-  ರಾಘವೇಂದ್ರ ಅಡಿಗ ಎಚ್ಚೆನ್.

ಭಾರತೀಯ ಚಿತ್ರರಂಗದ ಅತಿ ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಒಂದಾದ ರಾಮಾಯಣ ಬಗ್ಗೆ ನಟ ಯಶ್ ಆಸಕ್ತಿಕರ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದ್ದು, ಹಾಲಿವುಡ್‌ನಲ್ಲೂ ಗಮನ ಸೆಳೆಯುತ್ತಿದೆ.
ಇತ್ತೀಚೆಗೆ ಲಾಸ್ ಏಂಜಲ್ಸ್‌ನಲ್ಲಿ ನಡೆದ ಸಿನಿಮಾಕಾನ್ 2026 ಕಾರ್ಯಕ್ರಮದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಜೊತೆ ಭಾಗವಹಿಸಿದ್ದ ಯಶ್, ಹಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾತನಾಡಿದರು.
ಸಂದರ್ಶನದಲ್ಲಿ ರಣಬೀರ್ ಕಪೂರ್ ಜೊತೆಗಿನ ಅಭಿನಯದ ಅನುಭವದ ಬಗ್ಗೆ ಕೇಳಿದಾಗ ಯಶ್, “ಈ ಸಿನಿಮಾದ ಮೊದಲ ಭಾಗದಲ್ಲಿ ನಾವು ಇಬ್ಬರೂ ಒಂದೇ ಫ್ರೇಮ್‌ನಲ್ಲಿ ಎದುರಾಗುವುದೇ ಇಲ್ಲ. ರಾವಣ ಮತ್ತು ರಾಮ ಇಬ್ಬರಿಗೂ ಪ್ರತ್ಯೇಕ ಸಾಮ್ರಾಜ್ಯಗಳಿರುತ್ತವೆ. ಕಥೆ ಮುಂದುವರಿದಂತೆ ಮಾತ್ರ ನಮ್ಮಿಬ್ಬರ ಮುಖಾಮುಖಿ ಆಗುತ್ತದೆ” ಎಂದು ತಿಳಿಸಿದ್ದಾರೆ.
ಇನ್ನಷ್ಟು ವಿವರಿಸಿದ ಅವರು, “ರಣಬೀರ್ ಅದ್ಭುತ ನಟ. ನಮ್ಮಿಬ್ಬರ ನಡುವೆ ಇರುವ ಪರಸ್ಪರ ಗೌರವ ಮತ್ತು ಸ್ನೇಹ ಕೆಲಸವನ್ನು ಇನ್ನಷ್ಟು ಸುಲಭ ಮಾಡಿದೆ. ನಮ್ಮ ಎಲ್ಲರ ಗುರಿ ಒಂದೇ—‘ರಾಮಾಯಣ’ವನ್ನು ಅದ್ಭುತವಾಗಿ ನಿರ್ಮಿಸುವುದು. ಆ ಪ್ರಯತ್ನದಲ್ಲಿ ಎಲ್ಲರೂ ತಮ್ಮ ಶ್ರೇಷ್ಠತೆಯನ್ನು ನೀಡಿದ್ದಾರೆ” ಎಂದರು.
ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ರಣಬೀರ್ ಕಪೂರ್ ರಾಮನಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ರಾವಣನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಸಿನಿಮಾಕ್ಕೆ ಸಂಗೀತವನ್ನು ಎ.ಆರ್. ರೆಹಮಾನ್ ಮತ್ತು ಹಾನ್ಸ್ ಜೀಮರ್ ನೀಡಿದ್ದಾರೆ. ಚಿತ್ರವನ್ನು ‘ದಂಗಲ್’ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶಿಸಿದ್ದಾರೆ.
ಒಟ್ಟಿನಲ್ಲಿ, ರಾಮಾಯಣ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಯಶ್-ರಣಬೀರ್ ಜೋಡಿ ಯಾವಾಗ ಮುಖಾಮುಖಿಯಾಗಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ