವಳ ಕ್ಲೋಸ್ ಅಪ್ ಶಾಟ್ಸ್ ಬಂದಾಗಂತೂ ಇನ್ನೂ ಕೆಟ್ಟದಾಗಿ ಕಾಣುತ್ತಾಳೆ. ಇವಳನ್ನು ಈ ಚಿತ್ರದಲ್ಲಿ ನೋಡಬಯಸಿದರೆ, ಅಗತ್ಯವಾಗಿ ಜೊತೆಗೆ ಒಂದು ತಲೆನೋವಿನ ಮಾತ್ರೆ ಇರಲಿ.
ಕಾಂಟ್ರೋವರ್ಸಿ ಅಂಡ್ ಕಪಿಲ್

ಅರೆ, ವಿವಾದಗಳಿದ್ದರೇನೇ ಜನರಿಗೆ ಟಿವಿಯ ಕಪಿಲ್ ಶರ್ಮ ನೆನಪಾಗುವುದು, ಇಲ್ಲದಿದ್ದರೆ ಈತನ ಶೋ ಅಂತೂ ಈಗಾಗಲೇ ಡಬ್ಬಾ ಎನಿಸಿಬಿಟ್ಟಿದೆ. ಈತ ಮೊದಲು ಅಕ್ಷಯ್ ಕುಮಾರ್ ನಂತರ `ದಿ ಕಾಶ್ಮೀರ್ ಫೈಲ್ಸ್' ನಿರ್ದೇಶಕ ವಿವೇಕ್ ರಂಜನ್ ಜೊತೆ ಗುದ್ದಾಡಿದ್ದಾಯಿತು. ಸುದ್ದಿ ಪ್ರಮೋಟ್ ಮಾಡಲು ಒಪ್ಪಲಿಲ್ಲ. ಅಕ್ಷಯ್ ಸಹ ಮುನಿದ ಪತ್ನಿಯಂತೆ ಮುಖ ತಿರುಗಿಸಿದಾಗ, ಏನೋ ಮಾಡಿ ಈತ ಓಲೈಸಿದ. ಆದರೆ ವಿವೇಕ್ ಕಪಿಲ್ ರ ಜಗಳ ಅತ್ತೆಸೊಸೆ, ಜಗಳದ ಹಾಗಾಯ್ತು. ಕಪಿಲ್ ತನ್ನ ಶೋನಲ್ಲಿ ಮುದ್ದು ಸೊಸೆ. ಆದರೆ, ಮನೆಯ ಮಾಲೀಕಳ ಹಾಗೆಯೂ ಮೆರೆಯುತ್ತಿದ್ದಾನೆ. ವಿವೇಕ್ ಇದರಲ್ಲಿ ಬಲವಂತವಾಗಿ ಅತ್ತೆಯಂತೆ ನುಗ್ಗಲು ಯತ್ನಿಸಿದರೆ ಬಿಟ್ಟಾನಾ? ಈ ಕಾರಣದಿಂದಲೇ ಇಬ್ಬರ ನಡುವೆ ರಷ್ಯಾ ಯೂಕ್ರೇನ್ ವಾರ್ ತರಹ ಬಾಂಬುಗಳಾಗಿ ಸ್ಛೋಟಿಸುತ್ತಲೇ ಇದೆ.




 
  
         
    





 
                
                
                
                
                
                
               