ಎಂದೆಂದಿಗೂ….. ರಿಚ್‌

ಎಚ್‌.ವಿ. ಬಾಬು ಅವರ ನಿರ್ಮಾಣದ ಚಿತ್ರವೆಂದರೆ ಅಲ್ಲಿ ಶ್ರೀಮಂತಿಕೆ ಇರಲೇಬೇಕು. ಬಹಳ ಗ್ಯಾಪ್‌ ನಂತರ ಬಾಬು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ನೃತ್ಯ ಸಂಯೋಜಕ ಇಮ್ರಾನ್‌ ಸರ್ದಾರಿಯಾ ನಿರ್ದೇಶಿಸುತ್ತಿರುವ ಬಾಬು ಅವರ `ಎಂದೆಂದಿಗೂ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಸ್ವಿಡ್ಜರ್‌ ಲ್ಯಾಂಡ್‌ನಲ್ಲಿ ನಡೆದಿದೆ. ಚಿತ್ರದಲ್ಲಿ ಅಜೇಯ್‌ ರಾವ್ ‌ರಾಧಿಕಾ ಪಂಡಿತ್‌ ಜೋಡಿಯಿದೆ. ಇಮ್ರಾನ್‌ ಸರ್ದಾರಿಯಾ ಅವರ ಚೊಚ್ಚಲ ನಿರ್ದೇಶನದ ಚಿತ್ರ ಇದಾಗಲಿದ್ದು, ಬಾಬು ಅವರು ಅದ್ಧೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶೀರ್ಷಿಕೆ ಹೇಳುವಂತೆ ಇದೊಂದು ಲವ್ ಸ್ಟೋರಿಯಾಗಿದ್ದು, ಅಜೇಯ್‌ ರಾವ್ ‌ರಾಧಿಕಾ ಪಂಡಿತ್‌ ಜೋಡಿ ಈಗಾಗಲೇ ಹಿಟ್‌ ಎನಿಸಿದೆ. `ಎಂದೆಂದಿಗೂ’ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್‌ ಗಿಳಿದಿರುವ ಬಾಬು ಅವರ ಈ ಚಿತ್ರ ಯಶಸ್ಸು ಕಾಣಲಿ.

ರಚಿತಾ ರಂಗೀಲಾ

rachitha-rangila

ರಚಿತಾ ರಾಮ್ ಕನ್ನಡದಲ್ಲಿ ಭರವಸೆ ಮೂಡಿಸುತ್ತಿರುವ ನಾಯಕಿ. ಮೊದಲ ಚಿತ್ರ `ಬುಲ್‌ ಬುಲ್‌’ ಚಿತ್ರದಲ್ಲೇ ಸಾಕಷ್ಟು ಮಿಂಚಿದ ರಚಿತಾ ಈಗ ಗಣೇಶನ ಜೊತೆ `ದಿಲ್ ರಂಗೀಲಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾಳೆ. `ಅಂಬರೀಷ’ ಚಿತ್ರದಲ್ಲೂ ರಚಿತಾ ದರ್ಶನ್‌ ಜೋಡಿಯಾಗಿ ನಟಿಸುತ್ತಿದ್ದಾಳೆ. ದೊಡ್ಡ ದೊಡ್ಡ ಹೀರೋಗಳ ಜೊತೆ ದೊಡ್ಡ ಬ್ಯಾನರಿನಡಿ ನಟಿಸುತ್ತಿರುವ ರಚಿತಾ ಲಕ್ಕಿ ಗರ್ಲ್ ಎಂದು ಸಾಬೀತಾಗಿಬಿಟ್ಟಿದ್ದಾಳೆ. `ದಿಲ್ ‌ರಂಗೀಲಾ’ ಚಿತ್ರದಲ್ಲಿ ಗೋವಾ ಮೂಲದ ಹುಡುಗಿಯ ಪಾತ್ರದಲ್ಲಿ ಕಾಣಿಸಲಿದ್ದಾಳೆ. `ಸಖತ್‌ ಮಾಡಲ್ ಹುಡುಗಿ ಪಾತ್ರ’ ಅಂತಾಳೆ ರಚಿತಾ. ಕನ್ನಡ ಚಿತ್ರರಂಗಕ್ಕೆ `ಮಾತಾಡಕ್ಕಿಲ್ವಾ ಬುಲ್‌‌ಬುಲ್‌…’ ಅಂತ ದರ್ಶನ್ ರಿಂದ ಹಾಡಿಸಿಕೊಂಡು ಬಂದಂಥ ರಚಿತಾ ಕನ್ನಡತಿಯಾಗಿ ಎಲ್ಲ ಪರಭಾಷಾ ನಟಿಯನ್ನು ಓವರ್‌ ಟೇಕ್‌ ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಗ್ಲಾಮರಸ್‌ ಜೊತೆಗೆ ಪ್ರತಿಭಾವಂತಳೂ ಆಗಿರುವ ರಚಿತಾ ಸದ್ಯದ ಸ್ಯಾಂಡಲ್ ವುಡ್‌ನ ಲಕ್ಕಿ ಸ್ಟಾರ್‌.

ಮಸ್ತ್ ಮೊಹಬ್ಬತ್

masth-mehaboob

ಮಾನಸ ಮೂವೀಸ್‌ ಲಾಂಛನದಲ್ಲಿ ವಿ. ಶೇಖರ್‌ ಅವರು ನಿರ್ಮಿಸುತ್ತಿರುವ `ಮಸ್ತ್ ಮೊಹಬ್ಬತ್‌’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮೈಸೂರು ಹಾಗೂ ಊಟಿಯಲ್ಲಿ ಹದಿನೆಂಟು ದಿನಗಳ ಚಿತ್ರೀಕರಣ ನಡೆದಿದೆ. ನೆನಪಿರಲಿ ಪ್ರೇಮ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ತಾರಾ ಬಳಗದಲ್ಲಿ ಪೂನಂ, ನವೀನ್‌ ಕೃಷ್ಣ, ರಾಜು ತಾಳಿಕೋಟೆ, ಸಾಧು ಕೋಕಿಲ ಮುಂತಾದವರಿದ್ದಾರೆ. ಮೋಹನ್‌ ಮಾಳಗಿ ನಿರ್ದೇಶನದ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡುತ್ತಿದ್ದಾರೆ. `ಮಸ್ತ್ ಮೊಹಬ್ಬತ್‌,’ ಶೀರ್ಷಿಕೆಯಲ್ಲಿ ಪರಭಾಷೆಯ ಛಾಯೆ ಕಂಡವರೂ ಚಿತ್ರ ತಂಡದಲ್ಲಿರುವವರೆಲ್ಲರೂ ಕನ್ನಡದವರೇ ಎನ್ನುವುದು ಸಮಾಧಾನ. ಪ್ರೇಮ್ ಲವ್ಲಿ ಸ್ಟಾರ್‌ ಆಗಿ ರೊಮ್ಯಾಂಟಿಕ್‌ ಇಮೇಜು ಪಡೆದಿರುವಂಥ ನಾಯಕ, ಆತನಿಗೆ ಟೈಟಲ್ ಹೇಳಿ ಮಾಡಿಸಿದಂತಿದೆ.

ಬೋಲ್ಡ್ ಅಭಿನೇತ್ರಿ

duniya-vijaya

ಪೂಜಾಗಾಂಧಿ ನಟಿಸಿ ನಿರ್ಮಿಸುತ್ತಿರುವ `ಅಭಿನೇತ್ರಿ’ ಚಿತ್ರದ ಸ್ಟಿಲ್ಸ್ ಹೊರಬಿದ್ದಾಗ ಕಲ್ಪನಾ ಅವರ ಬದುಕಿನ ಚಿತ್ರವಿರಬಹುದೆಂದು ಎಲ್ಲರೂ ಅಂದುಕೊಂಡರು. ಪೂಜಾ ಮಾತ್ರ ಗುಟ್ಟು ಬಿಟ್ಟುಕೊಡದೇ ತನ್ನ ಪಾಡಿಗೆ ತಾನು ಚಿತ್ರೀಕರಣ ಮಾಡಿಕೊಂಡು ಹೋಗುತ್ತಿದ್ದಾಳೆ. ಇತ್ತೀಚೆಗೆ ಅತುಲ್ ಕುಲಕರ್ಣಿ ಹಾಗೂ ಪೂಜಾಗಾಂಧಿ `ಅಭಿನೇತ್ರಿ’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಾಗ ಹಾಟ್‌ ಸೀನ್ಸ್ ಶೂಟ್‌ ಮಾಡಲಾಯ್ತು. ಸಖತ್‌ ಬೋಲ್ಡ್ ಆಗಿ ಇವರಿಬ್ಬರೂ ಪೋಸ್‌ ಕೊಟ್ಟಿರುವ ಸ್ಟಿಲ್ಸ್ ‌ಪ್ರಚಾರಕ್ಕೆ ಬಂದಿವೆ. `ದಂಡುಪಾಳ್ಯ’ ಚಿತ್ರದಲ್ಲೂ ಪೂಜಾಳ ಬೆನ್ನು ಶೋ ಆಗಿತ್ತು. ಈಗ ತನ್ನದೇ ನಿರ್ಮಾಣದ ಚಿತ್ರದಲ್ಲೂ ಅಷ್ಟೇ ಬೋಲ್ಡ್ ಆಗಿ ನಟಿಸುತ್ತಿರುವ ಪೂಜಾ ಗಿಮಿಕ್‌ ಈ ಬಾರಿಯೂ ಕ್ಲಿಕ್‌ ಆಗಬಹುದೇ?

ಹುಚ್ಚ ವೆಂಕಟ್

more-people

ಯುವ ನಾಯಕ ನಿರ್ದೇಶಕ ವೆಂಕಟ್‌ರವರು ತಮ್ಮ `ಹುಚ್ಚ ವೆಂಕಟ್‌’ ಸಿನಿಮಾದಲ್ಲಿ ಹೊಸದನ್ನು ಮೂಡಿಸುವ ಕನಸಿನ ಜೊತೆಗೆ , ಹೊಸ ವರ್ಷದಿಂದ ಹೊಸ ರೀತಿಯಲ್ಲಿ ಗಮನ ಸೆಳೆದಿದ್ದಾರೆ. ಅದೇನೆಂದರೆ ಸಿನಿಮಾರಂಗದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯರಿಗೆ ಆರ್ಥಿಕ ನೆರವು ನೀಡಿ ಸನ್ಮಾನಿಸುವಂಥ ಉತ್ತಮ ಕೆಲಸವನ್ನು ಈ ಚಿತ್ರದ ನಿರ್ಮಾಪಕರು ಮಾಡಿದ್ದು ವಿಶೇಷ. ಕಾಂತಪ್ರೀತ, ಆರ್‌. ರತ್ನಂ, ಶನಿಮಹದೇವಪ್ಪ, ಶಿವಮೂರ್ತಿ ಅವರಿಗೆ ವೆಂಕಟ್‌ ಹಾಗೂ ಅವರ ತಂದೆ ಲಕ್ಷ್ಮಣ್‌ ಅವರು ತಾವು ಇಪ್ಪತ್ತು ಸಾವಿರ ರೂಪಾಯಿ ನಗದು ಕಾಣಿಕೆ ನೀಡಿ ಸನ್ಮಾನಿಸಿದರು. ವೆಂಕಟ್‌ ಅವರು ನಾಯಕರಾಗಿ ನಟಿಸಿ ನಿರ್ದೇಶಿಸುತ್ತಿರುವ `ಹುಚ್ಚ ವೆಂಕಟ್‌’ ಚಿತ್ರ ಪೂರ್ಣಗೊಂಡಿದ್ದು, ಬಾಕಿ ಉಳಿದಿರುವ ಮೂರು ಹಾಡುಗಳ ಚಿತ್ರೀಕರಣ ಸದ್ಯದಲ್ಲೇ ಪೂರ್ಣಗೊಳ್ಳಲಿದೆ

ಕೋಬ್ರಾ ಅವತಾರ

shivarajkumarin630

ದುನಿಯಾ ವಿಜಯ್‌ ಅಭಿನಯದ ಹೊಸ ಚಿತ್ರಕ್ಕೆ `ಕೋಬ್ರಾ’ ಎಂದು ಹೆಸರಿಡಲಾಗಿದೆ. ಕಳೆದ ವರ್ಷ `ಜಯಮ್ಮನ ಮಗ’ ಚಿತ್ರದ ಮೂಲಕ ಗೆಲುವು ಕಂಡ ವಿಜಯ್‌ `ಶಿವಾಜಿನಗರ’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ ಮಾಡಿದ್ದಾರೆ. ಈ ಚಿತ್ರ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಈಗ `ಕೋಬ್ರಾ’ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದೆ. ವಿಜಯ್‌ ಹಾಗೂ ರವಿ ಕಾಳೆ ಈ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ವಿಜಯ್‌ಗೆ ನಾಯಕಿಯಾಗಿ ಸೋನು ಛೋಪ್ರಾ ನಟಿಸುತ್ತಿದ್ದಾಳೆ.  ಎಚ್‌. ವಾಸು ನಿರ್ದೇಶನದಲ್ಲಿ `ಕೋಬ್ರಾ’ ಮೂಡಿಬರುತ್ತಿದ್ದು, ಈಗಾಗಲೇ ದುನಿಯಾ ವಿಜಯ್‌ರನ್ನು ಬ್ಲ್ಯಾಕ್‌ ಕೋಬ್ರಾ ಎಂದು ಗಾಂಧಿನಗರ ಕರೆಯೋದ್ರಿಂದ ಈ ಟೈಟಲ್ ಕೂಡಾ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಬಹುದು. `ಕೋಬ್ರಾ’ ಪಕ್ಕಾ ಕಮರ್ಷಿಯಲ್ ಸಿನಿಮಾ. ಜೀವನಕ್ಕಾಗಿ ಹೋರಾಡುವ ಸಾಮಾನ್ಯ ಹುಡುಗನ ಕಥೆ ಈ ಚಿತ್ರದಲ್ಲಿದೆ.

ಡೈನಾಮಿಕ್‌ ಪ್ರಾಜೆಕ್ಟ್

li614271sas

ಒಂದು ಸಿನಿಮಾ ನಿರ್ಮಿಸಬೇಕು, ಒಳ್ಳೆ ಸಿನಿಮಾ ಆಗಿ ಹೊರಬರಬೇಕು ಎನ್ನುವ ಆಸೆ ಬಹಳ ದಿನಗಳಿಂದ ಇತ್ತು. ಆದರೆ ಒಳ್ಳೆ ಕಥೆ ಸಿಕ್ಕಿರಲಿಲ್ಲ. ಆದರೆ ಕಥೆ ಕೇಳೋದನ್ನು ಮಾತ್ರ ಬಿಡೋದಿಲ್ಲ. ಹೀಗೊಂದು ದಿನ ಒಂದೇ ಸವಾಲಿನ ಕಥೆ ಕೇಳಿದ ಕೂಡಲೇ ಈ ಚಿತ್ರವನ್ನು ನಾನೇ ಮಾಡಬೇಕೆನಿಸಿತು. ಹಾಗಾಗಿ ನಮ್ಮ ಬ್ಯಾನರಿನ ಮೊದಲ ಚಿತ್ರ ಹುಟ್ಟಿಕೊಂಡಿತು ಎಂದು ಉತ್ಸಾಹದಿಂದ ದೇವರಾಜ್‌ ಹೇಳುತ್ತಾರೆ. `ನೀನಾದೆ ನಾ’ ಪ್ರಜ್ವಲ್ ದೇವರಾಜ್‌ ಅಭಿನಯದ ಚಿತ್ರವನ್ನು `ಡೈನಾಮಿಕ್‌ ವಿಷನ್ಸ್’ ಎಂಬ ನಿರ್ಮಾಣ ಸಂಸ್ಥೆಯಡಿ ದೇವರಾಜ್‌ ದಂಪತಿ ಶುರು ಮಾಡಿದ್ದಾರೆ. ನೃತ್ಯ ನಿರ್ದೇಶಕ ಕಾದಲ್ ಕರಿದಾಸ್‌ ಕಥೆ ಬರೆದು ಚಿತ್ರ ನಿರ್ದೇಶಿಸುತ್ತಿದ್ದಾರೆ. ಇವರು ಮೂಲತಃ ತಮಿಳು ಚಿತ್ರರಂಗದಿಂದ ಬಂದರು. ಚಿತ್ರಕ್ಕೆ ಇಬ್ಬರು ನಾಯಕಿಯರು ಅಂಕಿತಾ ಮಹೇಶ್ವರಿ, ಪ್ರಿಯಾಂಕಾ ಕಂದಾಲ್‌. ಇವರಿಬ್ಬರೂ ಮುಂಬೈನವರು. ರಮ್ಯಾ ಶಿವಣ್ಣ `ಆರ್ಯನ್‌’ ಶಿವರಾಜ್‌ ಕುಮಾರ್‌ರಲ್ಲಿ ಹೊಸ ಹೊಸ ಉತ್ಸಾಹ ಸದಾ ಉಕ್ಕಿ ಬರುತ್ತಲೇ ಇರುತ್ತದೆ. ಯಾವುದಾದರೊಂದು ಹೊಸ ಕಾನ್ಸೆಪ್ಟ್ ನ್ನು ಹೊತ್ತುತರುವ ಹೊಸ ನಿರ್ದೇಶಕರನ್ನು ಅವರು ಯಾವತ್ತೂ ನಿರಾಸೆ ಮಾಡಿ ಕಳುಹಿಸುವುದಿಲ್ಲ. ಕಥೆ ಅವರಿಗಿಷ್ಟವಾಗಿಬಿಟ್ಟರೆ ಸಾಕು, ಡೇಟ್ಸ್ ನೀಡುತ್ತಾರೆ. ಹಾಗೆಯೇ ಅನುಭವೀ ನಿರ್ದೇಶಕರಿಗೂ ಅಷ್ಟೆ. ದಿವಂಗತ ಡಿ. ರಾಜೇಂದ್ರಬಾಬು `ಆರ್ಯನ್‌’ ಚಿತ್ರ ಶುರು ಮಾಡಿದಾಗ, ಆ ಚಿತ್ರದಲ್ಲಿ ನಾಯಕನದು ಕೋಚ್‌ ಪಾತ್ರ. ಶಿವಣ್ಣ ಅವರಿಗೆ ತುಂಬಾ ಹಿಡಿಸಿತು. ಅದೂ ಅಲ್ಲದೇ, ಬಾಬು ಅವರ ಮೆಚ್ಚಿನ ನಿರ್ದೇಶಕರಾಗಿದ್ದರು. ಜೋಡಿಯಾಗಿ ಮೊದಲ ಬಾರಿಗೆ ಶಿವಣ್ಣ ರಮ್ಯಾ ಅವರ ಜೊತೆ ನಟಿಸುತ್ತಿರುವುದು ವಿಶೇಷವಾಗಿತ್ತು. ಆದರೆ ವಿಧಿಯಾಟ ಬಾಬು ಅಚಾನಕ್‌ ತೀರಿಕೊಂಡರು. ರಮ್ಯಾ ಸಂಸದೆಯಾಗಿ ತನ್ನ ಕ್ಷೇತ್ರ ಸೇರಿಕೊಂಡಳು. `ಆರ್ಯನ್‌’ ಮುಂದೇನು ಎನ್ನುವಾಗ ಚಿ. ಗುರುದತ್‌ ನಿರ್ದೇಶಕರ ಸ್ಥಾನಕ್ಕೆ ಬಂದರು. ರಮ್ಯಾ ತನ್ನ ಡೇಟ್ಸ್ ಕೊಟ್ಟಳು. ಚಿತ್ರ ತಂಡ ಸಿಂಗಾಪೂರ್‌ಗೆ ಹೋಗಿ ಚಿತ್ರೀಕರಣ ಮುಗಿಸಿ ಬಂದಿತು. ಶಿವಣ್ಣ ರಮ್ಯಾ ಜೋಡಿ ತೆರೆ ಮೇಲೆ ಹೇಗೆ ಕಾಣಬಹುದೆಂಬ ಕುತೂಹಲ ಎಲ್ಲರಿಗೂ ಇದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ