ನಟ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾರ ಮಗಳು ಸೋನಾಕ್ಷಿಗೆ ಫೋಟೋಗ್ರಫಿಯ ಹವ್ಯಾಸ ಇದೆ.
`ದಬಂಗ್' ಚಿತ್ರದಿಂದ ಚರ್ಚೆಯಲ್ಲಿರುವ ನಟಿ ಸೋನಾಕ್ಷಿ ಸಿನ್ಹಾ ಮಾಡೆಲಿಂಗ್‌ನಿಂದ ತಮ್ಮ ಕೆರಿಯರ್ ಶುರು ಮಾಡಿದರು. ಅವರು ನಟನೆಯ ಜೊತೆಗೆ ಫ್ಯಾಷನ್ ಡಿಸೈನಿಂಗ್ ಮಾಡುತ್ತಾರೆ. ಅವರು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಕೂಡ ಮಾಡಿದ್ದಾರೆ. ನಟ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿನ್ಹಾರ ಮಗಳು ಸೋನಾಕ್ಷಿಗೆ ಫೋಟೋಗ್ರಫಿಯ ಹವ್ಯಾಸ ಇದೆ.
`ದಬಂಗ್' ಅಲ್ಲದೆ `ರೌಡಿ ರಾಥೋಡ್,' `ಜೋಕರ್', `ಸನ್ ಆಫ್ ಸರ್ದಾರ್,' `ದಬಂಗ್ ಟೂ,' `ಲುಟೇರಾ' ಇತ್ಯಾದಿ ಸೋನಾಕ್ಷಿಯ ಯಶಸ್ವಿ ಚಿತ್ರಗಳಾಗಿವೆ. ಕೆಲವು ಸಮಯದ ಹಿಂದೆ ಅವರೊಂದಿಗೆ ನಡೆಸಿದ ಮಾತುಕಥೆಯ ಪ್ರಮುಖ ಅಂಶಗಳು ಹೀಗಿವೆ.
ಚಿತ್ರದ ಯಶಸ್ಸನ್ನು ಹೇಗೆ ಸ್ವೀಕರಿಸುತ್ತೀರಿ?
ಚಿತ್ರದ ಯಶಸ್ಸು ಯಾವಾಗಲೂ ಟೀಂ ವರ್ಕ್‌ನಿಂದ ಆಗುತ್ತದೆ. ಚಿತ್ರ ಯಶಸ್ವಿಯಾಗಲು ಎಲ್ಲರ ಸಹಕಾರ ಅಗತ್ಯ. ಚಿತ್ರ ಯಶಸ್ವಿಯಾದರೆ ಅದರ ಶ್ರೇಯಸ್ಸನ್ನು ಕಲಾವಿದರಿಗೆ ಕೊಡಲಾಗುತ್ತದೆ. ಆದರೆ ನಾನು ಅದರ ಶ್ರೇಯಸ್ಸನ್ನು ಪರಿಶ್ರಮಕ್ಕೆ ಕೊಡುತ್ತೇನೆ. ಅವರು ನಿರ್ದೇಶಕರಾಗಲೀ, ಕಥೆಗಾರರಾಗಲೀ, ಟೆಕ್ನೀಶಿಯನ್ ಟೀಂ ಅಥವಾ ಬೇರೆ ಯಾರೇ ಆಗಿರಬಹುದು.
ಚಿತ್ರದಲ್ಲಿ ದೊಡ್ಡ ನಟರೊಂದಿಗೆ ಕೆಲಸ ಮಾಡುವುದು ಕಷ್ಟವಾಗಿತ್ತೆ?
ಏನೂ ತೊಂದರೆಯಾಗಲಿಲ್ಲ, ನಾನು ಆರಂಭದಿಂದಲೇ ದೊಡ್ಡ ಕಲಾವಿದರೊಂದಿಗೆ ಕೆಲಸ ಮಾಡಿದ್ದೇನೆ. ಸಲ್ಮಾನ್, ಅಕ್ಷಯ್ ಸೈಫ್ ಇತ್ಯಾದಿ. ಎಲ್ಲರೊಂದಿಗೆ ಕೆಲಸ ಮಾಡುವಾಗ ಹೊಸ ಅನುಭವಾಗುತ್ತದೆ. ಬಹಳಷ್ಟು ಕಲಿಯಬಹುದು. ಸೈಫ್ ಬಹಳ ಶಾಂತ ಸ್ವಭಾವದವರು. ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ. ಅವರಿಗೆ ಅದ್ಭುತ ಸೆನ್ಲ್ ಆಫ್ ಹ್ಯೂಮರ್ ಇದೆ. ನನಗೆ ಸಲ್ಮಾನ್‌ರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಾಗ ನಾನು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದೆ. ಆದರೆ ನಾನು ಗಾಬರಿಯಾಗಲಿಲ್ಲ. ಯಾವಾಗಲೂ ನನ್ನ ಆತ್ಮವಿಶ್ವಾಸ ಖಾಯಂ ಆಗಿಟ್ಟುಕೊಂಡಿದ್ದೇನೆ.
ಇದುವರೆಗಿನ ನಿಮ್ಮ ಚಿತ್ರಗಳಲ್ಲಿ ನಿಮಗೆ ಚಾಲೆಂಜಿಂಗ್ ಆಗಿದ್ದುದು ಯಾವುದು?
ಎಲ್ಲ ಚಾಲೆಂಜಿಂಗ್ ಆಗಿತ್ತು. ಏಕೆಂದರೆ ನಾವು ಸಿನಿಮಾಗಳಲ್ಲಿ ಹೇಳುವ ಡೈಲಾಗ್ ಜೊತೆ ಜೊತೆಗೆ ನ್ಯಾಚುರಲ್ ಆಗಿ ಪರ್ಫಾರ್ಮ್ ಮಾಡುವುದು ಯಾವಾಗಲೂ ಕಷ್ಟವಾಗುತ್ತದೆ.
ಯಶಸ್ಸಿಗೆ ಕೆಲವು ಟಿಪ್ಸ್ ಹೇಳಿ.
ಕರ್ಮ ಮಾಡು, ಫಲವನ್ನು ಅಪೇಕ್ಷಿಸಬೇಡ.
ನಿನ್ನ ಕೆಲಸವನ್ನು ಸದಾ ಎಂಜಾಯ್ ಮಾಡು.
ಕೆಲಸಕ್ಕೆ ಸರಿಯಾದ ಸಮಯಕ್ಕೆ ಹೋಗು. ಇನ್ನೊಬ್ಬರ ಸಮಯ, ಎನರ್ಜಿ ಮತ್ತು ಹಣಕ್ಕೆ ಗೌರವ ಕೊಡು.
ಪರಿಶ್ರಮದಿಂದ ದುಡಿ.
ನಿನ್ನ ಕೆಲಸದಲ್ಲಿ ಪೋಕಸ್ಡ್ ಆಗಿರು.
ಅನುಭವಿಗಳಿಗಿಂತ ಹೆಚ್ಚಾಗಿ ಹೊಸಬರು ಬಹಳಷ್ಟು ಕಲಿಸುತ್ತಾರೆ. ಇದನ್ನು ಯಾವಾಗಲೂ ಗಮನದಲ್ಲಿಡಿ.
ಬದುಕಿನಲ್ಲಿ ಸವಾಲುಗಳನ್ನು ಅಗತ್ಯವಾಗಿ ಎದುರಿಸಿ. ಸವಾಲುಗಳು ಇಂದು ಬೆಸ್ಟ್ ಟ್ರೇಲರ್‌ಗಳಾಗಿವೆ.
ಒತ್ತಡ ಉಂಟಾದರೆ ನಿಮ್ಮ ಮೆದುಳನ್ನು ಬ್ಲಾಕ್ ಮಾಡಿ. ಏಕೆಂದರೆ ನಿಮ್ಮ ಕೆಲಸದಲ್ಲಿ ಫನ್ ಸಿಗಬೇಕು. ಒತ್ತಡವಲ್ಲ.
ಒಂದು ವೇಳೆ ದಿನ ಜಿಮ್ ಗೆ ಹೋಗಲಾಗದಿದ್ದರೆ ದಿನದಲ್ಲಿ ಕನಿಷ್ಠ 30 ನಿಮಿಷ ಬ್ರಿಸ್ಕ್ ವಾಕ್ ಮಾಡಿ.
ಆರೋಗ್ಯಕ್ಕೆ ಆಹಾರದೊಂದಿಗೆ ನೇರ ಸಂಬಂಧವಿದೆ. ಡಯೆಟ್ ಬಗ್ಗೆ ಹೆಚ್ಚು ಗಮನ ಕೊಡಿ.
- ಜಿ. ಸುಮನಾ