ಅಚ್ಚ ಕನ್ನಡತಿಯಾದ ರೂಪಿಕಾ ಮೂಲತಃ ಭರತನಾಟ್ಯ ಪಟು. `ಚೆಲುವಿನ ಚಿಲಿಪಿಲಿ' ಚಿತ್ರದಿಂದ ಕನ್ನಡಿಗರಿಗೆ ಪರಿಚಿತಳಾದ ರೂಪಿಕಾ, ಹಲವಾರು ಉತ್ತಮ ಚಿತ್ರಗಳಲ್ಲಿ ನಟಿಸಿ ಎಲ್ಲರಿಂದ ಸೈ ಎನಿಸಿಕೊಂಡು ಇಂದು ತೆಲುಗು ಚಿತ್ರರಂಗದಲ್ಲೂ ಬಿಝಿ ಆಗಿರುವಂಥ ಅಪರೂಪದ ದಕ್ಷಿಣ ಭಾರತದ ನಟಿ. `ಗೆಜ್ಜೆ' ನೃತ್ಯ ಶಾಲೆ ನಡೆಸುತ್ತಿರುವ ರೂಪಿಕಾ ತನ್ನ ಕೆರಿಯರ್‌ ಬಗ್ಗೆ ಏನು ಹೇಳುತ್ತಾಳೆ......?

ಖ್ಯಾತ ನಿರ್ದೇಶಕ ಎಸ್‌. ನಾರಾಯಣ್‌ ಅವರಿಂದ ಪರಿಚಿತಳಾದ ರೂಪಿಕಾ `ಚೆಲುವಿನ ಚಿಲಿಪಿಲಿ' ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಂತಹ ನಟಿ. ಅಲ್ಲಿಂದ ಶುರುವಾಯಿತು ಸಿನಿಮಾ ಜರ್ನಿ. ಅವಕಾಶಗಳಿಗಾಗಿ ನಿರ್ಮಾಪಕರ ಕಛೇರಿ ಬಾಗಿಲು ತಟ್ಟದೇ ತನ್ನ ಬಳಿಗೆ ಬಂದ ಚಿತ್ರಗಳಲ್ಲಿ ಪಾತ್ರ ಇಷ್ಟವಾದಾಗ ಮಾತ್ರ ಒಪ್ಪಿಕೊಂಡಳು. `ಕಾಲ್ಗೆಜ್ಜೆ' ಚಿತ್ರದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿದಳು. ನೃತ್ಯಪಟು ಆಗಿದ್ದರಿಂದ ಅಲ್ಲಿಯೂ ಸೈ ಎನಿಸಿಕೊಂಡಳು. ತುಳು ಸಿನಿಮಾದಲ್ಲಿ ನಟಿಸಿದಳು. `ನವರಂಗಿ' ಚಿತ್ರದಲ್ಲೂ ಗಮನ ಸೆಳೆದಳು.

ಮೂಲತಃ ಭರತನಾಟ್ಯ ಪಟುವಾಗಿದ್ದರಿಂದ ಸಿನಿಮಾಗೆ ಬರುವುದಕ್ಕೆ ಅದೂ ಒಂದು ಕಾರಣ. ಕನ್ನಡದ ಹುಡುಗಿಯಾಗಿ ಕನ್ನಡತನವನ್ನು ತೆರೆ ಮೇಲೂ ಉಳಿಸಿಕೊಂಡಿರುವ ರೂಪಿಕಾ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಇಮೇಜ್‌ ಪಡೆದಿದ್ದಾಳೆ.

ನಟಿಯಾದರೂ ನೃತ್ಯವನ್ನು ಮರೆತಿಲ್ಲ. ತನ್ನಲ್ಲಿರುವ ಕಲೆಯನ್ನು ಎಲ್ಲರಿಗೂ ಹಂಚಬೇಕೆಂದು `ಗೆಜ್ಜೆ' ಎನ್ನುವ ನೃತ್ಯ ಶಾಲೆಯನ್ನು ಸ್ಥಾಪಿಸಿದ್ದಾಳೆ. `ನಾನಿಂದು ಅಷ್ಟು ಇಷ್ಟು ಏನೇ ಹೆಸರು ಮಾಡಿದ್ದರೂ ಅದು ನೃತ್ಯ ಕಲೆಯಿಂದ. ಅದೇ ನನ್ನ ಬದುಕು, ಗುರಿ. ನನ್ನ ಈ ಬೆಳವಣಿಗೆಗೆ ನನ್ನ ಕುಟುಂಬದ ಸಹಕಾರ ತುಂಬಾ ಇದೆ ಎನ್ನುತ್ತಾಳೆ ರೂಪಿಕಾ.

`ಗೆಜ್ಜೆ' ಶಾಲೆಯಲ್ಲಿ ಭರತನಾಟ್ಯ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಫಿಲ್ಮ್ ಡ್ಯಾನ್ಸ್, ನಾಟಕಾಭಿನಯ ಹೀಗೆ ಅನೇಕ ರೀತಿಯ ತರಬೇತಿ ನೀಡಲಾಗುತ್ತದೆ. ಈ ಕಲಾ ಸೇವೆಗಾಗಿ ಸಾಕಷ್ಟು ಪ್ರಶಸ್ತಿಗಳು ಲಭಿಸಿವೆ. ಚಾಮರಾಜಪೇಟೆಯಲ್ಲಿರುವ ತಮ್ಮ ಮನೆಯಲ್ಲೇ `ಗೆಜ್ಜೆ' ಸ್ಟುಡಿಯೋ ತೆರೆದಿರುವ ರೂಪಿಕಾ ನೃತ್ಯ ಕಲಿಯಬೇಕು ಎಂದು ಆಸಕ್ತಿ ವಹಿಸಿ ಬಂದವರನ್ನು ಪ್ರೀತಿಯಿಂದ ಸ್ವಾಗತಿಸುತ್ತಾಳೆ.

ಇನ್ನು ನಟನೆ ವಿಷಯಕ್ಕೆ ಬರೋದಾದರೇ ರೂಪಿಕಾಳ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ನಾನು ಒಪ್ಪಿಕೊಂಡಿರುವ ಚಿತ್ರಗಳೆಲ್ಲ ಒಂದಕ್ಕಿಂತ ಒಂದು ಭಿನ್ನ. `ಮಂಜರಿ' ಚಿತ್ರದಲ್ಲಿ ಹಾರರ್‌ ಇತ್ತು. `ರುದ್ರಾಕ್ಷಿಪುರ' ಚಿತ್ರದಲ್ಲೂ ವಿಭಿನ್ನ ಶೈಲಿಯ ಪಾತ್ರ. ಡಾಕ್ಟರ್‌, ಪೊಲೀಸ್‌ ಎಲ್ಲಾ ಪಾತ್ರಗಳೂ ನನ್ನ ಪಾಲಿಗೆ ಸಿಕ್ಕಿವೆ. ಈಗ ಮೂರು ತೆಲುಗು ಚಿತ್ರ ಬಿಡುಗಡೆಗೆ ಸಿದ್ಧಾಗಿವೆ.

`ಟೂ ಪ್ಲಸ್‌ ಒನ್‌' ಚಿತ್ರದಲ್ಲಿ ತೆಲುಗು ಚಿತ್ರರಂಗದಲ್ಲಿನ ಖ್ಯಾತ ಹಾಸ್ಯ ನಟ ಶುಲ್ಕ ಶಂಕರ್‌ ನಾಯಕ. ಇನ್ನೊಂದು ಚಿತ್ರದಲ್ಲಿ ಡಮರುಗಂ ಶಂಕರ್‌ ಜೊತೆ ನಟಿಸುತ್ತಿದ್ದೇನೆ. ಕನ್ನಡದಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ರ ಟೆಂಟ್‌ ಸಿನಿಮಾ ಪ್ರೊಡಕ್ಷನ್‌ನ `ಡೈಮಂಡ್‌ ಕ್ರಾಸ್‌' ಚಿತ್ರದಲ್ಲೂ ನಟಿಸಿದ್ದೇನೆ. ಇತ್ತೀಚೆಗೆ `ಥರ್ಡ್‌ ಕ್ಲಾಸ್‌' ಚಿತ್ರ ಅತ್ಯಂತ ಖುಷಿ ಕೊಟ್ಟಂತಹ ಚಿತ್ರ. ಯಶಸ್ಸು ಜೊತೆಗೆ ಪ್ರಶಂಸೆ ಪಡೆಯಿತು.

ರೂಪಿಕಾ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದು, ಮಜಾ ಟಾಕೀಸ್‌ ಕಾಮಿಡಿ ಶೋನಲ್ಲಿ ಅದು ತುಂಬಾ ಬದಲಾದ ರೂಪದಲ್ಲಿ. ರೂಪಿಕಾಳಲ್ಲಾದ ಬದಲಾವಣೆ ಕಂಡು ಆಶ್ಚರ್ಯವಾಗಿತ್ತು. ಮೊದಲಿಗಿಂತಲೂ ತೆಳ್ಳಗೆ, ಸ್ಲಿಮ್ ಆಗಿ, ಸುಂದರವಾಗಿ ಕಂಡಾಗ ಇದೇನಿದು ಈ ದಿಢೀರ್‌ ಮೇಕ್‌ ಓವರ್‌ ಅಂತ ಎಲ್ಲರೂ ಪ್ರಶ್ನಿಸಿದರು. ಅದೆಲ್ಲವನ್ನೂ ರೂಪಿಕಾ ನಮ್ಮೊಂದಿಗೆ ಹಂಚಿಕೊಂಡಿದ್ದಾಳೆ.`

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ