ಅನುಶ್ರೀ ಕಿರುತೆರೆಯ ಸ್ಟಾರ್‌ ಆಗಿ ಮೆರೆದಂಥ ಪ್ರತಿಭೆ. ಈಗ ಸ್ಯಾಂಡಲ್ ವುಡ್‌ನಲ್ಲಿ ಸುದ್ದಿ ಮಾಡುತ್ತಿದ್ದಾಳೆ. ಬಿಗ್‌ ಬಾಸ್‌ರಿಯಾಲಿಟಿ ಶೋನಿಂದ ಪಟಪಟ ಮಾತನಾಡುವ ಮಾತಿನಮಲ್ಲಿ ಅನಿಸಿಕೊಂಡ ಅನುಶ್ರೀ, ಇತ್ತೀಚೆಗೆ  `ಬೆಂಕಿಪಟ್ಣ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ.

``ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಮೇಲೆ ಸಾಕಷ್ಟು ಅವಕಾಶಗಳು ಬಂದವು. ಬಂದದ್ದೆಲ್ಲವನ್ನು ತಗೊಳೊದಿಕ್ಕಾಗೋಲ್ಲ ಅಲ್ವಾ... `ಬೆಂಕಿಪಟ್ಣ' ಕಥೆ ತುಂಬಾ ಇಷ್ಟವಾಯ್ತು. ಏನೋ ವಿಶೇಷತೆ ಇದೆ ಅಂತ ಮನಸ್ಸಿಗೆ ಹಿಡಿಸಿತು. ನನ್ನ ಚಿತ್ರದಲ್ಲಿ ಬರೊ ಎಮೋಷನ್ಸ್, ಪ್ರೀತಿ ಎಲ್ಲವೂ ಫುಲ್ ಎನರ್ಜಿಟಿಕ್‌, ಕಮರ್ಷಿಯಲ್ ಆಗಿ ಎಲ್ಲರ ಗಮನ ಸೆಳೆಯಲು ಕರೆಕ್ಟ್ ಆದ ಆಫರ್ ಅನಿಸಿತು,'' ಎಂದು ಹೇಳುವ ಅನುಶ್ರೀ, ಪಾತ್ರ ಅವಳಂತೆ ಲವಲವಿಕೆಯಿಂದ ಕೂಡಿದೆ ಎನ್ನುತ್ತಾಳೆ. ಕಲ್ಪನಾ, ವಿದ್ಯಾಬಾಲನ್‌ಅವರನ್ನೇ ಪ್ರೇರಣೆಯಾಗಿಟ್ಟುಕೊಂಡಿರುವ ಅನುಶ್ರೀ, ``ನನಗೆ ಇವರಿಬ್ಬರನ್ನು ಕಂಡರೆ ತುಂಬಾ ಇಷ್ಟ. ಮಾಡಿದ್ರೆ ಇಂಥ ಪಾತ್ರ ಮಾಡಬೇಕು. ಅವರು ಮಾಡಿರುವ ಎಲ್ಲ ಪಾತ್ರಗಳು ನನಗಿಷ್ಟ. ಕಲ್ಪನಾ ಅವರ ಎಲ್ಲ ಚಿತ್ರಗಳನ್ನು ನಾನು ಅದೆಷ್ಟು ಬಾರಿ ನೋಡಿದ್ದೇನೋ ಗೊತ್ತಿಲ್ಲ.

``ನಾನು `ಶರಪಂಜರ' ಚಿತ್ರವನ್ನಂತೂ ಲೆಕ್ಕವಿಲ್ಲದಷ್ಟು ಸಲ ನೋಡಿದ್ದೇನೆ,'' ಎಂದು ಹೇಳುವ ಅನುಶ್ರೀಗೆ ಜನಪ್ರಿಯತೆ ಬಿಗ್ ಬಾಸ್‌ನಿಂದ ದೊರಕಿತೇ ಎಂದು ಕೇಳಿದಾಗ, ``ಹಾಗೇನಿಲ್ಲ, ಈ ಶೋಗೆ ಹೋಗುವುದಕ್ಕೆ ಮೊದಲೇ ನಾನು ಫೇಮಸ್‌ ಆಗಿದ್ದೆ. ನಿರೂಪಕಿಯಾಗಿ, ನಟಿಯಾಗಿ, ನೃತ್ಯಗಾರ್ತಿಯಾಗಿ ಜನಪ್ರಿಯತೆ ಗಳಿಸಿದ್ದೆ. ಆದರೆ ಬಿಗ್‌ ಬಾಸ್‌ ಕಾರ್ಯಕ್ರಮ ಅನುಶ್ರೀ ಏನು? ಅವಳ ಕ್ಯಾರೆಕ್ಟರ್‌ ಹೇಗೆ? ಕಷ್ಟದಿಂದ ಬಂದಂಥ ಹುಡುಗಿ ಅಂತ ತೋರಿಸಿಕೊಟ್ಟಿತು.

Anushree7524

``ನಾನು ಎಲ್ಲರಿಗೂ ಅಚ್ಚುಮೆಚ್ಚಿನ ಹುಡುಗಿಯಾಗುತ್ತಾ ಹೋದೆ. ಅರುಣ್‌ ಸಾಗರ್‌ಗೆ ತಂಗಿಯಾದೆ. ಒಂದು ರೀತಿ ಎಲ್ಲ ಒಳ್ಳೆಯದೇ ಆಗುತ್ತಿದೆ. `ಮುರಳಿ ಮೀಟ್ಸ್ ಮೀರಾ' ಚಿತ್ರದಲ್ಲಿನ ನಾಯಕಿ ಪಾತ್ರಕ್ಕೆ ಕಂಠದಾನ ಕಲಾವಿದೆ ಅಂತ ರಾಜ್ಯ ಪ್ರಶಸ್ತಿ ಸಿಕ್ಕಿತು. ನನ್ನ ಎಲ್ಲ ಪ್ರಯತ್ನಕ್ಕೂ ಪ್ರತಿಫಲ ಸಿಗುತ್ತಿದೆ.

``ಈಗ `ಬೆಂಕಿಪಟ್ಣ' ಚಿತ್ರದಲ್ಲಿ ನನ್ನ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ನಾನು ಮೂಲತಃ ಮಂಗಳೂರಿನವಳು. ನಟಿಯಾಗಿ ಹೆಸರು ಮಾಡಬೇಕಿದೆ. ಪುನೀತ್‌ ರಾಜ್‌ಕುಮಾರ್‌ ನನ್ನ ಫೇವರಿಟ್‌ ಹೀರೊ,'' ಎನ್ನುವ ಅನುಶ್ರೀ, ``ನಾನು ಪುನೀತ್‌ ರಾಜ್‌ಕುಮಾರ್‌ರನ್ನು ತುಂಬಾ ಇಷ್ಟಪಡುತ್ತೇನೆ. ಅವರೊಂದಿಗೆ ನಟಿಸುವಾಸೆ, ನಾಯಕಿ ಪಾತ್ರ ಸಿಕ್ಕರೆ ಸಂತೋಷ, ತಂಗಿ ಪಾತ್ರ ಸಿಕ್ಕಿದರೂ ಚಿಂತೆಯಿಲ್ಲ. ಒಟ್ಟಿನಲ್ಲಿ ಅವರ ಪಕ್ಕದಲ್ಲಿ ನಿಂತುಕೊಳ್ಳಬೇಕು. ಯಾರಿಗೆ ಗೊತ್ತು ಅಪ್ಪು ಸಾರ್‌ ಅವರ ತಂಗಿಯಾಗಿ ನಟಿಸಿದ ನಂತರ ನಾಯಕಿ ಛಾನ್ಸ್ ಸಿಗಬಹುದೇನೋ....?'' ಎಂದು ಆಸೆಪಡುತ್ತಾಳೆ.

``ನನಗೆ ಸಿನಿಮಾ ನೋಡುವುದು ಮೊದಲಿನಿಂದ ಬೆಳೆದು ಬಂದಂಥ ಒಂದು ಕ್ರೇಜ್‌. ಬಿಡುವು ಸಿಕ್ಕಾಗೆಲ್ಲ ನಾನು ಮಾಡೋ ಕೆಲಸ ಅಂದ್ರೆ ಹಳೆಯ ಚಿತ್ರಗಳನ್ನು ನೋಡೋದು. ನನ್ನ ಫ್ರೆಂಡ್ಸ್ ಯಾವಾಗಲೂ ರೇಗಿಸ್ತಿರ್ತಾರೆ. `ಏನೇ, ಯಾವಾಗ್ಲೂ ಹಳೇ ಪಿಕ್ಚರ್‌ ನೋಡ್ತಿರ್ತಿಯಾ....' ಅಂತ.

``ಆದ್ರೆ ನಾನು ಹೇಳೋದು, ನಾವು ಹಳೆಯ ಚಿತ್ರಗಳನ್ನು ನೋಡಿ ಸಾಕಷ್ಟು ಕಲಿತುಕೊಳ್ಳಬಹುದು. ಅವರ ಅಭಿನಯ ನೋಡಿಕೊಂಡೇ ನಾವು ಇಷ್ಟು ಮುಂದೆ ಬಂದಿರೋದು ಅಂತ. ಹಾಗಾಗಿ ನನಗೆ ಅವರುಗಳೇ ಗುರುಗಳು,'' ಎನ್ನುತ್ತಾಳೆ ಅನುಶ್ರೀ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ