ಗಜಕೇಸರಿ : ಆನೆ ಪ್ರಿಯ ಯಶ್‌

ಭಾರಿ ನಿರೀಕ್ಷೆಯ `ಗಜಕೇಸರಿ' ಚಿತ್ರ ತೆರೆಗೆ ಬರಲು ರೆಡಿಯಾಗ್ತಿದೆ. ಅದ್ಧೂರಿ ನಿರ್ಮಾಣದ ಈ ಚಿತ್ರದಲ್ಲಿ ಯಶ್‌ನ ಗೆಟಪ್‌ ಈಗಾಗಲೇ ಭಾರಿ ಸುದ್ದಿ ಮಾಡುತ್ತಿದೆ. ಜೋರ್ಡಾನ್‌ನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಖ್ಯಾತ ಛಾಯಾಗ್ರಾಹಕ ಕೃಷ್ಣ (ಮುಂಗಾರು ಮಳೆ) ಅವರ ಮೊದಲ ನಿರ್ದೇಶನದ ಚಿತ್ರವಿದು. ಯಶ್‌ ಜೋಡಿಯಾಗಿ ಅಮೂಲ್ಯ ಕಾಣಿಸಿಕೊಳ್ಳುತ್ತಾಳೆ. ಈ ಚಿತ್ರಕ್ಕಾಗಿ ಹದಿನೈದು ಕೆ.ಜಿ. ತೂಕ ಇಳಿಸಿ ಇನ್ನಷ್ಟು ಸ್ಲಿಮ್ಮಾಗಿ ಸುಂದರವಾಗಿ ಕಾಣಿಸುತ್ತಾಳೆ ಅಮೂಲ್ಯ. ಯಶ್‌ ಆನೆ ಮೇಲೆ ನಿಂತಿರುವ ಸ್ಟಿಲ್ ‌ನೋಡಿದಾಗ ಇದೆಲ್ಲಾ ಹೇಗೆ ಸಾಧ್ಯವಾಯ್ತು ಅಂತ ಕೇಳಿದರೆ, ``ಚಿತ್ರೀಕರಣಕ್ಕೆ ಮೊದಲು ಆನೆಯನ್ನು ಗೆಳೆಯನನ್ನಾಗಿ ಮಾಡಿಕೊಂಡೆ. ಅದಕ್ಕೆ ಬೆಲ್ಲ ತಿನ್ನಿಸುತ್ತಿದ್ದೆ. ಅದರ ಜೊತೆಯಲ್ಲೇ ಕಾಲ ಕಳೆಯುತ್ತಾ ಸ್ನೇಹ ಬೆಳೆಸಿದೆ. ಹಾಗಾಗಿ ನಾನು ಆನೆಯೊಂದಿಗೆ ಕ್ಯಾಮೆರಾ ಎದುರಿಸುವಾಗ ಅದು ಶಾಂತವಾಗಿಯೇ ಭಾಗವಹಿಸುತ್ತಿತ್ತು. ನನಗೆ ಆನೆ ಅಂದ್ರೆ ತುಂಬಾನೆ ಇಷ್ಟ. ಪ್ರತಿನಿತ್ಯ ಅದರ ಮುಖ ನೋಡಿದಾಗ ಒಂದು ರೀತಿ ರೋಮಾಂಚನವಾಗ್ತಿತ್ತು. ಫೈಟ್‌ ಮಾಡುವಾಗಲೂ ಸಹ ಆನೆ ನನ್ನೊಂದಿಗಿರುತ್ತದೆ,'' ಎನ್ನುವ ಯಶ್‌ ಗಜಕೇಸರಿ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನ್ಯಾ ಕೈಯಲ್ಲಿ ಮಾಣಿಕ್ಯ

_O5A6253

ಸಿನಿಮಾರಂಗಕ್ಕೆ ಬರುವಾಗಲೇ ಕೈಯಲ್ಲಿ ಮಾಣಿಕ್ಯ ಇಟ್ಕೊಂಡು ಬಂದಂಥ ನಟಿ ರನ್ಯಾ ರಾವ್. `ಮಾಣಿಕ್ಯ' ಚಿತ್ರ ಯಶಸ್ವಿಯಾಗಿ ಓಡುತ್ತಿದೆ. ರನ್ಯಾ ಕೂಡಾ ಯಶಸ್ಸಿನ ಗುಂಗಿನಲ್ಲಿ ಹಾರಾಡುತ್ತಿದ್ದಾಳೆ. ಕನ್ನಡದ ಹುಡುಗಿಯರನ್ನೇ ತೆಗೆದುಕೊಳ್ಳಬೇಕು ಅಂತ ಸುದೀಪ್‌ ನಾಯಕಿಯ ತಲಾಷೆಯಲ್ಲಿದ್ದಾಗ ರನ್ಯಾಳ ಫೋಟೋ ಕಂಡಕೂಡಲೇ ಈ ಹುಡುಗಿಯನ್ನು ಕರೆಸಿ, ಅಭಿನಯ ಬಾರದಿದ್ದರೂ ಮಾಡಿಸೋಣ ಎಂದರಂತೆ. `ಸುದೀಪ್‌ ನನ್ನ ಗುರು' ಎಂದು ಹೇಳುವ ರನ್ಯಾ `ಮಾಣಿಕ್ಯ' ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ತೋರಿಸಿದ್ದಾಳೆ. `ನಿಜಕ್ಕೂ ನಾನು ಅದೃಷ್ಟವಂತೆ! ಸುದೀಪ್‌ ಅವರ ಸಿನಿಮಾದಲ್ಲಿ ಅವರ ಜೊತೆ ನಟಿಸುವ ಅವಕಾಶ ಸಿಕ್ಕಿತು,'' ಎನ್ನುತ್ತಾಳೆ. ಕಾಲೇಜು ಕಾಂಪೌಂಡ್‌ನಿಂದ ನೇರವಾಗಿ ಹೋಗಿ ಕ್ಯಾಮೆರ ಮುಂದೆ ನಿಂತರೆ ಹೇಗಾಗಬಾರದು? ಅದೇ ರೀತಿ ರನ್ಯಾ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುವಾಗ ಅನುಭವಿಸಿದ್ದಾಳೆ. `ಮಾಣಿಕ್ಯ' ಬಿಡುಗಡೆಯಾಗಿ ಯಶಸ್ಸು ಕಾಣುತ್ತಿದ್ದಂತೆ ರನ್ಯಾಳಿಗೆ ಅವಕಾಶಗಳ ಸುರಿಮಳೆ. ಆದರೆ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲವಂತೆ. ನನ್ನ ಅಭಿನಯದ ಬಗ್ಗೆ ಜನ ಹೇಗೆ ಪ್ರತಿಕ್ರಿಯೆ ಕೊಡುತ್ತಾರೆಂದು ತಿಳಿದ ನಂತರವೇ ಎರಡನೇ ಚಿತ್ರವನ್ನು ಒಪ್ಪಿಕೊಳ್ಳುತ್ತೇನೆ ಎನ್ನುತ್ತಾಳೆ ರನ್ಯಾ.

ಪರವಶನಾದೆನು.....

DSC08985

ಹೌದು, ಈ ಶೀರ್ಷಿಕೆ ಹೊಸ ಚಿತ್ರದ್ದಾಗಿದೆ. ಸಂಜನಾ ತಂಗಿ ನಿಕ್ಕಿ ನಾಯಕಿಯಾಗಿ ನಟಿಸುತ್ತಿರುವ ಚಿತ್ರವಿದು. ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಮನೋಜ್‌ ಎನ್ನುವ ತರುಣ ಆರು ವರ್ಷಗಳಿಂದ ಹೀರೋ ಆಗಬೇಕೆಂದು ಕನಸು ಕಂಡಂಥ ಆಶಾವಾದಿ. ಗಾಂಧಿನಗರದಲ್ಲಿ ಅವಕಾಶ ಗಿಟ್ಟಿಸಬೇಕೆಂದರೆ ಅದೆಷ್ಟು ಸೈಕಲ್ ಹೊಡೆಯಬೇಕಾಗುತ್ತೆ ಎಂಬುದು ಗೊತ್ತಿರುವ ಸಂಗತಿ. ಮನೋಜ್‌ ಆರು ವರ್ಷಗಳ ಹಿಂದೆ `ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದರಷ್ಟೆ. ನಾಯಕನಾಗಿಯೇ ಕಾಣಿಸಿಕೊಳ್ಳಬೇಕೆಂಬ ಹಟವಿತ್ತು. ಆರು ವರ್ಷಗಳ ನಂತರ ಪ್ರಯತ್ನ ಫಲ ಕೊಟ್ಟಿದೆ. `ಪರವಶನಾದೆನು' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ನಿಕ್ಕಿ ಕೂಡಾ ಸಂಜನಾಳಂತೆ ಬ್ಯೂಟಿಫುಲ್ ಬೆಡಗಿ. ಮನೋಜ್‌ ನಿಕ್ಕಿ ಜೋಡಿ ತೆರೆ ಮೇಲೆ ಮೂಡಿಬರಲಿದೆ. `ಪರಮಾತ್ಮ' ಚಿತ್ರದ ಹಾಡನ್ನು ನೆನಪಿಸುವ `ಪರವಶನಾದೆನು ಅರಿಯುವ ಮುನ್ನವೇ....' ಎಂಬಂತೆ ಈ ಚಿತ್ರ ಆ ಹಾಡಿನಷ್ಟೆ ಜನಪ್ರಿಯತೆ ಕಾಣಲಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ