ನೃತ್ಯದಲ್ಲಿ ಆಸಕ್ತಿ, ಹಾಡು ಗೀಳು ಹಚ್ಚಿಕೊಂಡಿದ್ದ ತುಮಕೂರು ಮೂಲದ ರಜನಿ, ಗೆಳತಿಯರ ಒತ್ತಾಯಕ್ಕೆ ಕಟ್ಟುಬಿದ್ದು ಫೋಟೋ ಶೂಟ್‌ ಮಾಡಿಸಿಕೊಳ್ಳುತ್ತಾಳೆ. ಅನೇಕ ಕಡೆ ಆಡಿಶನ್‌ಗೂ ಹೋಗುತ್ತಾಳೆ. ಆದರೆ ಬಹುತೇಕ ಕಡೆ `ಫೇಲ್‌' ಎಂಬ ಉತ್ತರವೇ ಆಕೆಗೆ ದೊರೆಯುತ್ತದೆ.

ಕೊನೆಗೊಮ್ಮೆ ಒಂದು ಧಾರಾವಾಹಿಗೆ ಆಕೆ ಆಯ್ಕೆಯಾಗುತ್ತಾಳೆ. ಅದೂ ಕೂಡ ಧಾರಾವಾಹಿಯೊಂದರ ಶೀರ್ಷಿಕೆ ಪಾತ್ರ. ಆ ಧಾರಾವಾಹಿಯೇ `ಅಮೃತವರ್ಷಿಣಿ.' `ಅಮೃತಾ'ಳ ಪಾತ್ರ ಕೆಲವೇ ತಿಂಗಳಲ್ಲಿ ರಜನಿಯನ್ನು ಮನೆ ಮಾತಾಗುವಂತೆ ಮಾಡಿತು. ತಮ್ಮ ಪ್ರಥಮ ಧಾರಾವಾಹಿಯ ನೆನಪುಗಳನ್ನು ರಜನಿ ಇಲ್ಲಿ ಹಂಚಿಕೊಂಡಿದ್ದಾರೆ.

ಧಾರಾವಾಹಿಗೆ ಬರುವ ಮುನ್ನ ಅಭಿನಯದ ತರಬೇತಿಯನ್ನೇನಾದರೂ ಪಡೆದುಕೊಂಡಿದ್ದಿರಾ?

ನಾನು ಮುಂಚೆ ಕೆಲವು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿದ್ದೆ. ಒಂದು ಸಲ ಜಾಹೀರಾತು ಚಿತ್ರೀಕರಣದ ಸಂದರ್ಭದಲ್ಲಿ ಆರ್‌.ಜಿ. ಮೀಡಿಯಾದ ಮೇಕಪ್‌ ಮ್ಯಾನ್‌ ಕುಮಾರ್‌ ಎಂಬುವವರು ಅಲ್ಲಿಗೆ ಬಂದಿದ್ದರು. ಅವರು ನನಗೆ `ರವಿ ಗರಣಿಯವರು ಹೊಸದೊಂದು ಧಾರಾವಾಹಿಗೆ ಸಿದ್ಧತೆ ನಡೆಸಿದ್ದಾರೆ. ನೀವು ಪ್ರಯತ್ನ ಮಾಡಿ,' ಎಂದಿದ್ದರು. ನನ್ನ ಹಾಗೆ 15 ಜನ ಹುಡುಗಿಯರು ಕೂಡ ಪ್ರಯತ್ನ ಮಾಡಿದ್ದರು. ಅವರಲ್ಲಿ ನಾನೇ ಆಯ್ಕೆ ಆದೆ.

ನಾಯಕ ಅಜಾನುಬಾಹು. ನೀವು ಸ್ವಲ್ಪ ಕಡಿಮೆ ಎತ್ತರ ಎಂಬ ಮಾತು ಆರಂಭದಲ್ಲಿ ಕೇಳಿಬಂದಿತ್ತಲ್ಲ. ಆ ಸಮಸ್ಯೆ ಹೇಗೆ ಬಗೆಹರಿಯಿತು?

ರವಿ ಗರಣಿ ಸರ್‌ ನನ್ನಲ್ಲಿನ ಪ್ರತಿಭೆ ಗಮನಿಸಿ ಚಾನೆಲ್‌ನರನ್ನು ಒಪ್ಪಿಸಿ ನನ್ನನ್ನೇ `ಅಮೃತಾ'ಳನ್ನಾಗಿ ಮಾಡಿದರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

`ಅಮೃತರ್ಷಿಣಿ' ಧಾರಾವಾಹಿಯ ಜೊತೆ ಜೊತೆಗೆ ನೀವು `ಸ್ಟಾರ್‌ ಸಿಂಗರ್‌'ನಲ್ಲೂ ಕಾಣಿಸಿಕೊಂಡಿದ್ದೀರಿ. ನಿಮ್ಮ ಗಾನ ಪ್ರತಿಭೆ ಹೊರಹೊಮ್ಮಿದ್ದು ಹೇಗೆ?

ಶಾಲಾ ಹಂತದಿಂದಲೇ ಹಾಡು, ನೃತ್ಯದ ಬಗ್ಗೆ ನನಗೆ ಆಸಕ್ತಿ ಇತ್ತು. ತರಬೇತಿ ಇಲ್ಲದೆಯೇ ನಾನು ಹಾಡು ಕೇಳಿ ಕೇಳಿಯೇ ಹಾಡುವುದನ್ನು ರೂಢಿಸಿಕೊಂಡೆ. ಸುವರ್ಣ `ಸ್ಟಾರ್‌ ಸಿಂಗರ್ಸ್ನಲ್ಲಿ ನಾನು ಟಾಪ್‌ 9 ತನಕ ಬಂದು ಕ್ವಿಟ್‌ ಮಾಡಿದೆ.

ಧಾರಾವಾಹಿಯ ನಟನೆಗೂ ಮುಂಚಿನ ರಜನಿಗೂ, ಅಮೃತಾಳ ಪಾತ್ರ ನಿರ್ವಹಿಸಿದ ನಂತರದ ರಜನಿಗೂ ಏನಾದರೂ ವ್ಯತ್ಯಾಸ ಆಗಿದೆಯಾ?

ಧಾರಾವಾಹಿಯಲ್ಲಿ ಅಭಿನಯಿಸುವ ಮುನ್ನ ರಜನಿ ತುಂಬಾ ಮಾತುಗಾತಿಯಾಗಿದ್ದಳು. ಅಮೃತಾಳ ಪಾತ್ರ ಮಾಡಿದ ನಂತರ ಈಗಿನ ರಜನಿಯಲ್ಲಿ ತುಂಬಾ ವ್ಯತ್ಯಾಸ ಆಗಿದೆ. ಆ ಪಾತ್ರ ಮಾಡಿದ ಬಳಿಕ ಮಾತು ಮಿತವಾಗಿದೆ. ಆಡುವ ಪ್ರತಿಯೊಂದು ಮಾತು ಹಿತವಾಗಿರಬೇಕು, ಯಾರಿಗೂ ನೋವುಂಟು ಮಾಡಬಾರದೆಂದು ಆಕೆ ಯೋಚಿಸುತ್ತಾಳೆ.

ಧಾರಾವಾಹಿಯಲ್ಲಿ ಸದಾ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಅಮೃತಾ ಪಾತ್ರಧಾರಿ ವಾಸ್ತವ ಜೀವನದಲ್ಲೂ ಹೀಗೇನಾ?

ಛೇ! ಛೇ!! ಧಾರಾವಾಹಿಯಲ್ಲಿ ನನಗೆ ಪಕ್ಕಾ ಗೃಹಿಣಿಯ ಪಾತ್ರ ದೊರೆತಿರುವುದರಿಂದ ಸೀರೆಯೇ ನನ್ನ ದೈನಂದಿನ ಉಡುಗೆ. ಆದರೆ ವಾಸ್ತವ ಜೀವನದಲ್ಲಿ ನಾನು ಜೀನ್ಸ್, ಟೀಶರ್ಟ್ಸ್, ಚೂಡಿದಾರ್‌ ಧರಿಸಲು ಇಷ್ಟಪಡ್ತೀನಿ.

ಇದು ನಿಮ್ಮ ಪ್ರಥಮ ಧಾರಾವಾಹಿ. ಇದರಲ್ಲಿನ ಹಿರಿಯ ಕಲಾವಿದರು ನಿಮಗೆ ಹೇಗೆ ಪ್ರೋತ್ಸಾಹಿಸುತ್ತಾರೆ?

ಹಿರಿಯರಾದ ಹೇಮಾ ಚೌದರಿ, ಕಿಶೋರಿ ಬಲ್ಲಾಳ್‌, ಎನ್‌.ಜಿ.ಇ.ಎಫ್‌. ರಾಮಮೂರ್ತಿ, ಪೃಥ್ವಿರಾಜ್‌, ಕೃಷ್ಣ ಅಡಿಗ, ರಾಣಿ, ಸವಿತಾ ಇವರೆಲ್ಲ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಭಾವನಾತ್ಮಕ ಸನ್ನಿವೇಶದಲ್ಲಿ ನಾನು ಚೆನ್ನಾಗಿ ಅಭಿನಯಿಸಿದಾಗ ನನ್ನ ಬೆನ್ನುತಟ್ಟಿ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಸಾಹುಕಾರ ಜಾನಕಿ, ಬಿ. ಸರೋಜಾದೇವಿಯಂತಹ ದಿಗ್ಗಜ ನಟಿಯರು ನನ್ನ ಅಭಿನಯದ ಬಗ್ಗೆ ಹೊಗಳಿದ್ದಾರೆಂದೂ ಹೇಮಮ್ಮ ಅವರು ಹೇಳಿದಾಗ ನನಗೆ ಖುಷಿಯಿಂದ ಕಣ್ಣೀರು ಬಂದಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ