- ರಾಘವೇಂದ್ರ ಅಡಿಗ ಎಚ್ಚೆನ್.

ಕಳೆದ ವಾರ ಕನ್ನಡ ಚಿತ್ರರಂಗದಲ್ಲಿ ಉದ್ಭವಿಸಿದ ಘಟಾನುಘಟಿ ಬಗ್ಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಇಂದು ಕರ್ನಾಟಕ ಫಿಲಂ ಚೇಂಬರ್ ನಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲಾ ಸಮ್ಮುಖದಲ್ಲಿ ನಟರು ಮತ್ತು ನಿರ್ದೇಶಕರಿಗೆ ಕ್ಷಮೆಯಾಚನೆ ಸಲ್ಲಿಸಿದ್ದು, ಸದ್ಯ ಪತ್ರಕರ್ತರ ಮುಂದೆ ಅವರು ತಮ್ಮ ಮಾತನ್ನು ವಾಪಸ್ ತೆಗೆದುಕೊಂಡು ಸ್ಪಷ್ಟನೆ ನೀಡಿದ್ದಾರೆ.
ಕನಕಪುರ ಶ್ರೀನಿವಾಸ್ ಪ್ರಕಾರ, “ನಾನು ಎಮೋಷನಲ್‌ ಆಗಿ ಕೆಲವು ಮಾತುಗಳನ್ನು ಹೇಳಿದ್ದೇನೆ. ‘ಕಾಟನ್ ಪೇಟೆ ಗೇಟ್’ ಸಿನಿಮಾ ರಿಲೀಸ್ ಆಗಬೇಕಿತ್ತು, ಒತ್ತಡದ ಕಾರಣ ಹೇಳಿದ್ದೇನೆ. ದುಡ್ಡಿನ ಅವಶ್ಯಕತೆ ಇಲ್ಲ, ದುಃಖದಲ್ಲಿ ಮಾತಾಡಿದ್ದೆನು. ಪುನೀತ್ ಸರ್ ದೇವರು… ಏಳು ಕೋಟಿ ಕನ್ನಡಿಗರಿಗೆ ಕ್ಷಮೆ ಕೇಳುತ್ತೇನೆ. ನನ್ನ ಮಾತನ್ನ ವಾಪಸ್ ತೆಗೆದುಕೊಳ್ಳುತ್ತೇನೆ.”
ಅವರು ಜೊತೆಗೆ ನಟಿ–ನಟರು, ನಿರ್ದೇಶಕರು ಚಿತ್ರರಂಗದ ಸಹಕಾರಕ್ಕಾಗಿ ಧನ್ಯವಾದ ಸಲ್ಲಿಸಿದ್ದರು. “ನಟ ಶಿವಣ್ಣ ಸಹಾಯ ಮಾಡಿದ್ದಾರೆ, ಗೀತಕ್ಕೆ ಶಿವಣ್ಣರಿಂದ ತುಂಬಾ ಉಪಕಾರವಾಗಿದೆ. ದರ್ಶನ್ ನಮ್ಮ ಮಾಸ್ ಹೀರೋ, ಅವರೊಂದಿಗೆ ಮುಂದಿನ ಚಿತ್ರ ಮಾಡುತ್ತೇನೆ. ಕಲಾವಿದರು ಇಲ್ಲದೇ ಸಿನಿಮಾ ಮಾಡಲಾಗದು. ಪ್ರೇಮ್, ಎ ಪಿ ಅರ್ಜುನ್ ಅವರೊಂದಿಗೆ ಸಿನಿಮಾ ಮಾಡಲು ಒಪ್ಪಿದ್ದಾರೆ. ನಿಮ್ಮ ದುಡ್ಡು ಬೇಡ, ಸಿನಿಮಾ ಮಾಡಿಕೊಡಿ ಸಾಕು” ಎಂದು ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ