- ರಾಘವೇಂದ್ರ ಅಡಿಗ ಎಚ್ಚೆನ್.

'ಧರ್ಮಸ್ಥಳ ದೂರು' ಪ್ರಕರಣಕ್ಕೆ ಸಂಬಂಧಿಸಿ ನಟ ರಾಕೇಶ್ ಅಡಿಗ ಪ್ರತಿಕ್ರಿಯಿಸಿದ್ದು, ತುರ್ತಾಗಿ ಪಾರದರ್ಶಕ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಅವರು, ನಮ್ಮ ಸರಕಾರಕ್ಕೆ, ನಾನು ಬೇಡಿಕೊಳ್ಳುತ್ತೇನೆ, ನಿಮ್ಮ ಜನರ ನಿಟ್ಟುಸಿರಿಗೆ ಎದುರಾಗಿ, ಅವರ ಅಳಲನ್ನು ಆಲಿಸಿ. ತನಿಖೆ ನಡೆಸುವುದು, ಸತ್ಯವನ್ನು ಹೊರಹಾಕುವುದು ಮತ್ತು ನ್ಯಾಯವನ್ನು ಖಚಿತಪಡಿಸುವುದು ನಿಮ್ಮ ಪವಿತ್ರ ಕರ್ತವ್ಯ. ಇನ್ನು ವಿಳಂಬ, ನೆಪಗಳು ಬೇಡ ಎಂದಿದ್ದಾರೆ.

Rakesh 1

ಇದು ರಾಜಕೀಯ ವಿಷಯವಲ್ಲ; ಇದು ಮಾನವೀಯತೆಯ ವಿಷಯ. ಹುಟ್ಟು ಮಾತ್ರವಲ್ಲ, ಸಾವಿನ ಘನತೆಯನ್ನೂ ಎತ್ತಿ ಹಿಡಿಯುವ ವಿಷಯ. ಇದಕ್ಕಾಗಿ ಧ್ವನಿಗಳು ಒಟ್ಟಾಗಬೇಕಾದ ವಿಷಯ. ಸತ್ಯಕ್ಕಾಗಿ ನಮ್ಮ ಸಾಮೂಹಿಕ ಬೇಡಿಕೆಯು ಅಸಡ್ಡೆಯ ಅಡಿಪಾಯವನ್ನು ಅಲುಗಾಡಿಸಲಿ. ಸಿಕ್ಕ ಎಲ್ಲಾ ವೇದಿಕೆಗಳಲ್ಲೂ ನ್ಯಾಯದ ಬೇಡಿಕೆ ಮುಂದಿಡೋಣ – ಸಾಮಾಜಿಕ ಮಾಧ್ಯಮ, ಸಾರ್ವಜನಿಕ ವೇದಿಕೆಗಳು, ನಮ್ಮ ಮನೆಗಳಲ್ಲಿನ ಸಂಭಾಷಣೆಗಳನ್ನು ಈ ಘೋರ ಅನ್ಯಾಯದ ತನಿಖೆಗೆ ಒತ್ತಾಯಿಸಲು ಬಳಸೋಣ ಎಂದು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ದೂರು ದಾಖಲಾದ ನಂತರವೂ ಈ ಸಾಮೂಹಿಕ ಶವಸಂಸ್ಕಾರದ ಸುತ್ತಲಿನ ಮೌನವು ನಮ್ಮ ಸಾಮೂಹಿಕ ಆತ್ಮಸಾಕ್ಷಿಯನ್ನು ಕಲಕಿದೆ. ಇದು ಕೇವಲ ಒಂದು ಸುದ್ದಿ, ಕಥೆಯಲ್ಲ; ಇದು ಕರ್ನಾಟಕದ ಇತಿಹಾಸದ ಮೇಲಿನ ಒಂದು ದೊಡ್ಡ ಗಾಯ, ನಮ್ಮ ಮಾನವೀಯತೆಯ ಮೇಲೆ ಮೂಡಿರುವ ಒಂದು ಕಲೆ. ಒಬ್ಬ ಕನ್ನಡಿಗನಾಗಿ, ಉತ್ತರಗಳನ್ನು ಕೇಳುವುದು ನನ್ನ ಕರ್ತವ್ಯ, ನಮ್ಮೆಲ್ಲರ ಕರ್ತವ್ಯ. ನಾವು ವರದಿಗಳನ್ನು ನೋಡುತ್ತಿದ್ದೇವೆ, ಪಿಸುಮಾತುಗಳನ್ನು ಕೇಳುತ್ತಿದ್ದೇವೆ, ಅನುಮಾನವನ್ನೂ ಹೊಂದಿದ್ದೇವೆ. ಆದರೆ ಮೃತರ ಘನತೆ, ಅವರ ಕುಟುಂಬಗಳ ದುಃಖ – ಬಯಸುವುದು ನ್ಯಾಯವನ್ನು ಮಾತ್ರ. ಇದಕ್ಕಾಗಿ ಪಾರದರ್ಶಕ ತನಿಖೆ ತುರ್ತು ಅಗತ್ಯ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ