ಕತ್ರೀನಾ ಈ 10 ವರ್ಷಗಳಲ್ಲಿ ಶಾರೂಖ್‌ ಖಾನ್‌, ಸಲ್ಮಾನ್‌ ಖಾನ್‌, ಹೃತಿಕ್‌ ರೋಷನ್‌, ಅಮೀರ್‌ ಖಾನ್‌ರಂತಹ ದೊಡ್ಡ ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ. ಈಕೆಯ ಸದ್ಯದ  `ಧೂಮ್’ ಸೂಪರ್‌ ಡೂಪರ್‌ ಸಕ್ಸಸ್‌ ಎನಿಸಿದೆ.

ಬಾಲಿವುಡ್‌ನ ಹಾಟ್‌ ಮತ್ತು ಬಾರ್ಬಿ ಗರ್ಲ್ ಎಂದೇ ಹೆಸರಾದ ನಟಿ ಕತ್ರೀನಾ ಕೈಫ್‌ ತನ್ನ 14ನೇ ವಯಸ್ಸಿನಿಂದ ಮಾಡೆಲಿಂಗ್‌ಆರಂಭಿಸಿದರು. ಆಗಲೇ ಅವರಿಗೆ `ಬೂಮ್’ ಚಿತ್ರದಲ್ಲಿ  ನಟಿಸು ಅವಕಾಶ ಸಿಕ್ಕಿತು. ಆದರೆ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಲಿಲ್ಲ. ಅವರಿಗೆ ಹಿಂದಿ ತಿಳಿಯದಿದ್ದರಿಂದ ನಿರ್ಮಾಪಕ ನಿರ್ದೇಶಕರು ಅವಕಾಶ ಕೊಡಲು ಹಿಂಜರಿಯುತ್ತಿದ್ದರು. ಕತ್ರೀನಾ ಬಹಳ ಕಷ್ಟಪಟ್ಟು ತಮ್ಮ ಹಿಂದಿ ಸುಧಾರಿಸಿಕೊಂಡರು.

`ಮೈನೆ ಪ್ಯಾರ್‌ ಕ್ಯೋಂ ಕಿಯಾ’ ಚಿತ್ರದಲ್ಲಿ ಕತ್ರೀನಾ ಸಲ್ಮಾನ್‌ ಖಾನ್‌ರ ಜೋಡಿ ಪ್ರಶಂಸೆಗೊಳಗಾಯಿತು. ನಂತರ `ನಮಸ್ತೆ ಲಂಡನ್‌,’ `ನ್ಯೂಯಾರ್ಕ್‌,’ `ವೆಲ್ ‌ಕಮ್’, `ರಾಜನೀತಿ’ ಚಿತ್ರಗಳು ಯಶಸ್ವಿಯಾದವು. `ತೀಸ್‌ ಮಾರ್‌ ಖಾನ್‌’ ಚಿತ್ರದ `ಶೀಲಾ ಕೀ ಜವಾನಿ….’ ಎವರ್‌ ಗ್ರೀನ್‌ ಪಾಪ್ಯುಲಾರಿಟಿ ಪಡೆಯಿತು.

ಕತ್ರೀನಾ ಈ 10 ವರ್ಷಗಳಲ್ಲಿ ಶಾರೂಖ್‌ ಖಾನ್‌, ಸಲ್ಮಾನ್‌ ಖಾನ್‌, ಹೃತಿಕ್‌ ರೋಷನ್‌, ಅಕ್ಷಯ್‌ ಕುಮಾರ್‌, ಅಮೀರ್‌ ಖಾನ್ ರಂತಹ ದೊಡ್ಡ ಸ್ಟಾರ್‌ಗಳೊಂದಿಗೆ ನಟಿಸಿದ್ದಾರೆ. ಈಕೆಯ ಸದ್ಯದ  `ಧೂಮ್’ ಸೂಪರ್‌ ಡೂಪರ್‌ ಸಕ್ಸಸ್‌ ಎನಿಸಿದೆ.

10 ವರ್ಷಗಳ ನಿಮ್ಮ ಫಿಲ್ಮೀ ಕೆರಿಯರ್‌ನಲ್ಲಿ ಎಷ್ಟು ಏರಿಳಿತವಿತ್ತು?

ಬಹಳಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಆದರೆ ಈ 10 ವರ್ಷಗಳಲ್ಲಿ ಬಹಳಷ್ಟು ಕಲಿತಿದ್ದೇನೆ! ಮೊದಲು ನಾನು ಬಹಳ ಸಂಕೋಚ ಪ್ರವೃತ್ತಿಯವಳಾಗಿದ್ದೆ. ನನ್ನ 17ನೇ ವಯಸ್ಸಿನವರೆಗೆ ಯಾರೊಂದಿಗೂ ಹೆಚ್ಚು ಮಾತಾಡುತ್ತಿರಲಿಲ್ಲ. ಆಗ ನಾನೇನೂ ಪಾಪ್ಯುಲರ್ ಆಗಿರಲಿಲ್ಲ. ಫ್ಯಾಷನ್‌ ಫೋಟೋಗ್ರಾಫರ್‌ ಅತುಲ್ ‌ಕಾಸ್ವೇಕರ್‌ ಒಮ್ಮೆ ನಿಮ್ಮ ಮುಖ ಸುಂದರವಾಗಿದೆ. ಆದರೆ ಫೋಟೋಜೆನಿಕ್ ಆಗಿಲ್ಲ, ಎಂದಿದ್ದರು. ಒಂದು ಕ್ಷಣದಲ್ಲಿ ಹೆಚ್ಚಿನ ಭಾವ ಪ್ರದರ್ಶನ ನನ್ನಿಂದ ಆಗುತ್ತಿರಲಿಲ್ಲ. ಡ್ಯಾನ್ಸ್ ಕೂಡ ಗೊತ್ತಿರಲಿಲ್ಲ, ಎಲ್ಲವನ್ನೂ ನಿಧಾನವಾಗಿ ಕಲಿತುಕೊಂಡೆ. ನಂತರ ಕ್ರಮೇಣವಾಗಿ ನನ್ನ ಕುಂದುಕೊರತೆಗಳನ್ನು ಸುಧಾರಿಸಿಕೊಂಡೆ, 10 ವರ್ಷಗಳ ದೀರ್ಘಾವಧಿಯಲ್ಲಿ ನಾನೊಬ್ಬ ಯಶಸ್ವೀ ಹೀರೊಯಿನ್‌ ಎಂಬುದನ್ನು ನಿರೂಪಿಸಿದ್ದೇನೆ.

`ಧೂಮ್’ನಲ್ಲಿ ಆ್ಯಕ್ರೋ ಬ್ಯಾಟ್‌ ಮಾಡಿದ್ದು ಹೇಗನ್ನಿಸಿತು?  ನಿಮಗೆ ಮೊದಲಿನಿಂದಲೇ ಆ್ಯಕ್ರೋ ಬ್ಯಾಟ್‌ ಗೊತ್ತಿತ್ತೇ? ಭಾರತದಲ್ಲಿ ಹೆಣ್ಣುಮಕ್ಕಳು ಆತ್ಮರಕ್ಷಣೆಗಾಗಿ ಇದನ್ನು ಕಲಿಯುವುದು ಅನಿವಾರ್ಯವೇ?

ನನ್ನ ಅಭಿಪ್ರಾಯದಲ್ಲಿ ಇಂದಿನ ಹೆಣ್ಣುಮಕ್ಕಳು ಇದನ್ನು ಕಲಿಯುವುದು ಅನಿವಾರ್ಯ. ಮಾರ್ಶಲ್ ಆರ್ಟ್‌ ಕೇವಲ ಸೆಲ್ಫ್ ಡಿಫೆನ್ಸ್ ಗಾಗಿ ಮಾತ್ರವಲ್ಲ, ಗಂಡಸರ ಆ್ಯಟಿಟ್ಯೂಡ್‌ ಬದಲಾಯಿಸುವುದಕ್ಕೂ ಸಹ.

ಒಮ್ಮೆ ನಿಮ್ಮ ಹೆಸರು ಸಲ್ಮಾನ್‌, ಮತ್ತೊಮ್ಮೆ ರಣಬೀರ್‌ ಜೊತೆ ಕೂಡಿರುತ್ತದೆ. ಇಂಥ ಕಾಂಟ್ರೊವರ್ಸಿಗಳಿಂದ ಹೇಗೆ ಹೊರಬರುತ್ತೀರಿ?

ಮೊದಲಿನಿಂದಲೂ ಸಲ್ಮಾನ್‌ ನನ್ನ ಉತ್ತಮ ಫ್ರೆಂಡ್‌, ಮುಂದೆಯೂ ಸಹ! ಎಷ್ಟೋ ಸಲ ಇಂಥ ಫ್ರೆಂಡ್‌ಶಿಪ್‌ ಹೆಚ್ಚುತ್ತಿರುತ್ತದೆ. ರಣಬೀರ್‌ ಜೊತೆ ನನಗೆಂಥ ಸಂಬಂಧ ಇಲ್ಲ. ಮೊದಲು ಇಂಥ ವಿಷಯ ಹಿಂಸೆ ತರುತ್ತಿತ್ತು, ಈಗ ಅಂಥ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ನಿಮ್ಮ ಸೌಂದರ್ಯದ ಗುಟ್ಟೇನು?

ಬೆಳಗ್ಗೆ ಎದ್ದ ತಕ್ಷಣ 4 ಗ್ಲಾಸ್‌ ನೀರು ಕುಡಿಯುತ್ತೇನೆ.

ಆಯಾ ಕಾಲದಲ್ಲಿ ಲಭ್ಯವಿರುವ ಹಣ್ಣುಗಳನ್ನು ಹೆಚ್ಚು ಸೇವಿಸುತ್ತೇನೆ. ಹಸಿರು ತರಕಾರಿ ಸಲಾಡ್‌, ಸೊಪ್ಪು ಹೆಚ್ಚು ಇಷ್ಟ.

ರೆಗ್ಯುಲರ್‌ ಆಗಿ ಯೋಗಧ್ಯಾನ ಮಾಡುತ್ತೇನೆ.

ರಾತ್ರಿ ಮಲಗುವ ಮುನ್ನ ಮೇಕಪ್‌ ತೆಗೆದು ಮಾಯಿಶ್ಚರೈಸರ್‌ ಹಚ್ಚುತ್ತೇನೆ. ಕೂದಲಿನ ಬ್ಯೂಟಿಗಾಗಿ ಆಲಿವ್ ಫ್ರೂಟ್‌ಆಯಿಲ್‌ ಸೀರಮ್ ಹಚ್ಚುತ್ತೇನೆ.

ಸದಾ ಖುಷಿಯಾಗಿರಬೇಕು, ಇದು ಎಲ್ಲಕ್ಕಿಂತ ಬಲು ಮುಖ್ಯ.

ಯಶಸ್ವಿ ಮಹಿಳೆ ಎನಿಸಲು ಏನಾದರೂ ಟಿಪ್ಸ್?

ನಿಮ್ಮ ಗುರಿಯನ್ನು ಮೊದಲೇ ನಿರ್ಧರಿಸಿ.

ಯಾವುದೇ ಸಮಸ್ಯೆ ಬಂದರೂ ಹಿಮ್ಮೆಟ್ಟಬಾರದು.

ನೀವು ಅಂದುಕೊಂಡಂತೆ ನಿಮಗೆ ಫೇವರೆಬಲ್ ಆಗಿ ಕೆಲಸಗಳು ಸಲೀಸಾಗಿ ನಡೆಯುತ್ತಿಲ್ಲವಾದರೆ ತಕ್ಷಣ ನಿಮ್ಮ ಗುರಿ ಬದಲಾಯಿಸಿ.

ಸದಾ ಮುಂದುವರಿಯುತ್ತಿರಿ, ನಿಮ್ಮ ಮನಸ್ಸು ಸದಾ ಶಾಂತವಾಗಿರಲಿ.

– ಜಿ. ಸುಮನಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ