ಶರತ್ ಚಂದ್ರ

ಭಾರತ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಕಾಂತಾರ ಪ್ರಿಕ್ವೆಲ್ ವರ್ಷಗಳಿಂದ ದೊಡ್ಡ ಸದ್ದು ಮಾಡುತ್ತಿದ್ದು, ಕೊನೆಗೂ ಬಿಡುಗಡೆಯ ಹಂತಕ್ಕೆ ಬಂದಿದೆ. ರಿಷಬ್ ಶೆಟ್ಟಿಯವರ ಸುಮಾರು ಎರಡು ವರ್ಷದ ಪರಿಶ್ರಮ ಅಕ್ಟೋಬರ್ ಎರಡರಂದು ಸೆರೆಯ ಮೇಲೆ ಕಾಣಲಿದೆ.

ಶೂಟಿಂಗ್ ಗೆ ಸಂಬಂಧಪಟ್ಟಂತೆ ಸಾಕಷ್ಟು ಗೌಪ್ಯವನ್ನು ಕಾಪಾಡಿಕೊಂಡು ಬಂದಂತಹ ರಿಷಬ್ ಶೆಟ್ಟಿ, ಚಿತ್ರದ ಆರಂಭದಿಂದಲೂ ಸಿನಿಮಾದ ಹಲವು ವಿಷಯಗಳು ಬಗ್ಗೆ ಕುತೂಹಲ ಮೂಡಿಸಿದ್ದರು.

1000630222

ಶೂಟಿಂಗ್ ಮುಗಿದರೂ ಕೂಡ ಚಿತ್ರದ ನಾಯಕಿ ಯಾರೆಂಬ ಸುಳಿವು ಎಲ್ಲೂ ಬಿಟ್ಟು ಕೊಟ್ಟಿರಲಿಲ್ಲ. ಚಿತ್ರದ ಚಿತ್ರೀಕರಣ ಆರಂಭವಾ ದ ದಿನದಿಂದಲೂ ರುಕ್ಮಿಣಿ ವಸಂತ್ ನಾಯಕಿ ಪಾತ್ರವನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.

ಇತ್ತೀಚಿಗೆ ಬಿಡುಗಡೆಯಾದ ಮೇಕಿಂಗ್ ವಿಡಿಯೋದಲ್ಲಿ ಕೂಡ, ಕೆಲವರು ರುಕ್ಮಿಣಿ ವಸಂತ್ ಕಾಣಿಸಿಕೊಂಡಿರುವ ಬಗ್ಗೆ ವಿಡಿಯೋದಲ್ಲಿ ಸರ್ಕಲ್ ಗುರುತು ಹಾಕಿ, ರುಕ್ಮಿಣಿ ವಸಂತ ಅಭಿನಯಿಸಿರುವ ಬಗ್ಗೆ ಪುರಾವೆ ಒದಗಿಸಿದ್ದರು.

1000630220

ಇಂದು ಈ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ವರಮಹಾಲಕ್ಷ್ಮಿ ಹಬ್ಬದ ಈ ಶುಭದಿನದಂದು ಹೊಂಬಾಳೆ ಸಂಸ್ಥೆಯು ತಮ್ಮ instagram ಖಾತೆಯಲ್ಲಿ  ಕಾಂತಾರ ಭಾಗ-1 ಚಿತ್ರದ ನಾಯಕಿಯ ಫಸ್ಟ್  ಲುಕ್ ಬಿಡುಗಡೆ

ಮಾಡಿದೆ.

1000630133

ಎಲ್ಲರ ಊಹೆಯ ಪ್ರಕಾರ ರುಕ್ಮಿಣಿ ವಸಂತ್ ನಾಯಕಿ ಆಗಿ ಅಭಿನಯಿಸಿದ್ದು, ಕನಕವತಿ ಹೆಸರಿನ ಪಾತ್ರವನ್ನು ಮಾಡುತ್ತಿದ್ದಾರೆ. ಬಹುಷಃ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ರುಕ್ಮಿಣಿ ವಸಂತ್ ಅವರ  ಲುಕ್ ತುಂಬಾ ಎಲಿಗೆಂಟ್ ಆಗಿದ್ದು, ಅವರ ಪಾತ್ರದ ಬಗ್ಗೆ ಕುತೂಹಲ ಮೂಡಿಸಿದೆ.

ಈ ಹಿಂದೆ ಹೊಂಬಾಳೆ ಫಿಲಂ ಪ್ರೊಡಕ್ಷನ್    ನಲ್ಲಿ ಮೂಡಿ ಬಂದಿರುವ 'ಬಘೀರಾ 'ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರುಕ್ಮಿಣಿ ವಸಂತ್ ಗೆ ಹೊಂಬಾಳೆ ಬ್ಯಾನರ್ ನಲ್ಲಿ ಇದು ಎರಡನೇ ಸಿನಿಮಾ.

ರುಕ್ಮಿಣಿ ವಸಂತ್ ಈಗಾಗಲೇ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಹಾಗೂ ಕಾಂತಾರ ಭಾಗ-1 ಪ್ಯಾನ್  ಇಂಡಿಯಾ ಸಿನಿಮಾ ಕೂಡ ಆಗಿರುವುದರಿಂದ ಎಲ್ಲಾ ಭಾಷೆಗಳ ಪ್ರೇಕ್ಷಕರಿಗೆ ಇಷ್ಟ ವಾಗಬಹುದು ಎನ್ನುವ ಲೆಕ್ಕಾಚಾರ ಕೂಡ ಹೊಂಬಾಳೆ  ಸಂಸ್ಥೆಯದಾ ಗಿದೆ.

 

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ