ಹೆಣ್ಣುಮಕ್ಕಳು ಮನಸ್ಸು ಮಾಡಿದ್ರೆ ಅದೆಂಥಾ ಸಾಧನೆ ಬೇಕಾದರೂ ಮಾಡುತ್ತಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ನಟಿ ರಂಜನಿ ರಾಘವನ್. ರಂಜನಿ ರಾಘವನ್​ಗೆ ಜಸ್ಟ್ 30 ವರ್ಷ. ಇಡೀ ಕರುನಾಡೇ ಮೆಚ್ಚಿಕೊಂಡು ಅಪ್ಪಿಕೊಂಡಿರುವ, ಅಭಿಮಾನದಿಂದ ಕನ್ನಡತಿ ಎಂಬ ಕಿರೀಟ ತೊಟ್ಟಿರುವ ರಂಜನಿ ರಾಘವನ್ ಹೊಸ ವರ್ಷಕ್ಕೆ ಹೊಸ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಕನ್ನಡ ಟೀಚರ್ ಎಂದೇ ಖ್ಯಾತಿ ಗಳಿಸಿರುವ ರಂಜನಿ, ನಟಿಯಾಗಿ, ಬರಹಗಾರ್ತಿಯಾಗಿ ಎಲ್ಲರ ಮನೆಮಾತಾಗಿ ಇದೀಗ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.

ಹೌದು, ‘ಪುಟ್ಟಗೌರಿ ಮದುವೆ’, ‘ಕನ್ನಡತಿ’ ಧಾರಾವಾಹಿಗಳ ಮೂಲಕ ಮನೆಮನೆಗಳಲ್ಲಿ ಎಲ್ಲರ ಮನಮುಟ್ಟುವಂತೆ ನಟಿಸಿದ್ದ ನಟಿ ರಂಜನಿ ರಾಘವನ್ ಈ ವರ್ಷದಿಂದ ನಿರ್ದೇಶಕಿ ಆಗುತ್ತಿದ್ದಾರೆ. ಹೊಸ ವರುಷದ ಮೊದಲ ದಿನವೇ ಅವರು ಈ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಎರಡು ಫೋಟೋಗಳನ್ನು ಹಂಚಿಕೊಂಡು ಅವರು ಇನ್ನೂ ಕುತೂಹಲ ಮೂಡಿಸಿದ್ದಾರೆ. ಸ್ವರಮಾಂತ್ರಿಕ ಇಳಯರಾಜ ಅವರ ಜತೆಗಿನ ಫೋಟೋ ಅನ್ನು ರಂಜನಿ ಶೇರ್‌ ಮಾಡಿಕೊಂಡು ಮಹತ್ವದ ವಿಚಾರ ರಿವೀಲ್‌ ಮಾಡಿದ್ದಾರೆ. ತಾವು ನಿರ್ದೇಶಕಿಯಾಗಲು ಹೊರಟಿರುವ ಬಗ್ಗೆ ರಂಜನಿ ಮನದಾಳದ ಮಾತನ್ನು "ಗೃಹಶೋಭಾ" ಜೊತೆ ಹಂಚಿಕೊಂಡಿದ್ದಾರೆ. ವಿಶೇಷ ಏನು ಅಂದ್ರೆ ರಂಜನಿ ರಾಘವನ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ನಿರ್ದೇಶನ ಮಾಡುತ್ತಿರುವುದು. ಹೌದು. ಇವರ ಚೊಚ್ಚಲ ಚಿತ್ರಕ್ಕೆ ಇಳಯರಾಜ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಸಂಯೋಜನೆ ಮಾಡುತ್ತಿದ್ದಾರೆ. ಹೀಗಾಗಿ ರಂಜನಿ ಡೈರೆಕ್ಷನ್ ಇಡೀ ಕನ್ನಡ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ.

RANJANI RAGHAVAN (5)

ನನ್ನ ಕಥೆ ನನ್ನ ಕನಸಿನ ಕೂಸು : ಈ ಕುರಿತಂತೆ ಸೋಷಿಯಲ್ ಮೀಡಿಯಾ ಇನ್ಸ್​ಟಾದಲ್ಲಿ ಸುದೀರ್ಘವಾದ ಪೋಸ್ಟ್ ಮಾಡಿರುವ ನಟಿ ರಂಜನಿ ರಾಘವನ್ ತನ್ನ ಹೊಸ ಪಯಣ ಕುರಿತು ವಿವರ ನೀಡಿದ್ದಾರೆ ಮತ್ತು ಆತ್ಮೀಯರಿಗೆ ಧನ್ಯವಾದ ಹೇಳಿದ್ದಾರೆ. ತಮ್ಮ ಹೊಸ ಚಿತ್ರದ ಹೊಸ ಭೇಟಿಯ ಬಗ್ಗೆ ಬರೆಯುತ್ತಾ, “ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನು ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನು ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿವೆ. ಈ ಕಥೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನು ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ. ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1000ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನು ಮೆಚ್ಚಿ ಜೊತೆಗೆ ನಿಂತಿದ್ದಾರೆ” ಎಂದು ಖುಷಿ ಹಂಚಿಕೊಂಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ