- ರಾಘವೇಂದ್ರ ಅಡಿಗ ಎಚ್ಚೆನ್.
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ತನ್ನ ಮೇಲೆ ಲೈಂಗಿಕ ಕಿರುಕುಳ, ಹಣಕ್ಕಾಗಿ ಬೆದರಿಕೆ ಮತ್ತು ಆತ್ಮಹತ್ಯೆಗೆ ಒತ್ತಾಯ ಮಾಡಿದ ಆರೋಪ ಮಾಡಿರುವ ನಟಿಯ ವಿರುದ್ಧ ಮಾತನಾಡಿದ್ದಾರೆ.
ನನ್ನ ಮತ್ತು ಆಕೆಯ ಸಂಬಂಧ ಎರಡು ವರ್ಷಗಳ ಹಿಂದೆಯೇ ಮುಗಿದಿದೆ. 2023ರಿಂದ ಯಾವುದೇ ಸಂಪರ್ಕವಿಲ್ಲ, ಯಾವುದೇ ತೊಂದರೆ ಕೊಟ್ಟಿಲ್ಲ. ಆದರೆ ಇದೀಗ ಆಕೆ ಸುಳ್ಳು ಕಂಪ್ಲೇಂಟ್ ಹಾಕಿ ನನ್ನ ಜೀವನವನ್ನೇ ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದು ಅರವಿಂದ್ ಆರೋಪ ಮಾಡಿದ್ದಾರೆ.

2017ರಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿ 2023ರ ಮಾರ್ಚ್‌ನಲ್ಲಿ ಟೂರ್ನಮೆಂಟ್ ಸಂದರ್ಭದಲ್ಲಿ ಹತ್ತಿರವಾದರು. ಲಿವಿಂಗ್ ರಿಲೆರ್ಶನ್‌ಶಿಪ್‌ನಲ್ಲಿದ್ದೆವು. ಕಬ್ಬನ್ ಪಾರ್ಕ್ ಬಳಿ ಮನೆ ರೆಂಟ್ ಮಾಡಿಕೊಟ್ಟಿದ್ದೆ, ನನ್ನ ಕಾರ್ ಬಳಸಿಕೊಳ್ಳುತ್ತಿದ್ದರು. ಆದರೆ 55 ವರ್ಷದ ವ್ಯಕ್ತಿಯೊಂದಿಗೆ ಆಕೆ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದದ್ದೆ. ಆಗಿನಿಂದ ಈ ಸಮಸ್ಯೆ ಶುರುವಾಗಿದೆ.

ಆಕೆಯ ಜೊತೆಗಿದ್ದ ವ್ಯಕ್ತಿಗೆ ಮದುವೆಯಾಗಿತ್ತು. ಈ ಬಗ್ಗೆ ಆತನ ಪತ್ನಿಗೂ ತಿಳಿದಿತ್ತು. ಅದನ್ನ ನಾನು ಪ್ರಶ್ನಿಸಿದಕ್ಕೆ ಮದುವೆಯಾದ ವ್ಯಕ್ತಿ, ಆತನ ಪತ್ನಿ ಇಬ್ಬರಿಗೂ ಗೊತ್ತಿರುವ ಸಂಬಂಧ. ನಾನು ಪ್ರಶ್ನಿಸಿದ್ದಕ್ಕೆ ಬ್ರೇಕಪ್ ಆಯ್ತು. ನಾನು ಕೊಟ್ಟ ಗಿಫ್ಟ್ ಯಾವುದನ್ನೂ ವಾಪಸ್ ಕೊಟ್ಟಿಲ್ಲ. ಆದರೆ ಆಕೆ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅರವಿಂದ್ ವೆಂಕಟೇಶ್ , ಆಕೆಗಾಗಿ ಒಟ್ಟು 3.5 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಇನ್ನೂ ಮೂವರು ವ್ಯಕ್ತಿಗಳಿಂದ ಸುಮಾರು 80 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಆ ಗುಂಪೇ ತನಗೆ ಹೇಳಿದೆ ಎಂದರು. ದುಡ್ಡು ಕೊಟ್ಟರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಬೆದರಿಕೆ ಆಕೆಯ ಮಾಮೂಲಿ ಅಸ್ತ್ರ ಎಂದು ಆರೋಪಿಸಿದರು.

100 ನಿದ್ರೆ ಮಾತ್ರೆ ತೆಗೆದುಕೊಂಡೆ ಎಂಬುದು ಸಂಪೂರ್ಣ ಸುಳ್ಳು. ಆಕೆಯ ತಂದೆ-ತಾಯಿಗೆ ಗೊತ್ತಾಗಬಾರದೆಂದು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದ್ದೆವು. ICUಯಲ್ಲೇ ಫೋನ್ ಬಳಸುತ್ತಿದ್ದರು. ಫೋನ್ ಕೊಡದಿದ್ದಕ್ಕೆ ಬಟ್ಟೆ ಹರಿದುಕೊಂಡ ಡ್ರಾಮಾ ಮಾಡಿದ್ದಾರೆ. ಹೀಗೆ ಆಕೆ ಹೇಳಿರುವುದೆಲ್ಲಾ ಸುಳ್ಳು ಎಂದು ವೆಂಕಟೇಶ್ ಆರೋಪಿಸಿದರು.
ಆಕೆ ಸಲ್ಲಿಸಿದ ಕಂಪ್ಲೇಂಟ್‌ನಲ್ಲಿ ಆಗಸ್ಟ್‌ನಲ್ಲಿ ಮನೆ ಓನರ್‌ನಿಂದ ಬಂದ ಪತ್ರವನ್ನೇ ಆಧಾರವಾಗಿಟ್ಟುಕೊಂಡು ತನ್ನ ಮೇಲೆ ಪೊಲೀಸ್ ಕೇಸ್ ಹಾಕಲಾಗಿದೆ ಎಂದು ವೆಂಕಟೇಶ್ ಹೇಳಿದರು. ಆಗ ನಾನು ದೇಶದಲ್ಲಿರಲಿಲ್ಲ. ನೋಟೀಸ್ ಬಂದಾಗ NOC ಕೊಟ್ಟು ಪಾಸ್‌ಪೋರ್ಟ್ ವಶಪಡಿಸಿಕೊಂಡರು. ಏರ್‌ಪೋರ್ಟ್‌ನಲ್ಲಿ ಸೀಜ್ ಮಾಡುವ ಅಗತ್ಯವಿತ್ತೇ ? ಎರಡು ವರ್ಷಗಳಿಂದ ಇನ್‌ಸ್ಟಾಗ್ರಾಂನಲ್ಲೂ ಬ್ಲಾಕ್ ಮಾಡಿದ್ದೇನೆ. ಲೈಂಗಿಕ ಕಿರುಕುಳ ಎಲ್ಲಿಂದ ಬಂತು ? ಎಂದು ಪ್ರಶ್ನಿಸಿದರು.ನನಗೂ ಅಕ್ಕ, ತಂಗಿ, ಕುಟುಂಬ ಇದೆ. ಇದನ್ನೆಲ್ಲ ಮಾಧ್ಯಮದ ಮುಂದೆ ಹೇಳಲು ಇಷ್ಟವಿರಲಿಲ್ಲ. ಆದರೆ ಆಕೆ ನನ್ನ ಜೀವನವನ್ನೇ ಹಾಳು ಮಾಡುತ್ತಿದ್ದಾರೆ. ಎಲ್ಲ ಡಾಕ್ಯುಮೆಂಟ್‌ಗಳೂ ನನ್ನ ಬಳಿ ಇವೆ. ಈಗ ಕಾನೂನು ದಾರಿ ಹಿಡಿಯುತ್ತೇನೆ ಎಂದು ವೆಂಕಟೇಶ್ ಹೇಳಿದ್ದಾರೆ





