• ರಾಘವೇಂದ್ರ ಅಡಿಗ ಎಚ್ಚೆನ್
  • ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಹಿಟ್ ಜೋಡಿ. ‘ಪ್ರಿತ್ಸೋದ್ ತಪ್ಪಾ’ ಹಾಗೂ ‘ಒಂದಾಗೋಣ ಬಾ’ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಇದೀಗ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ಅವರು ಬರೋಬ್ಬರಿ 18 ವರ್ಷಗಳ ಬಳಿಕ ಮುಖಾಮುಖಿಯಾಗಿದ್ದಾರೆ. ಈ ವೇಳೆ ತಮ್ಮ ಚಿತ್ರಗಳ ಶೂಟಿಂಗ್ ಸಮಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
  • ಅಂದಹಾಗೆ, ರವಿಚಂದ್ರನ್ ಹಾಗು ಶಿಲ್ಪಾ ಶೆಟ್ಟಿ ಒಟ್ಟಿಗೆ ವೇದಿಕೆ ಹಂಚಿಕೊಳ್ಳುವುದಕ್ಕೆ ಕಾರಣ ಆಗಿದ್ದು ಧ್ರುವ ಸರ್ಜಾ ಅಭಿನಯದ ನಿರ್ದೇಶಕ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ಟೀಸರ್ ಲಾಂಚ್ ಕಾರ್ಯಕ್ರಮ. ಈಗಾಗಲೇ ಮುಂಬೈ, ಹೈದರಾಬಾದ್, ಚೆನ್ನೈ ಹಾಗು ಕೊಚ್ಚಿಯಲ್ಲಿ ಚಿತ್ರದ ಟೀಸರ್ ಲಾಂಚ್ ಈವೆಂಟ್ ಮುಗಿಸಿಬಂದ ಕೆಡಿ ಚಿತ್ರತಂಡ ಬೆಂಗಳೂರಿನ ಮಾಲ್ವೊಂದರಲ್ಲಿ ಕನ್ನಡ ವರ್ಷನ್ ಟೀಸರ್ ಅನಾವರಣ ಮಾಡಿದೆ. ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ಬಾಲಿವುಡ್ ನಟ ಸಂಜಯ್ ದತ್, ನಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ನಾಣಯ್ಯ, ನಿರ್ಮಾಪಕ ವೆಂಕಟ್ ನಾರಾಯಣ್ ಸೇರಿದಂತೆ ಇಡೀ ಚಿತ್ರತಂಡ ಸೇರಿತ್ತು. ಈ ಮೂಲಕ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ತಾವು ಅಭಿನಯಿಸಿದ ಪ್ರಿತ್ಸೋದ್ ತಪ್ಪಾ ಚಿತ್ರದ ನೆನಪುಗಳನ್ನು ಹಂಚಿಕೊಂಡರು.

ravi 1

  • “ನಾವು ಸಿನಿಮಾ ಮಾಡಬೇಕಾದರೆ, ನಾವು ಒಳ್ಳೆಯ ಸ್ನೇಹಿತರು ಅಷ್ಟೇ. ನಾನು ಡೈರೆಕ್ಟರ್, ಹೀರೋ.. ಅವರು ಹೀರೋಯಿನ್ ಅಂತ ಇರಲಿಲ್ಲ. ನಮ್ಮಿಬ್ಬರಲ್ಲಿ ಆ ಫೀಲಿಂಗ್ ಇರಲಿಲ್ಲ. ಮೊದಲ ಮೂರು ದಿನ ಅವರು ಬಾಂಬೆ ಹೀರೋಯಿನ್ ಆಗಿದ್ದರು. ಆಮೇಲೆ ಕನ್ನಡವರು ಆದರು. ಮೊದಲ ದಿನ ಪ್ರೀತ್ಸೋದ್ ತಪ್ಪಾ ಸಿನಿಮಾದ ಬೈಕ್ ಸೀನ್ ತೆಗೆಯುತ್ತಿದ್ದೆ. ಅವರಿಗೆ ಗೊತ್ತಿರಲಿಲ್ಲ. ನಾನೇ ಫೈಟ್ ಸೀನ್ ತೆಗೆಯುತ್ತಿದ್ದೆ. ನಾನು ಎಲ್ಲಾ ಮಾಡುತ್ತಿದ್ದೆ. ಡೂಪ್ ಇಲ್ಲ ಏನೂ ಇಲ್ಲ. ಇವಳಿಗೆ ಕೂರಿಸಿಕೊಂಡು ಎಲ್ಲಾ ನಾನೇ ಶೂಟ್ ಮಾಡುತ್ತಿದ್ದೇನೆ. ಇವಳಿಗೆ ಡೂಪ್ ಇಲ್ವಾ? ಎಲ್ಲಾ ಇವನೇ ತೆಗೆಯುತ್ತಿದ್ದಾನಲ್ಲ ಅಂತ ಅನಿಸಿತ್ತು. ಮೂರು ದಿನ ಆದ್ಮೇಲೆ ಕೇಳಿದರು. ಈ ಸಿನಿಮಾದಲ್ಲಿ ಫೈಟ್ ಮಾಸ್ಟರ್ ಇಲ್ವಾ? ಡೂಪ್ ಇಲ್ವಾ? ನನಗೂ ಇಲ್ಲ. ನಿಮಗೂ ಇಲ್ವಾ? ಆಗ ಒಂದೇ ಮಾತು ಕೇಳಿದೆ. ನೀವು ಸೇಫ್ ಫೀಲ್ ಮಾಡುತ್ತಿದ್ದೀರಾ? ಅಂತ. ಅವರು ಯೆಸ್ ಅಂದರು. ಅಲ್ಲಿಂದ ಜರ್ನಿ ಶುರುವಾಯ್ತು.” ರವಿಚಂದ್ರನ್ ಹೇಳಿದ್ದಾರೆ.
  • ravi
  • ಶಿಲ್ಪಾ ಶೆಟ್ಟಿ ಮಾತನಾಡಿ, “ಪ್ರಿತ್ಸೋದ್ ತಪ್ಪಾ ಚಿತ್ರದಲ್ಲಿ, ಬೈಕ್ ಸೀನ್ ಶೂಟಿಂಗ್ ಮಾಡುವ ಸಮಯದಲ್ಲಿ ನನಗೆ ಸ್ವಲ್ಪ ಭಯ ಆಗಿತ್ತು. ಅದರಲ್ಲಿ ರಾಜ.. ರಾಜ.. ಎಂಬ ಹಾಡಿನಲ್ಲಿ ಕಾರುಗಳು ಎಲ್ಲಿಂದಲೂ ಬರೋ ಥರ ಶೂಟಿಂಗ್ ಮಾಡುತ್ತಿದ್ದರು. ಅರ್ಧ ಟವೆಲ್ ಸುತ್ತಿಕೊಂಡು ಮಾಡುವ ಸೀನ್ ಅಂತೂ ಹೇಗೆ ಶೂಟ್ ಮಾಡಿದ್ದು ಅಂತಾ ಕೇಳಬೇಡಿ” ಎಂದು ಕಾಮಿಡಿ ಮಾಡಿದರು. “ನಾನು ರವಿ ಸರ್ ಜೊತೆ ಕೆಲಸ ಮಾಡುವಾಗ ಅವರು ನನ್ನನ್ನು ಹೊಗಳಿಲ್ಲ. 18 ವರ್ಷಗಳಾದ್ಮೇಲೆ ಅವರು ಹೊಗಳುತ್ತಿದ್ದಾರೆ. ಅದೂ ಕೆಡಿ ಸ್ಟೇಜ್ ಮೇಲೆ. ನೀವು ಯಾವಾಗಲೂ ಇಂತಹ ಒಳ್ಳೆಯ ಮಾತುಗಳನ್ನು ಹೇಳಿಲ್ಲ.” ಎಂದು ರವಿಚಂದ್ರನ್ ಕಾಲೆಳೆದರು.
    ” ಪ್ರಡ್ಯೂಸರ್ ಪ್ರೀತ್ಸೋದ್ ತಪ್ಪಾ ಸಿನಿಮಾದ 100 ಡೇಸ್ ಪ್ರೋಗ್ರಾಂ ಕೂಡ ಮಾಡಿಲ್ಲ. ಮತ್ತೆ ಭೇಟಿ ಮಾಡುವುದಕ್ಕೆ ಆಗಲಿಲ್ಲ. ಮತ್ತೆ ಸಿಕ್ಕಿದ್ದೇ ಒಂದಾಗೋಣ ಬಾ ಸಿನಿಮಾದಲ್ಲಿ. ನಮಗೆ ಹೀಗೆ ಸ್ಟೇಜ್ ಮೇಲೆ ಬರುವುದಕ್ಕೆ ಅವಕಾಶವೇ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಸಿಕ್ಕಿದೆ.” ಎಂದು ರವಿಚಂದ್ರನ್ ಹೇಳಿದರು. “ರವಿ ಸರ್ ಒಬ್ಬರೇ ಎಲ್ಲಾ ಕೆಲಸಗಳನ್ನು ಮಾಡುವುದನ್ನು ನೋಡಿ ನನಗೆ ಥ್ರಿಲ್ ಆಗಿತ್ತು. ಆಗ ಗೊತ್ತಾಯಿತು ಹಿ ಈಸ್ ದಿ ಕ್ರೇಜಿಮ್ಯಾನ್.” ಎಂದು ಶಿಲ್ಪಾ ಹೇಳುತ್ತಾರೆ.
    ಕೊನೆಯಲ್ಲಿ ಪ್ರಿತ್ಸೋದ್ ತಪ್ಪಾ ಚಿತ್ರದ ಬಂಗಾರದಿಂದಾ.. ಹಾಡಿಗೆ ರವಿಚಂದ್ರನ್ ಹಾಗೂ ಶಿಲ್ಪಾ ಶೆಟ್ಟಿ ಒಟ್ಟಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.

ನಿರ್ದೇಶಕ ಪ್ರೇಮ್ ಮಾತನಾಡಿ, ”ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಕೆಡಿ ಸಿನಿಮಾವನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಚಿತ್ರದಲ್ಲಿ ಆ್ಯಕ್ಷನ್, ಸೆಂಟಿಮೆಂಟ್ ಹಾಗೂ ಲವ್ ಇದೆ. ಎಲ್ಲಾ ಪಾತ್ರಗಳು ಹೊಸ ರೀತಿ ಇವೆ” ಎಂದು ತಿಳಿಸಿದರು.
ಇದೇ ವೇಳೆ, ಕಳೆದ ಮೂರು ವರ್ಷಗಳಿಂದ ಕೆಡಿ ಚಿತ್ರದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾ ಮುಂದಿನ ದಿನಗಳಲ್ಲಿ ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ ಎಂದು ಹೇಳಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ